ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ

ಬೈಲಹೊಂಗಲ,ಮಾ14: ಚುನಾವಣಾ ಪೂರ್ವ ಕಾಂಗ್ರೆಸ್ ಪಕ್ಷ ಜನರಿಗೆ ಕೊಟ್ಟಂತ ಗ್ಯಾರಂಟಿ ಆಶ್ವಾಸನೆಗಳನ್ನು ಅಧಿಕಾರ ವಹಿಸಿಕೊಂಡ ನಂತರ ಜಾರಿಗೆ ತಂದ ಗೃಹಲಕ್ಷ್ಮೀ,ಶಕ್ತಿ, ಯುವ ನಿಧಿ,ಉಚಿತ ವಿದ್ಯುತ್,ಐದು ಕೆಜಿ ಅಕ್ಕಿ ಹಣ ಸಂದಾಯ ಯೋಜನೆಗಳಿಂದ ಸರ್ವ ಜನಾಂಗದ ಜನರಿಗೆ ಇವುಗಳ ಪ್ರಯೋಜನವಾಗಿದೆ ಎಂದು ಚನ್ನಮ್ಮನ ಕಿತ್ತೂರ ಶಾಸಕರಾದ ಬಾಬಾಸಾಹೇಬ ಪಾಟೀಲ ಹೇಳಿದರು.
ಅವರು ನೇಸರಗಿ ಗ್ರಾಮದ ಶ್ರೀ ಚನ್ನವೃಷಬೇಂದ್ರ ಅಜ್ಜನವರ ಮಠದಲ್ಲಿ ತಾಲೂಕು ಆಡಳಿತ,ತಾಲೂಕ ಪಂಚಾಯತ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಇವರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಕುರಿತು ನೇಸರಗಿ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಸಮಾವೇಶದಲ್ಲಿ ಮಾತನಾಡಿ, ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು,ಬಡತನ ಸಮಸ್ಯೆಗಳಿಂದ ಹೊರಬರಲು ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಪ್ರೀತಿಗೆ ಪಾತ್ರರಾಗಿವೆ ಎಂದರು.
ತಹಶಿಲ್ದಾರ ಸಚ್ಚಿದಾನಂದ ಕುಚನೂರ, ತಾ.ಪಂ ಇಓ ಗಂಗಾಧರ ಕಂದಕೂರ, ಬಿಇಓ ಎ.ಎನ್.ಪ್ಯಾಟಿ, ಸಚೀನ ಪಾಟೀಲ, ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ.ಎಸ್ ಎಸ್. ಸಿದ್ದನ್ನವರ, ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ, ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ನಿಂಗಪ್ಪ ಅರಕೇರಿ ಸೇರಿದಂತೆ ಮತ್ತಿತರರು ಹಾಜರಿದ್ದರು.