ಕಾಂಗ್ರೆಸ್ ಪ್ರಚಾರ ಸಮಿತಿಗೆ ಜಂಟಿ ಸಂಯೋಜಕರ ನೇಮಕ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.30:  ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಬಳ್ಳಾರಿ ಗ್ರಾಮೀಣ ವಿಧಾನಸಭಾ ಜಿಲ್ಲಾ ಜಂಟಿ ಸಂಯೋಜಕರನ್ನಾಗಿ ಹಲವರನ್ನು ನೇಮಕ ಮಾಡಿರುವ ಕೆಪಿಸಿಸಿ ರಾಜ್ಯ ಪ್ರಚಾರ ಸಮಿತಿಯ ಸಂಯೋಜಕ ಅಲ್ಲಂ ಪ್ರಶಾಂತ್ ಅವರು ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರೊಂದಿಗೆ ಇಂದು ನೇಮಕಾತಿ ಆದೇಶದ ಪ್ರತಿಗಳನ್ನು ವಿತರಿಸಿದರು.
ಪಿ.ಜಗನ್ನಾಥ, ಪ್ರಭುಸ್ವಾಮಿ, ಕೆ.ಮಲ್ಲಿಕಾರ್ಜುನ, ಜೆ.ರಾಜಶೇಖರ, ಸತೀಶ್ ಚಕ್ರವರ್ತಿ, ಚಂಪ್ ಚವ್ಹಾಣ್, ಗುಜರಿ ಬಸವರಾಜ್, ಶರಗಮಸ್ ವಲಿ, ಅರುಣಾ ಜ್ಯೋತಿ ಅವರನ್ನು ನೇಮಕ ಮಾಡಲಾಗಿದೆಂದು ಪ್ರಶಾಂತ್ ತಿಳಿಸಿದರು.
ಈ ವೇಳೆ ಶಾಸಕ ನಾಗೇಂದ್ರ ಮತ್ತು ಪ್ರಶಾಂತ್ ಅವರು ಮಾತನಾಡಿ, ನಮ್ಮ ಕಾಂಗ್ರೆಸ್ ಪಕ್ಷ ಈ ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಪಕ್ಷ ಅಧಿಕಾರಕ್ಕೆ  ಬಂದರೆ ನಮಗೆಲ್ಲ ಸೂಕ್ತ ಗೌರವ ದೊರೆಯಲಿದೆ. ಅದನ್ನರಿತು ನಾವೆಲ್ಲ ಶ್ರಮವಹಿಸಿ ಮತದಾರರ ಮನವೊಲಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಬೇಕು ಎಂದರು.
ಆದೇಶ ಪತ್ರ ಪಡೆದವರು ಪಕ್ಷ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಮಾಡಿ ನಾಗೇಂದ್ರ ಅವರನ್ನು ಮತ್ತೆ ಶಾಸಕರನ್ಮಾಗಿ ಮಾಡುವುದು ನಮ್ಮ ಗುರಿ ಎಂದರು