ಕಾಂಗ್ರೆಸ್ ಪಕ್ಷ ಗಟ್ಟಿಯಾಗಿ ಬೆಳೆಯಲಿದೆ: ಲಮಾಣಿ

ಹಾವೇರಿ, ಜ6- ಹಾವೇರಿ ವಿಧಾನಸಭಾ ವ್ಯಾಪ್ತಿಯಲ್ಲಿನ ಅರ್ಧಕ್ಕಿಂತ ಹೆಚ್ಚು ಪಂಚಾಯತಿಗಳಲ್ಲಿ ಕಾಂಗ್ರೇಸ್ ಪಕ್ಷದ ಬೆಂಬಲಿತರು ಗೆಲವು ಸಾಧಿಸಿದ್ದು,ಕಾಂಗ್ರೇಸ್ ಪಕ್ಷ ಭದ್ರವಾಗಿ ಗಟ್ಟಿಯಾಗಿ ಬೆಳೆಯಲಿದೆ ಎಂದು ಮಾಜಿಸಚಿವ ರುದ್ರಪ್ಪ ಲಮಾಣಿ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಿಧಾನಸಭಾ ವ್ಯಾಪ್ತಿಯ ಹಾವೇರಿ ತಾಲೂಕಿನ ನೆಗಳೂರ.ಕಿತ್ತೂರ.ಹಂದಿನನೂರ.ಬೆಳವಿಗಿ.ಹಾವನೂರ.ಕಂಚಾರಗಟ್ಟಿ.ಕನವಳ್ಳಿ.ಕಳ್ಳಿಹಾಳ.ನೆಲೂಗಲ್ಲ.ಅಗಡಿ.ಕರ್ಜಗಿ.ಕೋಣನತಂಬಿಗಿ ಹಾಗೂ ಸವಣೂರ ತಾಲೂಕಿನ ಕಡಕೋಳ.ಹೂವಿನಶಿಗ್ಲಿ.ಹೆಸರೂರ.ಯಲವಿಗಿ.ಕಳಸೂರ.ಹಿರೇಮರಳಿಹಳ್ಳಿ ಗ್ರಾಮ ಪಂಚಾಯತಿಗಳಲ್ಲಿ ಕಾಂಗ್ರೇಸ್ ಪಕ್ಷ ಬೆಂಬಲಿಗರು ಗೆದ್ದು ಬಂದಿದ್ದು, ಕಾಂಗ್ರೇಸ್ ಪಕ್ಷ ಗ್ರಾಮಗಳಲ್ಲಿ ಪ್ರಾಬಲ್ಯ ಮರೆಯಲಿದೆ.ಒಟ್ಟು ಸುಮಾರು 36 ರಲ್ಲಿ 19 ಗ್ರಾಪಂಗಳಲ್ಲಿ ನಮ್ಮ ಪಕ್ಷ ಅಧಿಕಾರ ಹಿಡಿಯುವ ಹಂತದಲ್ಲಿದೆ.ಬಿಜೆಪಿ ಪಕ್ಷದವರು ಇತರ ಆಮಿಷ್ಯ ಒಡ್ಡಿ ಗ್ರಾಪಂ ಸದಸ್ಯರನ್ನು ಸೆಳೆಯುವ ಪ್ರಯತ್ನ ಹಾಗೂ ಹುನ್ನಾರ ನಡೆಯುವ ಲಕ್ಷಣ ಕಂಡು ಬರುತ್ತಿದ್ದು,ಯಾರೂ ಇಂತಹ ಸುಳ್ಳಿನ ಕಂತೆಗೆ ಬಲಿಯಾಗದೇ ಗ್ರಾಮಗಳ ಅಭಿವೃದ್ದಿಯ ಕಡೆಗೆ ಗಮನ ಹರಿಸುವಂತೆ ರುದ್ರಪ್ಪ ಲಮಾಣಿ ವಿನಂತಿಸಿಕೊಂಡರು.
ಶಾಸಕರ ವಿರುದ್ಧ ವಾಗ್ದಾಳಿ : ನಮ್ಮ ಮಗನ ಪ್ರಕರಣ ನ್ಯಾಯಾಂಗದಲ್ಲಿದ್ದು,ನ್ಯಾಯಾಂಗಕ್ಕೆ ಗೌರವ ನೀಡಿ ಸ್ಪಂದಿಸಿದ್ದೇವೆ.ನ್ಯಾಯಕ್ಕೆ ಜಯಸಿಗುವ ವಿಶ್ವಾಸವಿದೆ.ಮಗನಿಗೆ ಜಾಮೀನು ದೊರೆತಿದೆ.ಈ ಘಟನೆಯ ಬಗ್ಗೆ ಸ್ಥಳೀಯ ಶಾಸಕರು ತಮ್ಮ ಬಾಯಿಗೆ ಬಂದಂತೆ ಮಾತನಾಡಿದ್ದು ನೋವುಂಟು ಮಾಡಿದೆ.ತಮ್ಮ ಮೇಲೆ ಯಾವ ಕೇಸಗಳು ಆರೋಪಗಳು ಇದ್ದವು ಎಂಬುವುದನ್ನು ಶಾಸಕರು ನೆನಪಿನಲ್ಲಿ ಇಟ್ಟುಕೊಂಡು ಮತ್ತೊಬ್ಬರ ಬಗ್ಗೆ ಎಚ್ಚರದಿಂದ ಮಾತನಾಡಲಿ. ಮುಂದಿನ ದಿನದಲ್ಲಿ ಅವರ ವಿರುದ್ಧ ಮಾತನಷ್ಟ ಪ್ರಕರಣ ದಾಖಲಿಸಲಾಗುವುದು ಎಂದು ರುದ್ರಪ್ಪ ಲಮಾಣಿ ಹೇಳಿದರು.
ಕಾಂಗ್ರೇಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಎಂಎಂ ಹಿರೇಮಠ ಮಾತನಾಡಿ ಜಿಲ್ಲೆಯಲ್ಲಿ ಹೆಚ್ಚು ಗ್ರಾಪಂಗಳಲ್ಲಿ ಕಾಂಗ್ರೇಸ್ ಪಕ್ಷ ಬೆಂಬಲಿತರು ಗೆಲವು ಸಾಧಿಸಿದ್ದು,ಪಕ್ಷ ಸಂಘಟನೆಗೆ ಬಾರಿ ಅನುಕೂಲವಾಗಲಿದೆ.ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ 25 ಜನರ ಸಮಿತಿ ರಚನೆ ಮಾಡಿ ತಾ.ಪಂ ಹಾಗೂ ಜಿ.ಪಂ ಚುನಾವಣೆಗೆ ಸಜ್ಜಾಗಲಿದ್ದೇವೆ. ಪಕ್ಷ ಸಂಘಟನೆಗೆ ಹೆಚ್ಚು ಮಹತ್ವ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ಕೊಟ್ರೇಶಪ್ಪ ಬಸೇಗಣ್ಣಿ.ಡಾ.ಸಂಜಯ ಡಾಂಗೆ.ಎಂಎಂ ಮೈದೂರ.ಪ್ರಭುಗೌಡ್ರ ಭಿಷ್ಟನಗೌಡ್ರ ಸೇರಿದಂತೆ ಅನೇಕರಿದ್ದರು.