ಕಾಂಗ್ರೆಸ್ ಪಕ್ಷದ ಗೃಹ ಲಕ್ಷ್ಮೀ ಯೋಜನೆಯಿಂದ ಮಹಿಳೆಗೆ ಸಂತೋಷ


ಸಂಜೆವಾಣಿ ವಾರ್ತೆ
ಸಂಡೂರು :ಸೆ:4 ಮಹಿಳಾ ಆರ್ಥಿಕ ಸಬಲೀಕರಣಕ್ಕೆ ರಾಜ್ಯ ಸರ್ಕಾರದಿಂದ ಕೊಡಲ್ಪಡುವ ಗೃಹಲಕ್ಷ್ಮೀಯ ಮನೆಯೊಡತಿ ಯಜಮಾನಿಗೆ ನೀಡುವ 2000/- ಗಳು ಮಹಿಳಾ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಿದ್ದು, ಆರೋಗ್ಯ ಶಿಕ್ಷಣ, ಮನೆಯ ಖರ್ಚನ್ನು ಹಿಡಿತದಲ್ಲಿಟ್ಟುಕೊಂಡು ವ್ಯಯಮಾಡಲು ಅನುಕೂಲಕರವಾಗಿ ಮನೆಯೊಡತಿಗೆ ನೀಡಿರುವ 2000/- ರೂ. ಅತ್ಯಂತ ಉಲ್ಲಾಸ ಮತ್ತು ಆನಂದ ಸಿದ್ದರಾಮಯ್ಯನವರ ಸರ್ಕಾರ ತಂದಿದೆ. ಮನೆಯೊಡತಿಗೆ ನೀಡಿರುವ 2000/- ರೂ. ದುರ್ಬಳಕೆ ಮಾಡದೇ ಸದ್ಬಳಕೆ ಮಾಡಿಕೊಳ್ಳಲಾಗುವುದು. ಸಿದ್ದರಾಮಯ್ಯನವರ ಸರ್ಕಾರ 5 ಗ್ಯಾರಂಟಿಗಳು ಜನತೆಗೆ ಉಪಯೋಗವಾಗಿದ್ದು, 5 ಗ್ಯಾರಂಟಿಗಳಲ್ಲಿ ಮೊದನಲೆನಯದು ವಾಹನಗಳಲ್ಲಿ ಮಹಿಳೆಗೆ ಉಚಿತ ಪ್ರಯಾಣ, ಎರೆಡನೆಯದಾಗಿ 2000/- ನೀಡುವಿಕೆ ಮೂರನೇಯದಾಗಿ ಗೃಹಜ್ಯೋತಿಯ ಕಾರ್ಯಕ್ರಮದಲ್ಲಿ 200 ಯುನಿಟ್ ಉಚಿತವಾಗಿ ನಿಡುವುದು. ನಾಲ್ಕಯದಾಗಿ ಬಿ.ಪಿ.ಎಲ್. ಅಂತ್ಯೋದಯ ಕಾರ್ಡುದಾರರಿಗೆ 3 ಕೆ.ಜಿ. ಅಕ್ಕಿ 2 ಕೆ.ಜಿ. ಜೋಳ ಜೊತೆಗೆ ಬ್ಯಾಂಕ್ ಖಾತೆಗೆ ಬಿ.ಪಿ.ಎಲ್. ಕಾರ್ಡುದಾರರಿಗೆ 170/- ಖಾತೆಗೆ ಜಮಾ. ಬಡವರ ಪಾಲಿನಿ ಸಂಜೀವಿನಿ ಸಿದ್ದರಾಮಯ್ಯನವರು ಎಂದು ಸಂಡೂರು ತಾಲ್ಲೂಕಿನ ಸುಶೀಲಾನಗರ ಗ್ರಾಮದ ಲಂಬಾಣಿ ಕಸೂತಿಯಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಮಹಿಳಾ ಗೌರಿಬಾಯಿನ್ನೊಳಗೊಂಡು ದುರುಗಮ್ಮ, ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕತೆರ್ಯರು ಮೆಚ್ಚುಗೆ ವ್ಯಕ್ತಪಡಿಸಿ ಸಿದ್ದರಾಮಯ್ಯನವರ ಸರ್ಕಾರ ನಿರಂತರವಗಿ ಜನಪರ ಕಾಳಜಿ ವಹಿಸಿ ಉತ್ತಮ ಸೇವೆ ಸಲ್ಲಿಸಲೀ ಎನ್ನುವುದೇ ಮಹಿಳೆಯರ ಶುಭ ಹಾರೈಕೆಯಗಿದೆ.
ವ್ಯಂಗ ಮಾಡಿದ ಯಜಮಾನಿ :
ಸಿದ್ದರಾಮಯ್ಯನವರ ಸರ್ಕಾರ 5 ಗ್ಯಾರಂಟಿಗಳಲ್ಲಿ 4 ಗ್ಯಾರಂಟಿಗಳನ್ನು ಈಡೇರಿಸಿದ್ದು, ಅದರಲ್ಲಿ ಮುಖ್ಯವಾಗಿ ಗೃಹ ಲಕ್ಷ್ಮೀ ಯೋಜನೆಯಡಿಯಲ್ಲಿ ಮನೆಯೊಡತಿಗೆ 2000/- ಪ್ರತಿ ತಿಂಗಳು ನೀಡುವ ಕಾರ್ಯಕ್ರಮ ಪುಷ್ಠಿದಾಯಕವಗಿದ್ದು, ಇದು ಎಷ್ಟು ದಿನ ? ನಡೆಯುತ್ತದೆಯೋ ನೋಡಬೇಕಾಗಿದೆ. ಶಿವನೇ ಬಲ್ಲ. ನಿರಂತರವಾಗಿ ಮನೆಯೊಡತಿಗೆ ರೂ. 2000/- ನೀಡಿದರೆ, ಮನೆ ಬಾಳ್ವೆಗೆ ಸಹಕಾರಿಯಗಲು ಸಾಧ್ಯ. ಕಾರ್ಯಕ್ರಮಗಳು ಪ್ರಾರಂಬದಲ್ಲಿ ಯಶಸ್ವಿಯಾಗಿ ತದನಂತರ ಹಿನ್ನಡೆಯಾಗಬಾರದು ಎನ್ನುವುದೇ ನನ್ನ ಸದಾಶಯವೆಂದು ಯಜಮಾನಿಯೊಬ್ಬರು ವ್ಯಂಗ ಮಡಿದರು.

One attachment • Scanned by Gmail