ಕಾಂಗ್ರೆಸ್ ಪ್ರಚೋದನೆಯ ಮಾತುಗಳಿಗೆ ಉತ್ತರಿಸಬೇಕಿಲ್ಲ: ಸಿಂಗ್

ಬಳ್ಳಾರಿ, ಮೇ.01: ಜಿಂದಾಲ್ ಜಮೀನು ವಿಷಯವನ್ನು ಮುಂದಿಟ್ಟು ಕೊಂಡು ಕಾಂಗ್ರೆಸ್ ನವರು ಸವಾಲು ಹಾಕಿ ನನ್ನನ್ನು ಪ್ರಚೋದಿಸುತ್ತಿದೆ ಅವರು ಮಾತುಗಳಿಗೆ ಉತ್ತರಿಸಬೇಕಿಲ್ಲ. ಅವರು ಏನೇ ಹೇಳಲಿ ನಾನು‌ ನನ್ನ ನಿರ್ಧಾರಕ್ಕೆ ಬದ್ದ ಎಂದು ಆನಂದ್ ಸಿಂಗ್ ಮತ್ತೊಮ್ಮೆ ಜಿಂದಾಲ್ ಗೆ ಜಮೀನು ಪರಭಾರೆ ವಿಚಾರದಲ್ಲಿ ಪುನರುಚ್ಚರಿಸಿದ್ದಾರೆ.
ಅವರಿಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಂಪುಟದಲ್ಲಿ ಅನುಮೋದನೆ ಆದ ಮಾತ್ರಕ್ಕೆ ಆದೇಶ ಜಾರಿಯಾಗಿಲ್ಲ ಈಗಲೂ ಜಿಂದಾಲ್ ಗೆ ಜಮೀನು ಪರಭಾರೆ ಮಾಡಬಾರದು ಎಂಬುದು ನನ್ನ ನಿಲುವಾಗಿದೆ.
ಜಿಂದಾಲ್ ಗೆ ಜಮೀನು ಪರಭಾರೆ ವಿಚಾರ ಮುಂದಿಟ್ಟುಕೊಂಡು ಹಿಂದೆ ನಾನು ರಾಜೀನಾಮೆ ನೀಡಿದ್ದು ನಿಜ.
ಜಿಂದಾಲ್ ಗೆ ಜಮೀನು ಪರಭಾರೆ ಮಾಡುವುದರಿಂದ ಸಂಸ್ಥೆಯವರು ಸಾಲ ತೆಗೆದುಕೊಳ್ಳಲು ಅನುಕೂಲ ಆಗುತ್ತದೆ.
ನಾನು ವ್ಯಾಪಾರಿ ಕುಟುಂಬದಿಂದ ಬಂದ ವ್ಯಕ್ತಿ, ನನಗೂ ವ್ಯವಹಾರದ ಬಗ್ಗೆ ಅಲ್ಪಸ್ವಲ್ಪ ಮಾಹಿತಿ ಇದೆ. ಕೈಗಾರಿಕೆಯವರಿಗೂ ಸರ್ಕಾರ ಯಾವಾಗ ಜಮೀನು ಹಿಂಪಡೆಯಲಿದೆ ಎಂಬ ಭಯ ಇರಬಹುದು. ಆದರೆ, ಸರ್ಕಾರ ಜಮೀನು ಪರಭಾರೆ ಮಾಡುವ ಬದಲಿಗೆ ಕೈಗಾರಿಕೆಯವರು ಸಾಲ ತೀರಿಸುವವರೆಗೂ ಜಮೀನು ವಾಪಸ್ ಪಡೆಯಲ್ಲ ಎಂದರು.