
ಲಿಂಗಸುಗೂರ,ಏ.೨೯- ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಎಚ್.ಬಿ.ಮುರಾರಿ ಮಾತನಾಡಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯಲು ನನ್ನ ಜನ್ಮ ಸಿದ್ಧ ಹಕ್ಕು ಇದರಿಂದಾಗಿ ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ನಾಯಕರಾಗಿ ಪಕ್ಷಕ್ಕಾಗಿ ಪ್ರಾಮಾಣಿಕ ಸೇವೆ ಮಾಡಲಿಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮುರಾರಿ ಹೇಳಿದರು.
ಈ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದು ನಿಶ್ಚಿತ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಜನಪರವಾದ ಆಡಳಿತವನ್ನು ನೀಡಲು ಕಾಂಗ್ರೆಸ್ ಪಕ್ಷವು ಮುಂದಾಗಿದೆ.
ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ನಾನು ಕಾಂಗ್ರೆಸ್ ಟಿಕೆಟ್ ಪ್ರಬಲ ಆಕಾಂಕ್ಷಿ ಯಾಗಿದ್ದೆ ಆದರೆ ನನಗೆ ಕೊನೆಗಳಿಗೆಯಲ್ಲಿ ಕಾಣದ ಕೈಗಳು ನನ್ನ ವಿರೋಧಿಗಳು ನನಗೆ ಟಿಕೇಟ್ ಕೈ ತಪ್ಪಿಹೋಯಿತು ಆದರೂ ಕೂಡ ನಾನು ಎದೆಗುಂದದೆ ಧೈರ್ಯದಿಂದ ಮಾನಸಿಕ ವಾಗಿ ಗಟ್ಟಿಯಾಗಿ ಪಕ್ಷಕ್ಕಾಗಿ ದುಡಿಯುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುತ್ತದೆ ಎಂದು ಎಚ್.ಬಿ. ಮುರಾರಿ ಇವರು ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯರವರು ಮುಖ್ಯಮಂತ್ರಿ ಆಗಬೇಕಾದರೆ ಮೊದಲು ಕ್ಷೇತ್ರದ ಜನರು ಕಾಂಗ್ರೆಸ್ ಪಕ್ಷಕ್ಕೆ ಮತ ಚಲಾಯಿಸುವ ಹಕ್ಕುದಾರರು ಆಗಬೇಕು ಎನ್ನುವ ಮೂಲಕ ಮಾರ್ಮಿಕವಾಗಿ ನುಡಿದರು.
ನನಗೆ ವ್ಯಕ್ತಿ ಮುಖ್ಯವಲ್ಲ ನಾನು ವ್ಯಕ್ತಿಗೆ ಪೂಜೆ ಮಾಡುವುದಿಲ್ಲ ನನ್ನ ಸಿದ್ಧಾಂತ ಅಂಬೇಡ್ಕರ್ ಚಿಂತನೆಯ ಸಿದ್ದಾಂತಕ್ಕೆ ಕೆಲಸ ಮಾಡಲು ಮುಂದಾಗುತ್ತೇನೆ ಹಾಗು ನನಗೆ ಪಕ್ಷ ಮುಖ್ಯ ಎಂದು ಪರೋಕ್ಷವಾಗಿ ಅಭ್ಯರ್ಥಿಗೆ ಟಾಂಗ್ ನೀಡುವ ಮುಖಾಂತರ ಎಚ್ಚರಿಕೆ ನೀಡಿದಂತಾಗಿದೆ ಎಂದರೆ ತಪ್ಪಾಗಲಾರದು.
ಎಚ್.ಬಿ.ಮುರಾರಿ ನಡೆ ತೀವ್ರ ಕುತೂಹಲ ತೆರೆ ಎಳೆದ ಮುರಾರಿ ನಿಟ್ಟುಸಿರು ಬಿಟ್ಟ ಶಾಸಕರ ಬೆಂಬಲಿಗರು:
ಕ್ಷೇತ್ರದಲ್ಲಿ ಹಾಲಿ ಶಾಸಕರಿಗೆ ಎಚ್.ಬಿ.ಮುರಾರಿ ಹಾಗೂ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ಕ್ಷೇತ್ರದಲ್ಲಿ ಮಾತುಗಳು ಕೇಳಿಬರುತ್ತಿವೆ ಆದರೆ ನಿನ್ನೆ ನಡೆದ ಕಾಂಗ್ರೆಸ್ ಪಕ್ಷವು ಹಮ್ಮಿಕೊಳ್ಳಲಾಗಿದ್ದ ಪ್ರಚಾರ ಸಭೆಯಲ್ಲಿ ಎಚ್.ಬಿ.ಮುರಾರಿ ಮಾತನಾಡಿ ನಾನು ಯಾವತ್ತೂ ಅಧಿಕಾರಕ್ಕಾಗಿ ಆಸೆ ಪಟ್ಟವನಲ್ಲ ಹಾಗೂ ನನ್ನ ಬೆಂಬಲಿಗರು ಕೂಡ ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ನಿಷ್ಟಾವಂತ ಕಾರ್ಯಕರ್ತರಾಗಿ ಕೆಲಸ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಇಲ್ಲಿನ ನಾಯಕರು ಮರೆತಿದ್ದಾರೆ ಎಂದರು ವಿನಾಕಾರಣ ಗೊಂದಲ ಸೃಷ್ಟಿ ಮಾಡುವ ನಾಯಕರಿಗೆ ಎಚ್ಚರಿಸಿದರು ಹಾಗೂ ನಾನು ಮತ್ತು ನನ್ನ ಬೆಂಬಲಿಗರು ಯಾವತ್ತೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿಯಲು ಸಿದ್ದರಿದ್ದೇವೆ ಅದನ್ನು ಬಳಕೆ ಮಾಡಿಕೊಳ್ಳಲು ಅಭ್ಯರ್ಥಿ ಡಿ.ಎಸ್. ಹೂಲಗೇರಿ ಇವರು ಬಳಸಿ ಕೊಳ್ಳಬೇಕು ಎಂದು ಹೇಳಿ ಗೊಂದಲಕ್ಕೆ ತೆರೆ ಎಳೆದರು. ಇದರಿಂದಾಗಿ ಶಾಸಕರ ಬೆಂಬಲಿಗರು ಎಚ್.ಬಿ.ಮುರಾರಿ ಹೇಳಿಕೆಯಿಂದ ನಿಟ್ಟುಸಿರು ಬಿಡುವಂತಾಗಿದೆ
ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವೆ ಉಮಾಶ್ರೀ, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ, ಶಾಸಕ ಡಿ.ಎಸ್. ಹೂಲಗೇರಿ, ವಸಂತ ಕುಮಾರ್, ಅಮರಗುಂಡಪ್ಪ ಮೇಟಿ, ಶರಣಪ್ಪ ಮೇಟಿ, ಭೂಪನಗೌಡ ಪಾಟೀಲ್, ಕರಡಕಲ್ ದಾವುದ್, ಮುದಗಲ್ ವಿಜಯಲಕ್ಷ್ಮಿ, ದೇಸಾಯಿ ಡಿ.ಜಿ, ಗುರಿಕಾರ ಮಹಾಂತೇಶ ಪಾಟೀಲ, ಮುದಗಲ್ ಗುಂಡಪ್ಪ ಸಾಹುಕಾರ ಸೇರಿದಂತೆ ಹಲವಾರು ಎಚ್.ಬಿ.ಮುರಾರಿ ಬೆಂಬಲಿಗರು ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.