ಕಾಂಗ್ರೆಸ್ ಪಕ್ಷದ ಶೇಖಮ್ಮ ಫುಟ್ಬಾಲ್ಗೆ ಹುಸೇನ್ ನಗರದಲ್ಲಿ ಲಕ್ಷ್ಮೀ ಅರುಣರ ಪ್ರಚಾರದ ಕಲರವ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.28; ನಗರದ 20 ನೇ ವಾರ್ಡಿನ ಹುಸೇನ್ ನಗರದಲ್ಲಿ ಇಂದು ಮನೆ ಮನೆಗೆ ತೆರಳುದ ಕೆಆರ್ಪಿ ಪಕ್ಷದ ನಗರ ಅಭ್ಯರ್ಥಿ ಲಕ್ಷ್ಮೀ ಅರುಣ ಅವರ ಒ್ರಚಾರದ ವೈಖರಿ ಹೊಸ ಕಲರವ ಪಡೆದಿತ್ತು.
ಮನೆಯಲ್ಲಿದ್ದ ಮಹಿಳೆಯರನ್ನು ಹೊರ ಕರೆದು ಬಿಸಿಲಿದೆಂದು ಮತದಾನ ಮಾಡದೆ ಮನೆಯಲ್ಲಿ ಮಲಗಬೇಡಿ, ಈ ಮಹಿಳೆ ಸ್ಪರ್ಧೆ ಮಾಡಿದ್ದಾಳೆ ನಿಮ್ಮ ಸಮಸ್ಯೆಗಳನ್ನು ತೀರಿಸಲು ಫುಟ್ಬಾಲ್ ಗೆ ಮತ ನೀಡಿ ಸದಾ ನಿಮ್ಮ ಸೇವೆಗೆ ಇರುತ್ತೇನೆ ಎಂದಳು.
ಈ ಸಂದರ್ಭದಲ್ಲಿ ಈವರಗೆ ಕಾಂಗ್ರೆಸ್ ಪಕ್ಷ ಬೆಂಬಲಿಸಿಕೊಂಡು ಬಂದಿದ್ದ.
ಮತ್ತು ಕಾಂಗ್ರೆಸ್ ಪಕ್ಷದ ಮಹಿಳಾ ಉಪಾಧ್ಯಕ್ಷೆಯಾಗಿದ್ದ ಶೇಖಮ್ಮ ತಾನು‌ ಕೇಳಿದ ಮಾತುಗಳಿಂದ ನಿಮ್ಮ ಬೆಂಬಲಕ್ಕೆ ನಾನು ಬರುವೆನೆಂದು ಕೆಆರ್ಪಿ ಪಕ್ಷ ಸೇರಿದರು.
ಈ ಸಂದರ್ಭದಲ್ಲಿ ಹರ್ಷಿಯಾ, ಅಮೀನಾ, ರೂಪ, ರಾಜೇಶ್ವರಿ, ಗೀತಾರಾಮ್, ಪುಷ್ಪಲತ,
 ಪಕ್ಷದ ಮುಖಂಡರಾದ ಶ್ರೀನಿವಾಸ್ ರೆಡ್ಡಿ, ದಮ್ಮೂರು ರಾಮಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಹಂಪಿರಮಣ, ಸಾಮಾಜಿಕ ಜಾಲತಾಣದ ಅಧ್ಯಕ್ಷ ಮಲ್ಲಿಕಾರ್ಜುನಚಾರ್,    ಮುನ್ನೀರ್ ಬಾಷಾ  ಕೋಳೂರು ಶೇಕ್ಷವಲಿ, ಸಿರಿಗೇರಿ ರಸುಲ್, ಪ್ರದೀಪ್, ರಫೀಕ್, ರಸೂಲ್, ಶಫಿ, ಶಮ್ಮು, ಮಮ್ತಾಜ್, ಶೇಖಮ್ಮ, ರಘು, ಮಹೇಶ್ ಗೋಪಿ, ವೆಂಕಟೇಶ್, ರೆಹ್ಮದ್, ವಿಜಯಲಕ್ಷ್ಮಿ. ದಾದು, ತಾಜ್, ಮಸ್ತಾನ್, ತಿರುಮಲ ಮೊದಲಾದವರು ಪ್ರಚಾರದಲ್ಲಿ ಭಾಗವಹಸಿದ್ದರು.