ಕಾಂಗ್ರೆಸ್ ಪ.ಜಾ ವಿಭಾಗ ಪದಾಧಿಕಾರಿಗಳ ಪದಗ್ರಹಣ

ಚಿಂಚೋಳಿ ಜು 17: ಪಟ್ಟಣದ ಹಾರಕೂಡ ಚನ್ನಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಚಿಂಚೋಳಿ ವಿಧಾನಸಭಾ ಮತಕ್ಷೇತ್ರದ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಕಾಳಗಿ, ಅವರು ಉದ್ಘಾಟಿಸಿದರು .ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾಂಗ್ರೆಸ್ ಪರಿಶೀಷ್ಟ ಜಾತಿ ವಿಭಾಗದ ಅಧ್ಯಕ್ಷ ಮಹಾಂತಪ್ಪ ಸಂಗಾವಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭೀಮರಾವ್ ಟಿ, ಟಿ, ಮಹೀಮೂದ ಪಟೇಲ್ ಸಸಾರಗಾಂವ, ಚಿಂಚೋಳಿ ಕಾಂಗ್ರೆಸ್ ಮುಖಂಡ ಸುಭಾಷ್ ವ್ಹಿ. ರಾಠೋಡ, ಕಾಳಗಿ ಕೊಡ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ದೇವೇಂದ್ರಪ್ಪ ಹೆಬ್ಬಾಳ ಸಾಲಹಳ್ಳಿ, ಇವರ ಉಪಸ್ಥಿತರಿದ್ದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಆರ್. ಮಲಿ ವಹಿಸಿದ್ದರು.68 ಜನರಿಗೆ ಚಿಂಚೋಳಿ ಬ್ಲಾಕ್ ಪರಿಶಿಷ್ಟ ಜಾತಿ ವಿಭಾಗದ ಪದಾಧಿಕಾರಿಗಳಾಗಿ ನೇಮಕ ಮಾಡಿ ಆದೇಶ ಪತ್ರ ನೀಡಿ ಮಾತನಾಡಿದ ಜಿಲ್ಲಾ ಅಧ್ಯಕ್ಷ ಜಗದೇವ ಗುತ್ತೇದಾರ ರವರು ಶಿಸ್ತಿನಿಂದ ಪಕ್ಷ ಸಂಘಟನೆ ಮಾಡಬೇಕೆಂದು ಹೇಳಿದರು ಕಾಂಗ್ರೆಸ್ ಪಕ್ಷದ ಮುಖಂಡ ಸುಭಾಷ ರಾಠೋಡ, ಅವರು ಮಾತನಾಡಿ ಮೀಸಲು ಕ್ಷೇತ್ರದಿಂದ ಗೆದ್ದ ಶಾಸಕ ಸಂಸದರು ತಳಸಮುದಾಯದ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆಡಳಿತ ಪಕ್ಷದ ಮೇಲೆ ಹರಿ ಹಾಯ್ದರು, ಭೀಮರಾವ್ ಟಿ. ಟಿ. ಕನಿರಾಮ ರಾಠೋಡ, ಮಹಾಂತಪ್ಪ ಸಂಗಾವಿ, ಕೂಡ ಮಾತನಾಡಿದರು ಈ ಸಂದರ್ಭದಲ್ಲಿ ಚಿಂಚೋಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಜಿ ಅಧ್ಯಕ್ಷ ಅನೀಲ್ ಜಮಾದಾರ, ಜಿ ಪಂ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ, ಹಿಂದುಳಿದ ವಿಭಾಗ ಅಧ್ಯಕ್ಷ ಸುರೇಶ ಭಂಟಾ, ಮಹಿಳಾ ಘಟಕದ ಅಧ್ಯಕ್ಷೆ ಈರಮ್ಮ ಸಂಗಯ್ಯ ಸ್ವಾಮಿ, ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾಗೇಶ ಗುಣಾಜಿ, ಮುಖಂಡರುಗಳಾದ ರಾಜೇಂದ್ರ ನಿಂಗದಳ್ಳಿ, ಶರಣು ತೆಗನೂರ, ಮಲ್ಲಿಕಾರ್ಜುನ ನೇಲೂರ್, ಶಂಕರ ಸುತಾರ್, ದೇವರಾಜ ನಾಯಕ, ರೇವಣಸಿದ್ಧಪ್ಪ ಅರಣಕಲ್, ಮಲ್ಲಿಕಾರ್ಜುನ ಭೂಶೆಟ್ಟಿ, ಡಾ. ತುಕಾರಾಮ ಪವಾರ್, ರಾಜೇಂದ್ರ ದೇಗಲ್ಮಡಿ, ಜಗನ್ನಾಥ ಪೂಜಾರಿ, ಜಗನ್ನಾಥ ಇದಲಾಯಿ, ಹುಸೇನ್ ಸಾಬ್, ಗೋವಿಂದ ರಾಠೋಡ, ಆನಂದ ಜಾಧವ, ಶೇಖ ಫರಿದ, ಮಲ್ಲಪ್ಪ ವಾಡಿ, ಸಾಬಣ್ಣ ಮಾಸ್ಟರ್, ವೆಂಕಟೇಶ್ ಮಂತಂಗೊಂಡ, ಪಾರ್ವತಿ ಪೆÇೀಲಕಪಳ್ಳಿ, ನಾಗಮಣಿ ಮರಪಳ್ಳಿ, ಸೋಮಶೇಖರ್ ಕರಕಟಿ, ಹಿರಾಸಿಂಗ್ ಜಾಧವ, ನರಸಪ್ಪ ಘಾನಾಪ್ಪುರ, ಮಲ್ಲು ಸಾಹುಕಾರ್ ಭೇಡಸುರ ಮತ್ತು ಅನೇಕ ಮುಖಂಡರು ಉಪಸ್ಥಿತರಿದ್ದರು. ವಕ್ತಾರ ಶರಣು ಪಾಟೀಲ ಕಾರ್ಯಕ್ರಮ ನಿರೂಪಿಸಿದರು ಸಂತೋಷ ಗುತ್ತೇದಾರ ಸ್ವಾಗತಿಸಿ, ಚಿತ್ರಶೇಖರ ಪಾಟೀಲ್ ವಂದಿಸಿದರು