ಕಾಂಗ್ರೆಸ್ ಪಕ್ಷವನ್ನು ಜನ ನಂಬುವುದಿಲ್ಲ : ಓಂಶಕ್ತಿ ಚಲಪತಿ

ಕೋಲಾರ, ಜ ೧೯-ರಾಜ್ಯದಲ್ಲಿ ಐದು ವರ್ಷ ಕಾಲ ಕಾಂಗ್ರೆಸ್ ನೇತೃತ್ವದ ಸರಕಾರ ನಿದ್ದೆ ಮಾಡಿ ಅಭಿವೃದ್ಧಿ ಕಡೆಗಣಿಸಿದ್ದಾರೆ, ಇವತ್ತು ಜನರಿಗೆ ಸುಳ್ಳು ಭರವಸೆಗಳನ್ನು ನೀಡಲು ಹೊರಟಿದ್ದಾರೆ, ಕಾಂಗ್ರೆಸ್ ಪಕ್ಷವನ್ನು ಜನ ನಂಬುವುದಿಲ್ಲ ಎಂದು ಕುಡಾ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದರು
ನಗರದ ಖಾದ್ರಿಪುರದಲ್ಲಿ ಮಂಗಳವಾರ ಓಂಶಕ್ತಿ ಫೌಂಡೇಶನ್‌ನಿಂದ ಮೇಲ್ ಮರವತ್ತೂರು ಓಂಶಕ್ತಿ ದೇವಸ್ಥಾನಕ್ಕೆ ಉಚಿತ ಬಸ್ ವ್ಯವಸ್ಥೆ ಮಾಡಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಕೇವಲ ಅಧಿಕಾರದ ಆಸೆಗಾಗಿ ನಾಡಿನ ಜನತೆಗೆ ಇನ್ನೂರು ಯೂನಿಟ್ ಉಚಿತ ವಿದ್ಯುತ್, ಮಹಿಳೆಯರಿಗೆ ಮನೆ ನಿರ್ವಹಣೆಗೆ ಎರಡು ಸಾವಿರ ತಿಂಗಳಿಗೆ ಅಂತ ಸುಳ್ಳು ಭರವಸೆಗಳನ್ನು ನೀಡಲು ಹೊರಟಿದ್ದು, ರಾಜ್ಯದ ಜನ ಬುದ್ದಿವಂತರಿಂದ್ದು ಕಾಂಗ್ರೆಸ್ ಪಕ್ಷವನ್ನು ಯಾವುದೇ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ ಅಧಿಕಾರಕ್ಕೆ ತರಲ್ಲ ಜನ ಈಗಾಗಲೇ ಮನಸ್ಸು ಮಾಡಿದ್ದಾರೆ ಬಿಜೆಪಿಯನ್ನು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ತರಲಿದ್ದಾರೆ ಎಂದರು.
ರಾಜ್ಯಾದ್ಯಂತ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬಸ್ ಯಾತ್ರೆ ಕೈಗೊಂಡಿದ್ದು, ಜನಕ್ಕೆ ದೇಶದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬಸವರಾಜ್ ಬೊಮ್ಮಯಿ ನೇತೃತ್ವದಲ್ಲಿ ಜನಪರ ಆಡಳಿತದ ಮುಂದೆ ಕಾಂಗ್ರೆಸ್ ಪಕ್ಷದ ಯಾವ ಯಾತ್ರೆಗಳು ಜನರಿಗೆ ಒಳ್ಳೆಯ ಯೋಜನೆಗಳನ್ನು ತರಲ್ಲ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಸೋಲಿನ ಭಯದಿಂದ ಸುಳ್ಳು ಆಶ್ವಾಸನೆ ನೀಡಲು ಹೊರಟಿದ್ದಾರೆ ಎಂದರು.
ಖಾದ್ರಿಪುರ ಗ್ರಾಪಂ ಸದಸ್ಯ ನಿರಂಜನ್, ಮುಖಂಡರಾದ ಸಾ.ಮಾ ಬಾಬು, ಭರತ್, ಶಂಕರ್, ನವೀನ್, ಮಂಜುನಾಥ್ ಸಿಂಗ್, ಕಾವ್ಯ ಇದ್ದರು.