ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು

ದಾವಣಗೆರೆ.ಜ.೧೨; ಗ್ರಾಮೀಣ ಪ್ರದೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಬಿಜೆಪಿ ಗಟ್ಟಿಯಾಗಿದ್ದು, ಕಾಂಗ್ರೆಸ್ ಮುಳುಗುತ್ತಿರುವ ಹಡಗು ಆಗಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.ನಗರದ ಹದಡಿ ರಸ್ತೆಯಲ್ಲಿರುವ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಜನಸೇವಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಡಿ.ಕೆ.ಶಿವಕುಮಾರ್ ಚಾಲಕರಾದರೆ, ಸಿದ್ದರಾಮಯ್ಯ ಕಂಡಕ್ಟರ್ ಆಗಿದ್ದಾರೆ. ಆದರೆ ಈಗ ಬಸ್  ಪಂಕ್ಚರ್ ಆಗಿ ನಿಂತಿದೆ. ಪಂಕ್ಚರ್ ಆಗಿರುವ ಬಸ್‌ನಲ್ಲಿ ಕುಳಿತರೆ ಅಭಿವೃದ್ಧಿ ಆಗೋದಿಲ್ಲ. ಹೀಗಾಗಿ ಚಾಲ್ತಿಯಲ್ಲಿರುವ ಬಿಜೆಪಿಯ ಬಸ್ ಹತ್ತಬೇಕು ಎಂದರು.ಹಿಂದೆ ಬಿ.ಎಸ್.ಯಡಿಯೂರಪ್ಪ ಅಧಿಕಾರವಧಿಯಲ್ಲಿ ಜಾರಿಗೆ ತಂದಿದ್ದ ಸುವರ್ಣ ಗ್ರಾಮ ಯೋಜನೆಯನ್ನು ರಾಜ್ಯದಲ್ಲಿ ಮತ್ತೆ ಜಾರಿಗೆ ತಂದು ಗ್ರಾಮಗಳ ಅಭಿವೃದ್ಧಿ ಮಾಡಲಾಗುವುದು. ಆದರೆ, ಕಾಂಗ್ರೆಸ್ ಸರಕಾರ ಬಂದ ಮೇಲೆ ಈ ಯೋಜನೆ ರದ್ದುಪಡಿಸಿ ಗ್ರಾಮವಿಕಾಸ ಯೋಜನೆ ಜಾರಿಗೆ ತಂದರು. ಆದರೆ ಹಳ್ಳಿಗಳ ಅಭಿವೃದ್ಧಿ ಮಾತ್ರ ಆಗಲಿಲ್ಲ. ಆದ್ದರಿಂದ ಮತ್ತೊಮ್ಮೆ ಸುವರ್ಣಗ್ರಾಮ ಯೋಜನೆ ಕಾರ್ಯಕ್ರಮ ಜಾರಿಗೆ ತರಲಾಗುವುದು ಈ ಯೋಜನೆ ಬಂದರೆ ಪ್ರತಿ ಗ್ರಾಮ ಪಂಚಾಯಿತಿಗೆ 1 ಕೋಟಿ ರೂ. ಅನುದಾನ ಬರಲಿದೆ ಎಂದು ಹೇಳಿದರು.ಸಮಸ್ಯೆ ನಡುವೆ ಬದುಕಿದ ವ್ಯಕ್ತಿಗಳಿಗೆ ಪರಿಹಾರ ಕೊಡಲು ಸಾಧ್ಯವಿದೆ. ಹಳ್ಳಿಗಳ ಅಭಿವೃದ್ಧಿ ಶೋಷಣೆ ರಹಿತ ಆಡಳಿತ ಗಾಂಧಿ ಪರಿಕಲ್ಪನೆ ಆಗಿತ್ತು. ಅಂತೆಯೇ ಪ್ರಧಾನಿ ವಾಜಪೇಯಿ ಹಳ್ಳಿಗಳ ಅಭಿವೃದ್ಧಿಗೆ ಸರ್ವ ಶಿಕ್ಷಣ ಅಭಿಯಾನ, ಅಂತ್ಯೋದಯ, ಗ್ರಾಮ ಸಡಕ್ ಯೋಜನೆ ಜಾರಿಗೆ ತಂದರು ಎಂದು ಹೇಳಿದರು. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದ  2778 ಗ್ರಾಮ ಪಂಚಾಯಿತಿಗಳಲ್ಲಿ 1014 ಪಂಚಾಯಿತಿಗಳನ್ನು ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ. ಶೇ58 ರಷ್ಟು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿಗರು ಗೆಲುವು ಸಾಧಿಸಿದ್ದಾರೆ. ಪ್ರಧಾನಿ ಮೋದಿ ಗ್ರಾಮ ಪಂಚಾಯತಿಗಳಿಗೆ ಹೆಚ್ಚು ಅನುದಾನ ನೀಡಲು ಸಂಕಲ್ಪ ಮಾಡಿದ್ದಾರೆ. ಗ್ರಾಮದ ಯೋಜನೆ, ಗ್ರಾಮಸಂಕಲ್ಪ ವಾಜಪೇಯಿ, ಕೇಂದ್ರದ ಹಣ ಎಲ್ಲಿ ಖರ್ಚಾಗುತ್ತದೆ ಗೊತ್ತಿರಲಿಲ್ಲ. ವಾಜಪೇಯಿ ಸವರ್ವ ಶಿಕ್ಷಣ ಅಭಿಯಾನ, ಗ್ರಾಮ ಸಡಕ್ ಯೊಜನೆ, ರಾಜ್ಯದಲ್ಲಿ ಬಿಎಸ್ ವೈ ಸುವರ್ಣ ಗ್ರಾಮ 2008ರಲ್ಲಿ ರಸ್ತೆ ಇರಲಿಲ್ಲ ಅಭಿವೃದ್ದೀ ಹಣ ಕೊಟ್ಟವರು ಬಿ.ಎಸ್.ಯಡಿಯೂರಪ್ಪ ಎಂದು ಹೇಳಿದರು.ಸಚಿವ ಬಿ.ಶ್ರೀರಾಮುಲು ಮಾತನಾಡಿ, ಹಳ್ಳಿಯಿಂದ ದಿಲ್ಲಿಗೆ ಬಿಜೆಪಿ ಆಡಳಿತವಿದ್ದರೇ, ಹಳ್ಳಿಗಳ ಅಭಿವೃದ್ಧಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ಕಾರ್ಯಕರ್ತರ ಶ್ರಮದಿಂದ ನಾವೆಲ್ಲ ಅಧಿಕಾರ ಹಿಡಿದಿz್ದೆÃವೆ. ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಯಾವುದೇ ಕೆಟಗರಿ ಬರಲಿ ಪ್ರಾಮಾಣಿಕತೆ, ಶೃದ್ಧೆ, ನಿಷ್ಠೆಯಿಂದ ಕೆಲಸ ಮಾಡಬೇಕು ಎಂದರು.ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಕಟ್ಟ ಕಡೆ ಕಾರ್ಯಕರ್ತನಿಗೆ ಮಾತ್ರ ಬಿಜೆಪಿಯಲ್ಲಿ ಅಧಿಕಾರ ಸಿಗಲಿದ್ದು, ರಾಷ್ಟೀಯ ಅಧ್ಯಕ್ಷ ನಡ್ಡಾ, ಅಮಿತ್-ಷಾ ಸಂದೇಶ ಹಿನ್ನೆಲೆಯಲ್ಲಿ ಪಂಚಾಯಿತಿಯಲ್ಲಿ ಗೆದ್ದವರಿಗೆ ಅಭಿನಂದನೆ ಸಲ್ಲಿಸಲಾಗುತ್ತಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಮಾತನಾಡಿ, ನಾನು ಗ್ರಾಮ ಪಂಚಾಯಿತಿ ಸದಸ್ಯಘಿ, ಎರಡು ಬಾರಿ ತಾಲೂಕು ಪಂಚಾಯಿತಿ ಸದಸ್ಯನಾಗಿ ಕೆಲಸ ಮಾಡಿದ್ದು, ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿದ್ದುಘಿ, ನೀವು ಅದೇ ರೀತಿ ಕೆಲಸ ಮಾಡಬೇಕು ಎಂದು ಅಭಿಪ್ರಾಯಪಟ್ಟರು. ಸಂಸದ ಜಿ.ಎಂ.ಸಿದ್ದೇಶ್ವರ ಮಾತನಾಡಿ, ಬಿಜೆಪಿ ಬೆಂಬಲಿತ 1614 ಜನ ಗ್ರಾಮ ಪಂಚಾಯತಿ ಸದಸ್ಯರು ಗೆದ್ದಿದ್ದರು. ವಾಜಪೇಯಿ ಆದ ಮೇಲೆ ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸಿನ್ನಂತೆ ಗ್ರಾಮಗಳ ಅಭಿವೃದ್ಧಿ ಮಾಡಿದ್ದರುಯ. ಪ್ರಧಾನ ಮಂತ್ರಿ ಗ್ರಾಮ ಸಡಕ್,ಸರ್ವಶಿಕ್ಷಣ ಅಭಿಯಾನ, ಸ್ಲೇಟ್ ಬೋರ್ಡ, ಅಂತ್ಯೋದೋಯ ಯೋಜನೆ ಜಾರಿಗೆ ತಂದಿದ್ದರು ಎಂದು ಹೇಳಿದರು.ಪ್ರಾಸ್ತಾವಿಕ ಮಾತನಾಡಿದ ಜಿಲ್ಲಾ ವೀರೇಶ್ ಹನಗವಾಡಿ, ಕೇಂದ್ರ, ರಾಜ್ಯ ಸರಕಾರದ ಅನುದಾನ ಬಳಕೆ, 15ನೇ ಹಣಕಾಸು, ಸ್ವಚ್ಛ ಭಾರತ್ ಅನುದಾನದ ಬಳಕೆಯನ್ನು ಜನರಿಗೆ ತಲುಪಿಸಬೇಕು ಎಂದರು.ಸಭೆಯಲ್ಲಿ ಶಾಸಕ ಎಸ್.ಎ.ರವೀಂದ್ರನಾಥ್, ಎಸ್.ವಿ.ರಾಮಚಂದ್ರ, ಎಂ.ಪಿ. ರೇಣುಕಾಚಾರ್ಯ, ಮಾಡಾಳï, ಸಂಸದೆ ಶೋಭಾಕರಾದಾಂಜ್ಞೆ, ಬಸವರಾಜ್ ಬೊಮ್ಮಾಯಿ, ವಿರೂಪಾಕ್ಷಪ್ಪ, ಸಚಿವ ಭೈರತಿ ಬಸವರಾಜï, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಾಂತಕುಮಾರಿ, ಜಿಲ್ಲಾಧ್ಯಕ್ಷ ಹನಗವಾಡಿ  ವೀರೇಶ, ಮಾಜಿ ಶಾಸಕ ಬಿ.ಪಿ.ಹರೀಶ, ಬಸವರಾಜ್ ನಾಯ್ಕ, ಮೇರ್ಯ ಬಿ.ಜಿ.ಅಜೇಯ್ ಕುಮಾರ್, ಮುಖ್ಯ ಸಚೇತಕ ಡಾ. ಶಿವಯೋಗಿಸ್ವಾಮಿ, ಯಶವಂತರಾವ್ ಜಾಧವï, ರಾಜನಹಳ್ಳಿ ಶಿವಕುರ್ಮಾ, ದಾಸಕರಿಯಪ್ಪ ಇದ್ದರು. ಜಿ.ಎ.ಜಗದೀಶ್ ನಿರೂಪಿಸಿದರು.