ಕಾಂಗ್ರೆಸ್ ಬಾವುಟ ಹಾರಿಸುವುದು ಖಚಿತ: ಇನಾಮದಾರ

ಚನ್ನಮ್ಮನ ಕಿತ್ತೂರ, ನ 13: ನಾನು ಶಾಸಕನಿದ್ದಾಗ ಕಿತ್ತೂರ ಕ್ಷೇತ್ರಕ್ಕೆ ಸಾಕಷ್ಟು ಅಭಿವೃದ್ದಿ ಕೆಲಸ ಮಾಡಿದ್ದೇನೆ ಎಂದು ಮಾಜಿ ಸಚಿವ ಡಿ.ಬಿ. ಇನಾಮದಾರ ಹೇಳಿದರು.
ಸಮೀಪದ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿದ ಅವರು ನನ್ನ ಅವಧಿಯಲ್ಲಿ ತಾಲೂಕ ಘೋಷಣೆಯಾಗಿದ್ದು ಆಡಳಿತ ಸೌಧದ ಕಟ್ಟಡ ಕಟ್ಟಲು ಅನುಮತಿ ನೀಡಿದ್ದು ಅದು ನಾಲ್ಕು ವರ್ಷ ಕಳೆದರು ಉದ್ಘಾಟನೆಗೊಳ್ಳಲಿಲ್ಲ. ಇದು ಬಿಜೆಪಿ ಸರ್ಕಾರದ ಕೊಡುಗೆ ಎಂದು ಜನ ಬೇಸತ್ತು ನನ್ನನ್ನು ಮತ್ತೇ ಚುನಾವಣೆಗೆ ಸ್ಪರ್ಧಿಸುವಂತೆ ಹೇಳುತ್ತಿದ್ದಾರೆ ಎಂದರು.
ನನ್ನ ಅವಧಿಯಲ್ಲಿ ಮಂಜೂರಾದ ಕೆಲಸ ಮುಂದುವರೆಸಿಕೊಂಡು ಅವುಗಳನ್ನು ನಾವೇ ಮಾಡಿದ್ದೇವೆಂದು ಇಂದಿನ ಸರ್ಕಾರ ಸುಳ್ಳು ಹೇಳುತ್ತಿದೆ. ನನ್ನ ಅವಧಿಯಲ್ಲಿ 250 ಕೋಟಿ ರೂ. ವೆಚ್ಚದ ಕೆರೆ ತುಂಬುವ ಯೋಜನೆ ಪೂರ್ಣಗೊಂಡಿಲ್ಲ. ಹಣ ಎಲ್ಲಿ ಹರಿದು ಹೋಗಿದೆ. ಇದನೆಲ್ಲಾ ಅರಿತ ಜನ 40% ಕಮಿಷನ್ ಸರ್ಕಾರವೆಂದು ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.
ಕ್ಷೇತ್ರದಲ್ಲಿ ಸಂಚರಿಸಿ ಅಭಿಪ್ರಾಯ ಪಡೆದುಕೊಂಡಿದ್ದು, ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಟಿಕೇಟ ತರುವ ಕೆಲಸ ನೀವು ಮಾಡಿ ನಿಮ್ಮನ್ನು ಗೆಲ್ಲಿಸುವ ಕೆಲಸ ನಮ್ಮದು ಎಂದು ಜನತೆ ಹೇಳಿದ್ದಾರೆ. ಅದಕ್ಕಾಗಿ ಬೆಂಗಳೂರಿಗೆ ತೆರಳಿ ಟಿಕೇಟಿಗಾಗಿ ಅರ್ಜಿ ಸಲ್ಲಿಸುತ್ತಿದ್ದೇನೆ. ಟಿಕೇಟ್ ತರುವಲ್ಲಿ ಗೊಂದಲವಿಲ್ಲ. ಮತ್ತೇ ಕಿತ್ತೂರ ಕ್ಷೇತ್ರಕ್ಕೆ ಚುನಾವಣೆಗೆ ಸ್ಪರ್ಧಿಸಿ ಕಾಂಗ್ರೆಸ್ ಬಾವುಟ ಹಾರಿಸುವುದು ಖಚಿತವೆಂದರು.
ಈ ಸಂದರ್ಭಲ್ಲಿ ಅಲ್ಪ ಸಂಖ್ಯಾಂತರ ಘಟಕ ರಾಜ್ಯ ಕಾರ್ಯದರ್ಶಿ ಮಹಮ್ಮದ ಹನೀಫ್ ಸುತಗಟ್ಟಿ, ಕುಲವಳ್ಳಿ ಗ್ರಾ.ಪಂ. ಅಧ್ಯಕ್ಷ ಭೀಷ್ಟಪ್ಪ ಶಿಂಧೆ, ಮಾಜಿ ತಾ.ಪಂ. ಅಧ್ಯಕ್ಷ ನಿಂಗಪ್ಪ ತಡಕೋಡ, ಪಿಕೆಪಿಎಸ್ ಕಿತ್ತೂರ ಮಾಜಿ ಅಧ್ಯಕ್ಷ ಉದಯ ಇಂಗಳೆ, ಮುಖಂಡರುಗಳಾದ ರಾಜು ಇನಾಮದಾರ, ನ್ಯಾಯವಾದಿ ಸತೀಶ ಒಳಸಂಗ, ಅರುಣ ಬಿಕ್ಕಣ್ಣವರ, ಸಂಜು ಲೋಕಾಪೂರ, ಸುನೀಲ್ ಬಜನ್ನವರ, ದೇವುಗೌಡ ಪಾಟೀಲ, ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.