ಕಾಂಗ್ರೆಸ್ ಪಕ್ಷ ಬಿಡುವಂತಹ ಮಾತೇ ಇಲ್ಲ

ಹೈಕಮಾಂಡ್ ನಿರ್ಧರಿಸದ ಅಭ್ಯರ್ಥಿಗೆ ಬೆಂಬಲಿಸುವೆ :- ಹಂಪಯ್ಯ ನಾಯಕ
ಚಂದ್ರಶೇಖರ ಮದ್ಲಾಪೂರ
ಮಾನ್ವಿ,ಏ.೧೩- ೨೦೨೩ ರಾಜ್ಯ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಸುವ ದಿನ ಆರಂಭವಾಗಿದ್ದರೂ ಮಾನ್ವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡದಿರುವುದು ಜನರಲ್ಲಿ ಬಾರಿ ಗೊಂದಲ ಮೂಡಿಸಿದ್ದು ಮಾಜಿ ಶಾಸಕ ಜಿ.ಹಂಪಯ್ಯ ನಾಯಕ ಇವರು ಬಿಜೆಪಿ ಸೇರುತ್ತಾರೆ ಅಥಾವ ರೆಡ್ಡಿ ಪಕ್ಷ ಸೇರುತ್ತಾರೆ ಎನ್ನುವಂತಹ ಮಾತುಗಳು ಕ್ಷೇತ್ರದ ಜನರು ಮಾತಾನಾಡಿಕೊಳ್ಳುತ್ತಿದ್ದಾರೆ ಯಾವುದು ಸತ್ಯ ಯಾವುದು ಸುಳ್ಳು ಎನ್ನುವುದನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಣಯ ಮಾಡಬೇಕಾಗಿದೆ.
ಕಳೆದ ಚುನಾವಣೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಮಾಜಿ ಶಾಸಕ ಹಂಪಯ್ಯ ನಾಯಕ ಹಾಗೂ ಕಳೆದ ಬಾರಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಮೂವತ್ತು ಸಾವಿರಕ್ಕೂ ಅಧಿಕ ಮತ ಪಡೆದಿದ್ದ ವೈ.ಶರಣಪ್ಪ ನಾಯಕ ಗುಡದಿನ್ನಿ ಇವರು ಈ ಬಾರಿಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರೂ ಹಂಪಯ್ಯ ನಾಯಕರಿಗೆ ಟಿಕೆಟ್ ಸಿಕ್ಕಲ್ಲಿ ಅವರಿಗೆ ಬೆಂಬಲಿಸುತ್ತೇನೆ ಎನ್ನುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಾರಿ ಮುನ್ನಡೆಯಾಗುವ ಸಾಧ್ಯತೆ ಇದೆ ಆದರೆ ಬಿ.ವಿ.ನಾಯಕ ದೇವದುರ್ಗ ಕ್ಷೇತ್ರದಿಂದ ವಲಸೆ ಬಂದು ಈ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೆ ಅವರಿಗೆ ಹಿನ್ನೆಲೆಯಾಗುತ್ತದೆ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ. ಬಹಳ ಪ್ರಮುಖವಾಗಿ ಯಾವ ರಾಜಕೀಯ ಪಕ್ಷಗಳು ನಡೆಸಿರುವ ಸರ್ವೆಗಳಲ್ಲಿ ಜಿ ಹಂಪಯ್ಯ ನಾಯಕ ಮುಂಚೂಣೆಯಾಗಿದ್ದಾರೆ ಎನ್ನುವ ಫಲಿತಾಂಶ ಆಧಾರಿತ ವ್ಯಕ್ತಿಯಾಗಿ ಹಾಗೂ ಕ್ಷೇತ್ರದ ಜನರಲ್ಲಿ ಕೂಡ ಈ ಬಾರಿ ಹಂಪಯ್ಯ ನಾಯಕ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿದರೆ ಗೆಲುವು ಖಚಿತ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಹಾಲಿ ಶಾಸಕ ರಾಜಾ ವೆಂಕಟಪ್ಪ ನಾಯಕರು ಈಗಾಗಲೇ ತಾವು ಮಾಡಿರುವ ಕೆಲಸವನ್ನು ಹಾಗೂ ಜೆಡಿಎಸ್ ಪಕ್ಷದ ಪ್ರಣಾಳಿಕಯನ್ನು ಮುಂದಿಟ್ಟುಕೊಂಡು ಪ್ರಚಾರ ಆರಂಭಿಸಿದ್ದಾರೆ ಅದರಂತೆಯೇ ಎಎಪಿ ಅಭ್ಯರ್ಥಿ ರಾಜಾ ಶ್ಯಾಮಸುಂದರ ನಾಯಕ ಪಕ್ಷ ದೆಹಲಿ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಮಾಡಿದ ಅಭಿವೃದ್ಧಿ ಕೆಲಸವನ್ನು ಹೇಳಿಕೊಂಡು ಪ್ರಚಾರ ಮಾಡುತ್ತಿದ್ದಾರೆ ಆದರೆ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿಯಿಂದ ಅಭ್ಯರ್ಥಿಯೇ ಅಂತಿಮವಾಗದೆ ಕ್ಷೇತ್ರದ ಜನರಲ್ಲಿ ಬಾರಿ ಮಟ್ಟದ ಗೊಂದಲ ಸೃಷ್ಟಿಯಾಗಿದ್ದು ಯಾವ ನಾಯಕರು ಯಾವ ಪಕ್ಷಕ್ಕೆ ಹೋಗುತ್ತಾರೋ ಎಂದು ಕಾಯುತ್ತಿದ್ದಾರೆ ಇದರ ಮಧ್ಯ ಕಳೆದ ಚುನಾವಣೆಯಲ್ಲಿ ಪಕ್ಷೇತರಾಗಿ ಸ್ಪರ್ಧೆ ಮಾಡಿದ್ದ ಡಾ ತನುಶ್ರೀ ( ಎಂ ಈರಣ್ಣ ) ನವರ ಜಾತಿ ಪ್ರಮಾಣ ಪತ್ರ ರದ್ದಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದ್ದು ಇದಕ್ಕೆ ಸಂಬಂಧಿಸಿದ ಇಂದು ಬೀದರ್ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಇಂದು ಅಂತಿಮ ವಾದ ಪ್ರತಿವಾದ ನಡೆಯುತ್ತಿದ್ದು ಇಂದು ಸಂಜೆಯೊಳಗೆ ಅದರ ಆದೇಶ ಕೂಡ ಹೊರಬಿದ್ದು ಇದು ಕೂಡ ಕ್ಷೇತ್ರದ ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಚಾರ ಉಲ್ಟಾ ಪಲ್ಟಾ ಮಾಡುವ ಸ್ಪಷ್ಟ ಸಂದೇಶ ಸಿಗಬಹುದಾಗಿದೆ.

(( ಬಾಕ್ಸ್ ಐಟಂ ೧
ನಾನು ಕಳೆದ ನಲ್ವತ್ತು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಶಾಸಕ ಸೇರಿದಂತೆ ಅನೇಕ ಹುದ್ದೆಯಲ್ಲಿದ್ದೇನೆ, ಸ್ಥಳೀಯ ವ್ಯಕ್ತಿಯಾಗಿರುವ ನನಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಸಭೆ ಮಾಡಿದ್ದು ಸತ್ಯ ಆದರೆ ಟಿಕೆಟ್ ಸಿಕ್ಕಲ್ಲವಾದರೆ ಪಕ್ಷ ಬಿಡುವ ಮಾತೇ ಇಲ್ಲ ಬದಲಾಗಿ ಕಾಂಗ್ರೆಸ್ ಹೈಕಮಾಂಡ್ ಯಾವ ವ್ಯಕ್ತಿಗೆ ಟಿಕೆಟ್ ನೀಡುತ್ತದೇಯೋ ಅವರಿಗೆ ನಾನು ಮನೆಯಲ್ಲಿಯಿಂದಲೇ ಬೆಂಬಲಿಸುತ್ತೇನೆ.

ಜಿ ಹಂಪಯ್ಯ ನಾಯಕ ಸಾಹುಕಾರ್
ಮಾಜಿ ಶಾಸಕರು…))

((ಬಾಕ್ಸ್ ಐಟಂ ೨
ನಾವು ಕಾಂಗ್ರೆಸ್ ಸಭೆ ಮಾಡಿ ಸ್ಥಳೀಯರಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ಜಿಲ್ಲಾ,ರಾಜ್ಯ, ರಾಷ್ಟ್ರೀಯ, ಕೈ ಪಕ್ಷದ ಹೈಕಮಾಂಡ್ ನಾಯಕರಿಗೆ ಮನವಿ ಮಾಡಲಾಗಿದ್ದು, ನಾನು ಬಿ ವಿ ನಾಯಕ ಇವರನ್ನು ವಿರೋಧಿಸುವುದಿಲ್ಲ ಅವರು ಕೂಡ ನಮ್ಮ ನಾಯಕರು ಎನ್ನುವುದನ್ನು ಒಪ್ಪಿಕೊಳ್ಳುತ್ತೇನೆ, ಬದಲಾಗಿ ಸ್ಥಳೀಯ ಅಭ್ಯರ್ಥಿಗೆ ಟಿಕೆಟ್ ನೀಡುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ಪಕ್ಕಾ

ರಾಜಾ ವಸಂತ ನಾಯಕ
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ..))

(( ಬಾಕ್ಸ್ ಐಟಂ ೩
ಮಾನ್ವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ನಮ್ಮ ಸ್ಥಳೀಯ ನಾಯಕರಿಗೆ ದೊರಕುತ್ತದೆ ಎನ್ನುವ ನಂಬಿಕೆ ನಮಗಿದೆ ಇದನ್ನು ನಮ್ಮ ರಾಯಚೂರು ಜಿಲ್ಲಾ ಹೈಕಮಾಂಡ್ ನಿರ್ಣಯ ಮಾಡಬೇಕಾಗಿದೆ, ಪಕ್ಷ ಬಿಟ್ಟು ಬಿಜೆಪಿ ಸೇರುತ್ತಾರೆ ಎನ್ನುವ ವಂದತಿಯ ಕುರಿತು ನನಗೆ ಮಾಹಿತಿ ಇಲ್ಲ ನಾವು ಯಾರೇ ಅಭ್ಯರ್ಥಿ ಬಂದರು ಕೈ ಪಕ್ಷಕ್ಕೆ ಬೆಂಬಲಿಸುತ್ತೇವೆ..

ವೈ ಶರಣಪ್ಪ ನಾಯಕ ಗುಡದಿನ್ನಿ
ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಾನ್ವಿ ))

ಪೋಟೋ ಲಿಸ್ಟ್
೧) ಹಂಪಯ್ಯ ನಾಯಕ
೨) ಶರಣಪ್ಪ ಗುಡದಿನ್ನಿ
೩)ರಾಜಾ ವಸಂತ ನಾಯಕ