ಕಾಂಗ್ರೆಸ್ ಪಕ್ಷದ ವತಿಯಿಂದ ಕೋವಿಡ್- ಹೆಲ್ಫ್‍ಡೆಸ್ಕ್ ಪ್ರಾರಂಭ

ಚಿಂಚೋಳಿ,ಏ.28- ಕೋವಿಡ್- 19 ಸಾಂಕ್ರಾಮಿಕ ರೋಗ ಅತಿ ವೇಗದಲ್ಲಿ ಹರಡುತ್ತಿದ್ದು, ಸೋಂಕಿತರ ಹಾಗೂ ಸಾರ್ವಜನಿಕರ ಸಹಾಯಕ್ಕಾಗಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಕೋವಿಡ- 19 ಸಹಾಯ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ.
ತಾಲೂಕಿನ 5 ಜಿಲ್ಲಾ ಪಂಚಾಯತ್ ಕೇಂದ್ರ ಸ್ಥಾನಗಳಲ್ಲಿ ಮತ್ತು ಪುರಸಭೆ ವ್ಯಾಪ್ತಿಯ 3 ಸ್ಥಳಗಳಲ್ಲಿ ಕೋವಿಡ್-19 ಹೆಲ್ಫ್ ಡೆಸ್ಕ್‍ಪ್ರಾರಂಭ ಮಾಡಲಾಯಿತು ಎಂದು ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಭಾಷ ರಾಠೋಡ ಹೇಳಿದರು.
ಚಿಂಚೋಳಿ ತಾಲೂಕಿನ ಸಾರ್ವಜನಿಕರು ಮಹಾಮಾರಿ ಕೋವಿಡ್-19 ಕೊರೊನಾ ಸೋಂಕಿನ ಕುರಿತು ಭಯ ಆತಂಕಕ್ಕೆ ಒಳಗಾಗದೇ, ಕÉೂರನಾ ಸೋಂಕನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಅಗತ್ಯ ಮಾರ್ಗಸೂಚಿಯನ್ನು ಪಾಲಿಸಬೇಕು ಎಂದರು.
ಕೋವಿಡ್- 19 ಎರಡನೆ ಅಲೆಯ ಸೋಂಕು ಇಷ್ಟೋಂದು ಪ್ರಮಾಣದಲ್ಲಿ ಹರಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ನಿರ್ಲಕ್ಷವೇ ಕಾರಣ ಎಂದ ಅವರು, ಸೋಂಕಿತರಿಗೆ ಸಮರ್ಪಕವಾಗಿ ಚಿಕಿತ್ಸೆ ಹಾಗೂ ಅಗತ್ಯ ಸೌಲಭ್ಯ ಒದಗಿಸುವಲ್ಲಿಯೂ ಸರ್ಕಾರ ಹಾಗೂ ಸಂಸದ, ಶಾಸಕರು ವಿಫಲರಾಗಿದ್ದಾರೆ ಎಂದರು.
ಬೀದರ್ ಲೋಕಸಭಾ ಸದಸ್ಯರಾದ ಭಗವಂತ ಖೂಬಾ ಅವರು ಚಿಂಚೋಳಿ ಸರ್ಕಾರಿ ಆಸ್ಪತ್ರೆಗೆ ಕಾಟಾಚಾರಕ್ಕೆ ಭೇಟಿ ನೀಡಿ ಹೋಗಿದ್ದಾರೆ ತಾಲೂಕಿನ ಜನರ ಸಮಸ್ಯೆಗಳನ್ನು ಕೇಳದೆ ಕಾಟಾಚಾರಕ್ಕೆ ಭೇಟಿ ನೀಡಿದ್ದಾರೆ ಎಂದರು.
ಕೋವಿಡ್ 19 ಸೋಂಕು ರಾಜ್ಯದಲ್ಲಿ ಹೆಚ್ಚಾಗುತ್ತಿದ್ದರೂ ಕೂಡ ರಾಜ್ಯ ಸರ್ಕಾರ ಕೈಕಟ್ಟಿ ಕುಳಿತಿದೆ ಸಮರೋಪಾದಿಯಲ್ಲಿ ಆಕ್ಸಿಜನ್, ಇಂಜಕ್ಷನಗಳ ಕೊರತೆಯಾಗದಂತೆ ಜನರ ಪ್ರಾಣ ರಕ್ಷಿಸಲು ಸರ್ಕಾರ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ. ಚಿಂಚೋಳಿಯ ಕಾಂಗ್ರೆಸ್ ಪಕ್ಷದ ತಾಲೂಕ ಅಧ್ಯಕ್ಷರಾದ ಅನೀಲಕುಮಾರ ಜಮಾದಾರ. ಕಾಂಗ್ರೆಸ್ ಪಕ್ಷದ ಮುಖಂಡರಾದ ಮುಖಂಡರುಗಳಾದ ಬಸವರಾಜ ಮಲಿ. ಅಬ್ದುಲ್ ಬಾಸಿದ. ಗಂಗಾಧರ ಗಡ್ಡಿಮನಿ. ಅನ್ವರ್ ಖತೀಬ್. ಆರ್. ಗಣಪತರಾವ್. ಜಗನ್ನಾಥ ಇದಲಾಯಿ. ಮಹಮ್ಮದ್ ನಾಯಿಕೋಡಿ. ಶರಣು ಪಾಟೀಲ. ಸಂತೋಷ ಮಾಳಪ್ಪನೂರ್. ಹಾದಿಸಾಬ್. ಅಯುಬ್ ಖಾನ. ಬಸವರಾಜ ಕಡಬೂರ. ನಾಗೇಶ್ ಗುಣಾಜಿ. ವಿಶ್ವನ್ನಾಥ್. ಉಲ್ಲಾಸ ಕುಮಾರ. ಕೃಷ್ಣ ಬಿರಾಪುರ. ಜಗದೇವ ಗೌತಮ್. ಆಕಾಶ ಪಾಟೀಲ್. ಮಲ್ಲಿಕಾರ್ಜುನ ನರನಾಳ. ವಿಠಲ್ ರೆಡ್ಡಿ. ಮಲ್ಲಿಕಾರ್ಜುನ ಚಂದಾಪುರ. ಯಲಾಲಿಂಗ ಕಮಲಾಕಾರ. ಸಂತೋಷ ಪವಾರ್. ರಾಘವೇಂದ್ರ ಗುತ್ತೇದಾರ. ನೀಲಕಂಠ ಚಂದಾಪುರ. ಪ್ರದೀಪ್ ಕೊಳ್ಳೂರ. ಚಾಂದ ಪಟೇಲ್. ಹಾಗೂ ಅನೇಕ ಕಾಂಗ್ರೆಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.