
ಸಂಜೆವಾಣಿ ವಾರ್ತೆ
ಹೊಸಪೇಟೆ ಮಾ12: ಸರ್ವ ಧರ್ಮಗಳ ಸಮನ್ವಯತೆಯೊಂದಿಗೆ ಕಾರ್ಯನಿರ್ವಹಿಸುವ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಹೆಚ್.ಎನ್.ಎಫ್ ಇಮಾಮ್ ನಿಯಾಜಿ ಅವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಅಂಜುಮನ್ ಖದ್ಮತೆ ಇಸ್ಲಾಮ್ ಸಮಿತಿ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಅಬುಬೇಖರ್ ಪಕ್ಷವನ್ನು ಒತ್ತಾಯಿಸಿದರು.
ಹೊಸಪೇಟೆಯ ಪತ್ರಿಕಾಭವನದಲ್ಲಿ ಭಾನುವಾರ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 10 ವಿಧಾನಸಭಾ ಕ್ಷೇತ್ರಗಳಿದ್ದು 7ಮೀಸಲು ಕ್ಷೇತ್ರಗಳ ಮೀಸಲಾಗಿದ್ದು ಉಳಿದ ಕೇವಲ 3 ಕ್ಷೇತ್ರಗಳು ಉಳಿದ ಸಮುದಾಯಗಳಿಗೆ ಅವಕಾಶ ಇಲ್ಲವಾಗಿದೆ. ಬಹುಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಪಕ್ಷ ಮಾನ್ಯತೆ ನೀಡಬೇಕು ಅದರಲ್ಲೂ ಮುಖ್ಯವಾಗಿ ಕಳೆದ ಅನೇಕ ವರ್ಷಗಳಿಂದ ನಿಷ್ಠಾವಂತರಾಗಿ ಸ್ಥಳೀಯವಾಗಿರುವ ಇಮಾಮ್ ನಿಯಾಜಿ ಅತ್ಯಂತ ಕ್ರಿಯಾಶೀಲವಾಗಿದ್ದು ಆದ್ಯತೆಯನ್ನು ನೀಡುವಂತೆ ಬ್ಲಾಕ್ ಕಾಂಗ್ರೆಸ್, ಕಾರ್ಯಕರ್ತರಾಗಿ ನಗರಸಭಾ ಸದಸ್ಯರಾಗಿ ಎಲ್ಲಾ ಸಮಾಜದೊಂದಿಗೆ ಸಮನ್ವಯತೆಯನ್ನು ಸಾಧಿಸಿದ್ದು ಇಮಾಮ್ ಅವರಿಗೆ ಟಿಕೆಟ್ ನೀಡುವಂತೆ ಆಗ್ರಹಿಸಿದರು.
ಗೋಷ್ಠಿಯಲ್ಲಿ ಖಾಜಾವಲಿ, ಅಜ್ಮಯಿ ಅಖತ್, ಖಾಜಾ ಮೈನುದ್ದೀನ ಜಾಫರ್ ಸಾಧಿಕ್, ದಾವುದ್ ರಜಾಖ್, ಮೊಹಮ್ಮದ್ ತೌಸೀಫ್ ಸೇರಿದಂತೆ ಇತರರು ಹಾಜರಿದ್ದರು.