ಕಾಂಗ್ರೆಸ್ ಪ್ರಚಾರ ಸಮಿತಿಗೆ ಗುರುಪಾದಪ್ಪ ಆಯ್ಕೆ


ಸಂಜೆವಾಣಿ ವಾರ್ತೆ
ಸಂಡೂರು :ಏ:3: ಸಂಡೂರು ತಾಲ್ಲೂಕಿನ ತೋರಣಗಲ್ಲು ಗ್ರಾಮದ ಕಾಂಗ್ರೆಸ್ ಪ್ರಚಾರ ಸಮಿತಿಗೆ ಗುರುಪಾದಪ್ಪ ಆಯ್ಕೆಯಾಗಿದ್ದು, ಸಂಡೂರು ವಿಧಾನಸಭಾ ಕ್ಷತ್ರದ ಶಾಸಕರವರ ಶಿಫಾರಸ್ಸಿನ ಮೇರೆಗೆ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿ ಸದಸ್ಯರ ಪಟ್ಟಿ ಬಿಡುಗಡೆಯಾಗಿದ್ದು, ಈ ವಿಚಾರವಾಗಿ ಪುರಸಭೆಯ ಮಾಜಿ ಸದಸ್ಯೆ ಸಾದನಾ ಬೋಯಿಟಿ ಉಮೇಶ, ಮಲಿಯಪ್ಪ, ರಾಘವೇಂದ್ರ ಫರುಕ ಅಹ್ಮದ್ ಜಂಟಿ ಸಂಯೋಜಕರಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷರಾದ ಎಂ. ಬಿ. ಪಾಟಿಲರ ಅನುಮೋದನೆಯೊಂದಿಗೆ ಆಯ್ಕೆ ಪಟ್ಟಿ ಸಿದ್ದಗೊಂಡಿದೆ. ಪಕ್ಷ ಸಂಘಟನೆ, ಪಕ್ಷದ ತತ್ವ ಸಿದ್ದಾಂತ, ಕಾಂಗ್ರೆಸ್ ಪಕ್ಷದ ಸಾಧನೆ ಪ್ರಣಾಳಿಕೆಗಳನ್ನ ಮನದಟ್ಟು ಮಾಡುವ ರಿತಿಯಲ್ಲಿ ಜನರಿಗೆ ಪ್ರಚಾರ ಮಾಡಲು ರಾಜ್ಯ ಸಮಿತಿಯ ಸಹ ಅಧ್ಯಕ್ಷರಾದ ಡಾ|| ಶರಣ ಪ್ರಕಾಶ್ ಪಾಟೀಲರು ಆದೇಶಿಸಿದ್ದಾರೆ ಎಂದು ತಿಳಿಸಿದರು.