ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗ ದಳ ನಿಷ್ಭೆಧ: ಹಿಂದೂ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ, ಮೇ.05- ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭಜರಂಗದಳವನ್ನು ನಿಷೇಧಿಸುವುದಾಗಿ ತಿಳಿಸಿರುವ್ಯದನ್ನು ಖಂಡಿಸಿ ವಿಶ್ವಹಿಂದೂ ಪರಿಷತ್, ಭಜರಂಗದಳ ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು.
ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಸ್ಭೆರಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಈ ವೇಳೆ ಮಾತನಾಡಿದ ಭಜರಂಗದಳದ ಕ್ಷೇತ್ರ ಸಂಚಾಲಕರಾದ ಕೇಶವ್ ಅವರು, ಸೇವೆ, ಸಂಸ್ಕಾರ, ಸುರಕ್ಷೆ ಧೈಯವನ್ನು ಇಟ್ಟುಕೊಂಡಿರುವ ಭಜರಂಗದಳವನ್ನು ಅಧಿಕಾರಕ್ಕೆ ಬಂದರೆ ನಿಷೇಧಿಸುವುದಾಗಿ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಘೋಷಿಸಿರುವುದು ತೀವ್ರ ಖಂಡನೀಯ ತಿಳಿಸಿದರು.
ಹಿಂದು ಪರವಾಗಿ ಕೆಲಸ ಮಾಡುವ ಸಂಘಟನೆಗಳನ್ನು ಹಾಗೂ ಭಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳೀಕೆಯಲ್ಲಿ ತಿಳಿಸಿದೆ. ಸಮಸ್ತ ಹಿಂದೂ ಸಮಾಜ ಈ ಪ್ರಣಾಳಿಕೆಯನ್ನು ವಿರೋಧಿಸುತ್ತದೆ.
ಭಜರಂಗದಳ ಪಿಎಫ್‍ಐ ಮಾದರಿಯ ಯಾವುದೇ ರಾಷ್ಟ್ರ ವಿರೋಧಿ ಸಂಘವಲ್ಲ. ದೇಶಕ್ಕಾಗಿ ಪ್ರಾಣವನ್ನೇ ಕೊಡಬಲ್ಲಂತಹ ಸಂಘಟನೆ ಭಜರಂಗದಳ. ಕೊರೋನ ಸಂದರ್ಭದಲ್ಲಿ ಸಾವಿರಾರು ರೋಗಿಗಳಿಗೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಸೇವೆಯನ್ನು ಸಲ್ಲಿಸಿದ್ದಾರೆ. 1500 ಕ್ಕೂ ಹೆಚ್ಚು ಕೊರೋನದಿಂದ ಮೃತಪಟ್ಟ ಅನಾಥ ರೋಗಿಗಳ ಅಂತ್ಯಸಂಸ್ಕಾರ ಮಾಡಿರುತ್ತಾರೆ. ಆಹಾರ ಪೊಟ್ಟಣ ಸರಬರಾಜು ಮಾಡಿದರು. ಹಣ್ಣು ಹಂಪಲುಗಳನ್ನು ನೀಡಿದರು. ಆಸ್ಪತ್ರೆಯಲ್ಲಿ ಸಿಬ್ಬಂದಿಗಳ ಕೊರತೆ ಇದ್ದ ಸಂದರ್ಭದಲ್ಲಿ ಸಿಬ್ಬಂದಿಗಳ ಜೊತೆಯಲ್ಲಿ ನಿಂತು ಭಜರಂಗದಳ ಕಾರ್ಯಕರ್ತರು ಕಾರ್ಯ ನಿರ್ವಹಿಸಿರುತ್ತಾರೆ.
ಇದು ಒಂದು ಮುಸ್ಲಿಂ ಒಲೈಕೆಯ ಪ್ರಣಾಳಿಕೆ. ಅಧಿಕಾರಕ್ಕೆ ಬಂದರೆ, ಗೋಹತ್ಯೆ ನಿಷೇಧ ಕಾಯಿದೆ, ಟಿಪ್ಪು ಜಯಂತಿ ಪುನರ್ ಆಚರಿಸುತ್ತೇವೆ ಎಂದು ಕಾಂಗ್ರೆಸ್‍ನವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಹೊರಡಿಸಿರುತ್ತಾರೆ ಕೂಡಲೇ ಪ್ರಣಾಳಿಕೆಯಲ್ಲಿ ಈ ಅಂಶವನ್ನು ತೆಗೆದುಹಾಕಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ಕೇಶವ್ ಅವರು ತಿಳಿಸಿದರು.
ವಿಶ್ವಹಿಂದೂ ಪರಿಷತ್ ಮುಖಂಡ ರಾ. ಸತೀಶ್‍ಕುಮಾರ್ ಮಾತನಾಡಿ, ಭಜರಂಗದಳ ಶಕ್ತಿಯ ಪ್ರತೀಕ ಹನುಂತನ ಹೆಸರಿನಲ್ಲಿ ನಿಷ್ಭೆಧ ಮಾಡುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಿಳಿಸಿರುವುದು ತೀವ್ರವಾಗಿ ಪ್ರತಿಭಟಿಸುತ್ತದೆ. ಇವತ್ತು ದೇಶ, ಧರ್ಮ ಹೆಣ್ಣು ಮಕ್ಕಳು ಸುರಕ್ಷಿತರಾಗಿರುವುದಕ್ಕೆ ಕಾರಣ ಭಜರಂಗದಳ ಸಂಘಟನೆ. ಲವ್‍ಜಿಹಾದ್, ಗೋಹತ್ಯ ಪ್ರಕರಣ, ಮತಾಂತರ ಪ್ರಕರಣಗಳ ವಿರುದ್ಧ ತಮ್ಮ ಪ್ರಾಣದ ಹಂಗು ತೊರೆದು ಹೋರಾಡಿರುತ್ತಾರೆ. ಕಾಂಗ್ರೆಸ್ ಪಕ್ಷವು ಜಾತಿ ಜಾತಿಯ ನಡುವೆ ವಿಷ ಬೀಜವನ್ನು ಬಿತ್ತುತ್ತಿದೆ. ಮುಸಲ್ಮಾನರ ಓಲೈಕೆಗಾಗಿ ಈ ತರಹದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿರುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಭಜರಂಗದಳದ ಮುಖಂಡರುಗಳಾದ ಹೇಮಂತ್‍ಕುಮಾರ್, ಮಧು ಮದ್ದೂರು, ಕೆ. ಶಶಿಧರ ಸೇರಿದಂತೆ ಅನೇಕ ಕಾರ್ಯಕರ್ತರು ಭಾಗವಹಿಸಿದ್ದರು.