ಕಾಂಗ್ರೆಸ್ ಪಕ್ಷದಿಂದ 5 ದಿನ ನಿರಂತರ ಧರಣಿ

ದಾವಣಗೆರೆ.ಜೂ.11; ತೈಲಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದಿಂದ 5 ದಿನನಿರಂತರ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ ಮಂಜಪ್ಪ ಹೇಲಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಇಂದು ಕಾಂಗ್ರಸ್ ನ ವಿವಿಧ ಘಟಕಗಳಿಂದ ನಗರದ ಎಲ್ಲಾ ಪೆಟ್ರೋಲ್ ಬಂಕ್ ಗಳ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿದೆ.ನಾಳೆ ಎಲ್ಲಾ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಪ್ರತಿಭಟನೆ ಜರುಗಲಿದೆ.ಅದೇ ರೀತಿ ಜೂ.13 ರಂದು ಹೋಬಳಿಮಟ್ಟದಲ್ಲಿ,14 ರಂದು ಗ್ರಾ.ಪಂಗಳಲ್ಲಿ ಹಾಗೂ 15 ರಂದು ಉಳಿದ ಭಾಗಗಳಲ್ಲಿ ಚಳುವಳಿ ಹಮ್ಮಿಕೊಳ್ಳಲಾಗಿದೆ.ಪ್ರಧಾನಿ ನರೇಂದ್ರ ಮೊದಿಯವರು ಬೆಲೆ ನಿಯಂತ್ರಣ ಮಾಡುವುದಾಗಿ ಹೇಳಿ ಅಧಿಕಾರಕ್ಕೆ ಬಂದು ದೇಶದ ಜನರನ್ನು ವಂಚಿಸಿದ್ದಾರೆ.ಪೆಟ್ರೊಲ್ ಬೆಲೆ ನೂರರ ಗಡಿದಾಟಿದೆ.ಡಿಸೇಲ್, ಅನಿಲ ದರ ಗಗನಕ್ಕೇರಿದೆ.ನಿರಂತರ ಬೆಲೆ ಏರಿಕೆಯಿಂದಾಗಿ ರೈತರು ಹಾಗೂ ಬಡವರು ಜೀವನ ನಡೆಸುವುದು ಕಷ್ಟವಾಗಿದೆ.ತೈಲದ ಮೇಲಿನ ತೆರಿಗೆ ಹಿಂಪಡೆದರೆ ಜನರಿಗೆ ಕೊಂಚಮಟ್ಟಿಗೆ ಹೊರೆ ಕಡಿಮೆಯಾಗುತ್ತದೆ.ವಿಪಕ್ಷಗಳ ಮೇಲೆ ಗೂಬೆ ಕೂರಿಸುವುದರ ಬದಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚುನಾವಣೆಯಲ್ಲಿ ಭರವಸೆ ನೀಡಿದಂತೆ ತೈಲ ಬೆಲೆ ಇಳಿಕೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.ಲಸಿಕೆ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ.18 ಮೇಲ್ಪಟ್ಟವರಿಗೆ ಲಸಿಕೆ ನೀಡಲು ವಿಳಂಬ ಮಾಡಲಾಗುತ್ತಿದೆ. ಅದಕ್ಕಾಗಿಯೇ ಶಾಸಕರಾದ ಶಾಮನೂರು ಶಿವಶಂಕರಪ್ಪ ಅವರು ಸರ್ಕಾರ ಮಾಡ ಕೆಲಸವನ್ನು ಮಾಡುತ್ತಿದ್ದಾರೆ.ಜನತೆಗೆ ತೊಂದರೆಯಾಗದAತೆ ಲಸಿಕೆಯ ವ್ಯವಸ್ಥೆ ಮಾಡಿದ್ದಾರೆ ಎಂದರು.
ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಮಾತನಾಡಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕೆ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ.ಬಡವರು ಮದ್ಯಮವರ್ಗದವರು ಹೆಚ್ಚಾಗಿ ವಾಸಿಸುವ ವಾರ್ಡ್ಗಳಲ್ಲಿ ಲಸಿಕೆ ನೀಡದೆ ವಂಚಿಸಲಾಗುತ್ತಿದೆ.ಕನಿಷ್ಟ 20 ಸಾವಿರ ಲಸಿಕೆ ನಿತ್ಯ ಬಂದರೆ ಮಾತ್ರ ಸಮರ್ಪಕವಾಗಿ ಎಲ್ಲಾ ವಾಡ್ ðಗಳಲ್ಲಿ ಲಸಿಕೆ ಹಾಕಬಹುದಾಗಿದೆ.ಇಲ್ಲವಾದಲ್ಲಿ ಲಸಿಕೆಗಾಗಿ ವರ್ಷಗಳೇ ಕಾಯಬೇಕಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ದಿನೇಶ್ ಕೆ ಶೆಟ್ಟಿ,ಪಾಲಿಕೆ ಸದಸ್ಯ ಮಂಜುನಾಥ್ ಗಡಿಗುಡಾಳ್,ಜಿ.ಪಂ ಸದಸ್ಯ ಬಸವಂತಪ್ಪ,ಅನಿತಾಬಾಯಿ ಮತ್ತಿತರರಿದ್ದರು.
ಬಾಕ್ಸ್
ಮಾಜಿ ಕೇಂದ್ರ ಸಚಿವ ಮುನಿಯಪ್ಪ ಭೇಟಿ
ದಾವಣಗೆರೆ ಜಿಲ್ಲಾ ವೀಕ್ಷಕರಾಗಿ ನೇಮಕಗೊಂಡಿರುವ ಮಾಜಿ ಕೇಂದ್ರ ಸಚಿವ ಕೆ.ಹೆಚ್ ಮುನಿಯಪ್ಪ ನಾಳೆ ದಾವಣಗೆರೆಗೆ ಭೇಟಿ ನೀಡಲಿದ್ದಾರೆ.ನಾಳೆ