ಕಾಂಗ್ರೆಸ್ ಪಕ್ಷದ ಮುಖಂಡರುಗಳಿಗೆ ಅಭಿನಂದನೆ

ಕೆ.ಆರ್.ಪೇಟೆ, ನ.01: ಪಟ್ಟಣದ ಪುರಸಭಾ ಚುನಾವಣೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿ ಗಾಯಿತ್ರಿಯವರಿಗೆ ಬೆಂಬಲ ನೀಡಿದ್ದಕ್ಕೆ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರುಗಳಿಗೆ ಅಭಿನಂದನೆಗಳು ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಎ.ಎನ್. ಜಾನಕೀರಾಮು ತಿಳಿಸಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರುಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪುರಸಬಾ ಚುನಾವಣೆಯಲ್ಲಿ ಬಿಜೆಪಿಯ ತಂತ್ರಗಾರಿಕೆಗೆ ಪ್ರತಿತಂತ್ರ ರೂಪಿಸಲು ತಾಲ್ಲೂಕು ಮಟ್ಟದಲ್ಲಿ ಎರಡೂ ಪಕ್ಷಗಳ ನಾಯಕರುಗಳು ಕುಳಿತು ಚರ್ಚಿಸಿ ತೀರ್ಮಾನಿಸಿದಂತೆ ಉಪಾದ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಬೆಂಬಲ ನೀಡಿರುವುದು ತುಂಬಾ ಸಂತೋಷದ ವಿಷಯ. ನಮ್ಮ ಪಕ್ಷದಿಂದ ಹೋಗಿರುವ ಇಬ್ಬರೂ ಗೆಲುವು ಸಾಧಿಸಿರುವುದು ನಮಗೆ ಬಹಳ ಸಂತೋಷ ತಂದಿದೆ ಎಂದು ತಿಳಿಸಿದರು.
ಪಟ್ಟಣದ ಅಭಿವೃದ್ದಿಗಾಗಿ ಮುಂದಿನ ಐದು ವರ್ಷಗಳ ವರೆಗೆ ಜೆಡಿಎಸ್ ಪಕ್ಷಕ್ಕೆ ಸಹಕಾರ ನೀಡಲಾಗುವುದು, ಈ ಬಗ್ಗೆ ತಾಲ್ಲೂಕು ಮಟ್ಟದ ಕಾಂಗ್ರೆಸ್ ಪಕ್ಷದ ನಾಯಕರುಗಳು ತೀರ್ಮಾನ ಮಾಡಿದ್ದು ಪಟ್ಟಣದ ಅಭಿವೃದ್ದಿಗಾಗಿ ನಾವು ಯಾವುದೇ ಷರತ್ತಿಲ್ಲದೇ ಗಾಯಿತ್ರಿಯವರಿಗೆ ಬೆಂಬಲ ನೀಡಿದ್ದೇವೆ. ಅದ್ಯಕ್ಷ ಸ್ಥಾನಕ್ಕೆ ನಟರಾಜು ರವರನ್ನು ಬೆಂಬಲಿಸಲು ತೀರ್ಮಾನಿಸಿದ್ದು ಅವರು ನಮಗೆ ಸೂಕ್ತವಾಗಿ ಸ್ಪಂದಿಸದ ಕಾರಣ ಅದ್ಯಕ್ಷ ಸ್ಥಾನದ ವಿಷಯದಲ್ಲಿ ನಮ್ಮ ಪಕ್ಷ ತಟಸ್ಥ ಧೋರಣೆಯನ್ನು ತಳೆಯಬೇಕಾಯಿತು ಎಂದು ಪುರಸಭಾ ಸದಸ್ಯರಾದ ಡಿ.ಪ್ರೇಮ್ ಕುಮಾರ್, ನಾಗೇಂದ್ರ ಕುಮಾರ್, ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಟಿಎಪಿಸಿಎಂಎಸ್ ಅದ್ಯಕ್ಷ ಹಾಗೂ ಜಿಪಂ ಸದಸ್ಯ ಬಿ.ಎಲ್.ದೇವರಾಜು, ಉಪಾದ್ಯಕ್ಷೆ ಅಭ್ಯರ್ಥಿ ಗಾಯಿತ್ರಿ, ಪುರಸಬಾ ಸದಸ್ಯರುಗಳಾದ ಕೆ.ಎಸ್.ಸಂತೋಷ್ ಕುಮಾರ್, ಕೆ.ಸಿ.ಮಂಜುನಾಥ್, ಕೆ.ಆರ್.ರವೀಂದ್ರಬಾಬು, ಪ್ರವೀಣ್, ಸ್ನೇಹಿತ ರಮೇಶ್, ಎಪಿಎಂಸಿ ಅದ್ಯಕ್ಷ ಚಂದ್ರಹಾಸ್, ಸದಸ್ಯ ಶಶಿಧರ ಸಂಗಾಪುರ ಸೇರಿದಂತೆ ಎರಡೂ ಪಕ್ಷಗಳ ಮುಖಂಡರು ಹಾಜರಿದ್ದರು.