ಕಾಂಗ್ರೆಸ್ ಬಿಜೆಪಿ ಕುತಂತ್ರ ರಾಜಕೀಯದಿಂದ ಜೆಡಿಎಸ್ ಸೋಲು : ನರಿಬೋಳ

ಜೇವರ್ಗಿ :ಮೇ.18: ಕ್ಷೇತ್ರದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಡ್ಡ ದಾರಿಯಿಂದ, ಹಣ ಬಲದಿಂದ ಗೆಲುವು ಸಾದಿಸಿದೆ ಹೊರತು ಜನಬಲದಿಂದ ಅಲ್ಲ. ಕಾಂಗ್ರೆಸ್ ಬಿಜೆಪಿ ಯ ಕುತಂತ್ರದಿಂದ ಜೆಡಿಎಸ್ ಸೋಲಾಗಿದೆ ಜನರ ಪ್ರತೀಯಿಂದಲ್ಲ ಎಂದು ಜೆಡಿಎಸ್ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಅಭಿಮತಪಟ್ಟರು.

ಪಟ್ಟಣದ ಬೂತಪೂರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಸಂಜೆ ಜೆಡಿಎಸ್ ಕಾರ್ಯಕರ್ತರ ಅಭಿನಂದನೆ ಸಭೆಯನ್ನು ಹಮ್ಮಿಕೊಳಲ್ಲಾಗಿತ್ತು.

ಕಾರ್ಯಕರ್ತರನ್ನುದ್ದೆಶಿಸಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ ಜೇವರ್ಗಿಯ ಚುನಾವಣೆಯಲ್ಲಿ ಹಣಬಲ ಗೆಲವು ಸಾಧಿಸಿದೆ, ಜನಬಲ ಮತ್ತು ಸ್ವಾಭಿಮಾನ ಸೋಲು ಅನುಭವಿಸಿದೆ. ಮುಂದಿನ ದಿನಮಾನದಲ್ಲಿ ನಮ್ಮ ಕುಟುಂಬ ಸದಾಕಾಲ ತಮ್ಮ ಸೇವೆ ಮಾಡಲು ಸಿದ್ದವಿದೆ, ಯಾವುದೇ ರೀತಿಯಿಂದ ಕಾರ್ಯಕರ್ತರು ಭಯ ಪಡುವ ಅವಶ್ಯಕತೆ ಇಲ್ಲ.

ನಮ್ಮನ ನಾವು ಇವತ್ತು ಅತ್ಮಾವಲೋಕನ ಮಾಡಿಕೊಳಬೇಕು. ನಮ್ಮ ಸೋಲಿಗೆ ವಿರೋಧ ಪಕ್ಷದವರ ಕುತಂತ್ರವೆ ಕಾರಣ. ಸೋಲು ಗೆಲುವು ಎರಡು ಇದ್ದದೆ, ಆದರೆ ನಮ್ಮ ಕುಟುಂಬದ ಮೇಲೆ ತಾಲೂಕಿನ ಜನರು ಇಷ್ಟು ಪ್ರೀತಿ, ವಿಶ್ವಾಸ ತೋರಿದ್ದಾರೆ ಅದಕ್ಕೆ ನಾವು ಚಿರರುಣಿ. ವಿಧಾನಸಭೆ ಚುನಾವಣೆಯಲ್ಲಿ ಅಭ್ಯರ್ಥಿ ನಾನಲ್ಲ ನೀವು ಎಂದು ಹೆಳಿದ್ದೆ, ಅದರಂತೆ ಮುಂಬರು ಚುನಾವಣೆಗಳಲ್ಲಿ ಮುಂದೆ ನಿಂತು ನಿಮ್ಮನ ಗೆಲ್ಲಿಸೊದು ನಮ್ಮ ಕರ್ತವ್ಯ. ತಾಲೂಕಿನ ಅಭಿವೃದ್ದಿಗೆ ಹಿಚ್ಚಿನ ಮಹತ್ವವನ್ನು ನೀಡೊಣ. ಸರಕಾರಕ್ಕೆ ಕೆಲವು ತಿಂಗಳು ಸಮಯವನ್ನು ನೀಡೊಣ ನಂತರ ಸಮಸ್ಯೆಗಳ ಬಗ್ಗೆ ಹೋರಾಟ ಮಾಡೋಣ ಎಂದರು.

ಬಾಕ್ಸ್ : ಕಾರ್ಯಕರ್ತರರನ್ನುದ್ದೆಶಿಸಿ ಮಾತನಾಡುವಾಗ ಮತ್ತೆ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಭಾವುಕರಾಗಿ ಕಣ್ಣಿರು ಹಾಕಿದರು. ಅಳಬೇಡಿ ಗೌಡ್ರೆ ನಿಮ್ಮ ಜೋತೆ ನಾವಿದ್ದೆವೆ ಎಂದು ಕಾರ್ಯಕರ್ತರು ದೈರ್ಯತುಂಬಿದರು.

ಈ ಸಂದರ್ಭದಲ್ಲಿ ರೌಫ ಹವಾಲ್ದಾರ, ಗೋಲ್ಲಾಳಪ್ಪ ಕಡಿ, ರಮೇಶ ಬಾಬು ವಕೀಲ್, ದಂಡಪ್ಪ ಸಾಹು ಕುಳಗೇರಿ, ಭೀಮಾಶಂಕರ ಕಟ್ಟಿಸಂಗಾವಿ, ಎಸ್ ಎಸ್ ಸಲಗಾರ, ಬಸವರಾಜ ಪಾಟೀಲ್ ನರಿಬೋಲ, ಮೈಬುಬ್ ಚನ್ನೂರ, ಸುಭಾಷ ಹೊಸ್ಮನಿ, ಪುಂಡಲಿಕ ಗಾಯಕವಾಡ್, ಶಿವಾನಂದ ದ್ಯಾಮಗೊಂಡ, ಮಾದೇವಪ್ಪ ದೇಸಾಯಿ, ರಕುಂ ಪಟೇಲ್, ಬಸವರಾಜ ಹುಗ್ಗಿ, ಕ್ರೀಷ್ಣಾ, ರಾಠೋಡ, ಸುರೇಶ ಡುಗನ್ಕರ್, ವಿಶ್ವರಾಧ್ಯ ಕೊಡಚಿ, ಚನ್ನಬಸಪ್ಪ ಕಾಚಾಪೂರ, ಮೌನೇಶ ಹಂಗರಗಿ ಇದ್ದರು.