ಕಾಂಗ್ರೆಸ್ ಪಕ್ಷದ ನಿರುದ್ಯೋಗಿಗಳಿಂದ ದಿನಕ್ಕೊಂದು ಪ್ರತಿಭಟನೆ; ಬಿಜೆಪಿ ಆರೋಪ

ದಾವಣಗೆರೆ. ನ.೧೧; ಕಾಂಗ್ರೆಸ್ ಪಕ್ಷದ ನಿರುದ್ಯೋಗಳು ದಿನಕ್ಕೊಂದು ಪ್ರತಿಭಟನೆ ಮಾಡುವ ಮೂಲಕ ತಮ್ಮ‌ ಮುಖಂಡರ ಓಲೈಕೆಗೆ ದಾರಿ ಹುಡುಕಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ವ್ಯಂಗ್ಯವಾಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಪಾಲಿಕೆ‌ ನೌಕರರೊಬ್ಬರು ಬಂಧನವಾಗಿದ್ದಾರೆ ಇದರಲ್ಲಿ ನಮ್ಮ ಸಂಸದರು ಸಚಿವರ ಮೇಲೆ ವಿನಾ ಕಾರಣ ಆರೋಪ ಮಾಡಿ ಕಾಂಗ್ರೆಸ್ ನವರು ಪಾಲಿಕೆ ಮುಂದೆ ಪ್ರತಿಭಟನೆ ಮಾಡಿರುವುದು ಸರಿಯಲ್ಲ.ತಮ್ಮ ನಾಯಕರನ್ನು ಮೆಚ್ಚಿಸುವ ಸಲುವಾಗಿ ನಿರುದ್ಯೋಗಿ ಕಾಂಗ್ರೆಸ್ ನವರು ಹೋರಾಟ ಮಾಡಿದ್ದಾರೆ.ಸಂಸದರ ಬಗ್ಗೆ ಹೆಚ್ಚು ಮಾತನಾಡಿದರೆ ಮೈಲೇಜ್ ಬರುತ್ತದೆ ಅಂದುಕೊಂಡಿದ್ದಾರೆ.ಸಂಸದರನ್ನು ನಿಂದಿಸಿದರೆ ದೊಡ್ಡವರಾಗುತ್ತೇವೆ ಎನ್ನುವ ಭ್ರಮೆಯಲ್ಲಿದ್ದಾರೆ. ಇದನ್ನು ನೋಡಿದರೆ ಕಾಂಗ್ರೆಸ್ ನ ಕೆಲ ಮುಖಂಡರು ಯಾವ ಹಂತಕ್ಕೆ ಕಂಗಾಲಾಗಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದರು.ಸಂಸದರಿಗೆ ಪರ್ಸೆಂಟೇಜ್ ನೀಡಲಾಗುತ್ತದೆ ಎಂದು ಹೇಳಿರುವುದು ಖಂಡನೀಯ. ಸಂಸದರು ತಮ್ಮ‌ಸ್ವಂತ ವೆಚ್ಚದಲ್ಲಿ ಅನೇಕ ಅಭಿವೃದ್ಧಿ ಕಾರ್ಯ ಮಾಡಿ ಮಾದರಿಯಾಗಿದ್ದಾರೆ ಅವರ ಬಗ್ಗೆ ಮಾತನಾಡುವುದು  ಸರಿಯಲ್ಲ ಎಂದರು.ಕಾಂಗ್ರೆಸ್ ನ ಕೆಲ ಮುಖಂಡರಿಗೆ  ಆಕಾಶಕ್ಕೆ ಉಗಿದರೆ ತಮ್ಮ ಮೇಲೆಯೇ ಸಿಡಿಯುತ್ತದೆ ಎಂಬ ಅರಿವು ಇಲ್ಲ. ಇದು ಅವರ ನೈತಿಕ ದಿವಾಳಿತನ ತೋರಿಸುತ್ತದೆ ಏನಾದರೂ ಮಾಡಿ ಜನಪ್ರಿಯತೆ ಗಳಿಸಬೇಕೆಂಬ ಮನಸ್ಥಿತಿ ಕಾಂಗ್ರೆಸ್ ನ ಕೆಲ ಮುಖಂಡರಿಗಿದೆ ಎಂದರು.ಪಾಲಿಕೆಯಲ್ಲಿ ಭ್ರಷ್ಟಾಚಾರದ ಪಿತಾಮಹರು ಕಾಂಗ್ರೆಸ್ ನವರು ಅವರಿಂದ ಪಾಠಕಲಿಯುವ ಅವಶ್ಯಕತೆ ಇಲ್ಲ.ಅನಾವಶ್ಯಕ ಹೇಳಿಕೆ ನೀಡುವುದನ್ನು ಬಿಟ್ಟು ನಿಮ್ಮ ಪಕ್ಷದ ಕೆಲಸ ಮಾಡಿ ಎಂದು ಇದೇ ವೇಳೆ ಸಲಹೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಯಶವಂತ ರಾವ್ ಜಾಧವ್, ಶ್ರೀನಿವಾಸ್ ದಾಸಕರಿಯಪ್ಪ, ಬಿ.ಎಸ್. ಜಗದೀಶ್, ಡಿ.ಎಸ್. ಶಿವಶಂಕರ್, ಪ್ರಕಾಶ್, ಗೋವಿಂರಾಜ್, ಹಾಗೂ ಹೆಚ್.ಪಿ. ವಿಶ್ವಾಸ್ ಉಪಸ್ಥಿತರಿದ್ದರು.