ಕಾಂಗ್ರೆಸ್ ಪ್ರಜಾಪ್ರತಿನಿಧಿ ಅಭಿಯಾನ

ಚಿತ್ರದುರ್ಗ.ಅ.೨೫;  ನಗರದ 21ನೇ ವಾರ್ಡ್ನಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಸಭೆ ನಡೆಸಲಾಯಿತು ಹಾಗೂ ಕಾಂಗ್ರೆಸ್ ಪ್ರಜಾಪ್ರತಿನಿಧಿ ಅಭಿಯಾನದಡಿಯಲ್ಲಿ 21ನೇ ವಾರ್ಡ್ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ 21ನೇ ವಾರ್ಡ್ ಅಧ್ಯಕ್ಷರನ್ನಾಗಿ ಉಮೇಶ್ ರವರನ್ನು ನೇಮಕಮಾಡಲಾಯಿತು. ಈ ಕಾರ್ಯಕ್ರಮವು ಚಿತ್ರದುರ್ಗ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ  ಯು. ಲಕ್ಷ್ಮೀಕಾಂತ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಕಾರ್ಯಕ್ರಮದಲ್ಲಿ ಪ್ರಮುಖ ಅತಿಥಿಯಾಗಿ ಆಗಮಿಸಿದ್ದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 2018 ರ ಕಾಂಗ್ರೆಸ್ ಅಭ್ಯರ್ಥಿಯಾದ  ಹನುಮಲಿ ಷಣ್ಮುಖಪ್ಪ ರವರು ಮಾತನಾಡುತ್ತಾ, ರಾಷ್ಟ್ರಮಟ್ಟದಲ್ಲಿ ಎಐಸಿಸಿ, ರಾಜ್ಯಮಟ್ಟದಲ್ಲಿ ಕೆಪಿಸಿಸಿ, ಜಿಲ್ಲಾ ಮಟ್ಟದಲ್ಲಿ ಡಿಸಿಸಿ, ಬ್ಲಾಕ್ ಮಟ್ಟದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಗಳು ಕಾರ್ಯ ನಿರ್ವಹಿಸುತ್ತಿರುವಂತೆಯೇ ವಾರ್ಡ್ ಮಟ್ಟದಲ್ಲೂ ಈಗ ಸಮಿತಿಗಳನ್ನು ರಚನೆ ಮಾಡಲಾಗುತ್ತಿದೆ, ಅದರಂತೆ, ವಾರ್ಡ್ ಅಧ್ಯಕ್ಷರಿಗೂ ಮಹತ್ವವಾದ ಸ್ಥಾನ, ಗೌರವ ಇರುತ್ತದೆ, ಬ್ಲಾಕ್ ಅಧ್ಯಕ್ಷರಿಗಿಂತಲೂ ವಾರ್ಡ್ ಅಧ್ಯಕ್ಷರಿಗೆ ಪ್ರಮುಖ್ಯತೆ ಇರುತ್ತದೆ ಎಂದರು, ನೂರಾರು ವರ್ಷಗಳ ಇತಿಹಾಸವನ್ನು ಹೊಂದಿರುವ ಕಾಂಗ್ರೆಸ್ ಪಕ್ಷವು ಮೊದಲಿನಿಂದಲೂ ದೇಶವನ್ನು ಕಟ್ಟುವ ಕಾರ್ಯದಲ್ಲಿ ಮಗ್ನವಾಗಿದೆ. ಎಲ್ಲಾ ವಿಭಾಗಗಳಲ್ಲೂ ದೇಶವನ್ನು ಅಭಿವೃದ್ಧಿಪಡಿಸುವ ಕೆಲಸಗಳನ್ನು ಮಾಡುತ್ತಿರುವ ಕಾಂಗ್ರೆಸ್ ದೇಶದ ಜನರ ಅಭಿಮಾನಕ್ಕೆ ಪಾತ್ರವಾಗಿದೆ, ಈ ಎಲ್ಲಾ ಅಭಿವೃದ್ಧಿಕೆಲಸಗಳನ್ನು ಮಾಡಿರುವ ದೇಶದ ಏಕೈಕ ಪಕ್ಷವಾಗಿರುವ ಕಾಂಗ್ರೆಸ್‌ಗೆ ಜನರಿಂದ ಸಿಗುವ ಮನ್ನಣೆಯನ್ನು ಸಹಿಸಲು ಆಗದ ಬಿಜೆಪಿ ಖಿನ್ನತೆಗೆ ಒಳಗಾಗಿದೆ ಎಂದರೇ ತಪ್ಪಾಗಲಾರದು, ಪಕ್ಷದ ಈ ಅಭಿವೃದ್ಧಿ ಕಾರ್ಯಗಳನ್ನು ಅರ್ಥಮಾಡಿಕೊಂಡ ಜನರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲವಾಗಿ ನಿಂತಿದ್ದಾರೆ, ಈ ಹಿನ್ನೆಲೆಯಲ್ಲೇ ಕಾಂಗ್ರೆಸ್ ಹಮ್ಮಿಕೊಂಡಿರುವಂತಹ ಪ್ರಾಜೆಕ್ಟ್ ಪ್ರಜಾ ಪ್ರತಿನಿಧಿ ಅಬಿಯಾನಕ್ಕೆ ಅತ್ಯಂತ ಮಹತ್ವ ದೊರಕುತ್ತಿದೆ, ಈ ಕಾರ್ಯಕ್ರಮವು ಜನರಿಗೆ ಈಗಾಗಲೇ ತಲುಪಿದ್ದು, ಎಲ್ಲಾ ವಾರ್ಡ್ಗಳಲ್ಲೂ ಜನರು ಸಮಿತಿಗಳಲ್ಲಿ ಪದಾಧಿಕಾರಿಗಳಾಗಲು ತೀವ್ರ ಪೈಪೋಟಿ ಉಂಟಾಗಿದೆ. ಈ ಕಾರಣಕ್ಕೆ ಸ್ಥಳೀಯ ಮುಖಂಡರ ಜೊತೆಯಲ್ಲೇ ವಾರ್ಡ್ಗಳಲ್ಲಿ ಸಮಿತಿಗಳನ್ನು ರಚನೆ ಮಾಡಿ ಜನರ ಮದ್ಯೆಯಲ್ಲೇ ವಾರ್ಡ್ ಅಧ್ಯಕ್ಷರು ಹಾಗೂ ಇತರೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮಹತ್ಕಾರ್ಯ ಯಶಸ್ವಿಯಾಗಿ ನಡೆಯುತ್ತಿದೆ, ಸ್ವತಂತ್ರಕ್ಕೂ ಪೂರ್ವ ದೇಶ ಯಾವ ಸ್ಥಿತಿಯಲ್ಲಿತ್ತು, ಈಗ ಯಾವ ಸ್ಥಿತಿಯಲ್ಲಿದೆ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ, ದೇಶವನ್ನು ಅಭಿವೃದ್ಧಿ ಪಡಿಸುವಲ್ಲಿ ಕಾಂಗ್ರೆಸ್‌ನ ಅನೇಕ ನಾಯಕರು ಅವರ ಪ್ರಾಣಗಳನ್ನೇ ತ್ಯಾಗ ಮಾಡಿದ ಉದಾಹರಣೆಗಳು ಕಣ್ಣೆದುರೇ ಇವೆ, ನೆಹರು, ಲಾಲ್‌ಬಹದ್ದೂರ್ ಶಾಸ್ತಿç, ಇಂದಿರಾಗಾAಧಿ, ಪಿ.ವಿ.ನರಸಿಂಹರಾವ್, ಮನ್‌ಮೋಹನ್ ಸಿಂಗ್, ರಾಜೀವ್‌ಗಾಂಧಿ ರವರಂತಹ ಅನೇಕ ನಾಯಕರ ಕೊಡುಗೆ ಈ ದೇಶ ಎಂದು ಅವರು ಹೇಳುತ್ತಾ, ಮುಂದಿನ ದಿನಗಳಲ್ಲಿ ಬರುವ ನಗರಸಭೆ ಚುನಾವಣೆಯ ಅಭ್ಯರ್ಥಿಗಳನ್ನು ಈಗ ನೇಮಕ ಮಾಡುವ ವಾರ್ಡ್ ಸಮಿತಿಗಳ ಪದಾಧಿಕಾರಿಗಳಿಗೆ ಪ್ರಾಮುಖ್ಯತೆ ಕೊಡಲಾಗುವುದು ಎಂದು ಹೇಳಲು ಹರ್ಷಿಸುತ್ತೇನೆ, ಜಿಲ್ಲೆಯಲ್ಲಿ ಜನರೆಲ್ಲರೂ ಕಾಂಗ್ರೆಸ್ ಪರವಾಗಿ ಈಗಾಗಲೇ ಒಲವು ತೋರುತ್ತಿರುವುದು ನಮಗೆ ಸಂತೋಷದ ವಿಷಯ, ಇದಕ್ಕೆ ಕಾರಣ ದೇಶದಲ್ಲಿ ಬಿಜೆಪಿಯವರು ಮಾಡುತ್ತಿರುವ ದುರಾಡಳಿತ ಮತ್ತು ಬೆಲೆ ಏರಿಕೆಗಳೇ ಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ  ಎಂ. ಕೆ. ತಾಜ್‌ಪೀರ್  ಮಾತನಾಡುತ್ತಾ, ದೇಶದಲ್ಲಿ ಬೀಡುಬಿಟ್ಟಿದ್ದಂತಹ ಬ್ರಿಟೀಷರನ್ನೇ ಅಹಿಂಸೆಯಿಂದ ಓಡಿಸಿದ ಇತಿಹಾಸ ಕಾಂಗ್ರೆಸ್‌ನದ್ದು, ಇನ್ನು ಈ ಬಿಜೆಪಿಯವರು ಯಾವಲೆಕ್ಕ, ಮಹಾತ್ಮ ಗಾಂಧಿ ಜಿ ರವರ ಹೆಜ್ಜೆಗುರುತುಗಳಲ್ಲಿ ನಡೆಯುವ ಏಕೈಕ ಪಕ್ಷ ಕಾಂಗ್ರೆಸ್, ಡಾ. ಬಿ.ಆರ್.ಅಂಬೇಡ್ಕರ್ ಅಂತಹ ಮಹಾನ್ ನಾಯಕರ ಆಶಯಗಳನ್ನು ಆದರ್ಶವಾಗಿ ಇರಿಸಿಕೊಂಡು ದೇಶದ ಅಭಿವೃದ್ಧಿಗೆ ನಿರಂತರ ಹೋರಾಡುವುದು ಕಾಂಗ್ರೆಸ್‌ನ ಸಿದ್ಧಾಂತ ಎಂದು ಹೇಳಿದರು.