ಕಾಂಗ್ರೆಸ್ ಪಕ್ಷದಲ್ಲಿ ಮಾದಿಗ ಸಮಾಜ ಕಡೆಗಣನೆ ಹೇಳಿಕೆ ವಿಪರ್ಯಾಸ

ಕಲಬುರಗಿ,ಮಾ.11-ಕಾಂಗ್ರೆಸ್ ಪಕ್ಷದಲ್ಲಿ ಮಾದಿಗರಿಗೆ ಕಡೆಗಣಿಸುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಕಲಬುರಗಿ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲಿಂಗರಾಜ ತಾರಫೈಲ್ ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಮಾದಿಗ ಸಮಾಜದವರಾದ ಎಂ.ಶಿವಣ್ಣ ಅವರಿಗೆ ಸೇಡಂ ಕ್ಷೇತ್ರದಿಂದ ಟಿಕೆಟ್ ನೀಡಿ ಶಾಸಕರನ್ನಾಗಿ ಮಾಡಿ ಸಚಿವರನ್ನಾಗಿ ಮಾಡಿದ್ದು, ಜಿ.ರಾಮಕೃಷ್ಣ ಅವರಿಗೆ ಟಿಕೆಟ್ ನೀಡಿ ಶಾಸಕರನ್ನಾಗಿ, ಸಚಿವರನ್ನಾಗಿ ಮಾಡಿದ್ದು, ಗುಂಡಪ್ಪ ಕೋರವಾರ ಅವರಿಗೆ ರಾಜ್ಯಸಭಾ ಸದಸ್ಯರನ್ನಾಗಿ ಮಾಡಿದ್ದು, 2005ರ ವಿಧಾನಸಭೆಯ ಚುನಾವಣೆಯಲ್ಲಿ ಚಂದ್ರಿಕಾ ಪರಮೇಶ್ವರ್ ಅವರಿಗೆ ಟಿಕೆಟ್ ಕೊಟ್ಟಿದ್ದು, ರಾಜ್ಯ ವಿದ್ಯುತ್ ಶಕ್ತಿ ನಿಗಮ ಮಂಡಳಿಯ ಅಧ್ಯಕ್ಷರನ್ನಾಗಿ ಮತ್ತು ಮಹಾನಗರ ಪಾಲಿಕೆಯ ಮಹಾಪೌರರನ್ನಾಗಿ ಮಾಡಿದ್ದು, ಜಿ.ರಾಮಕೃಷ್ಣ ಅವರ ಪುತ್ರÀ ವಿಜಯಕುಮಾರ್ ರಾಮಕೃಷ್ಣ ಅವರಿಗೆ 2019ರ ವಿಧಾನಸಭೆಯ ಚುನಾವಣೆಯಲ್ಲಿ ಟಿಕೆಟ್ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. ಕಲಬುರಗಿ ಜಿಲ್ಲೆಯಲಿ ಮಾದಿಗ ಸಮಾಜಕ್ಕೆ ಇಷ್ಟೆಲ್ಲಾ ಕೊಟ್ಟಿರುವುದು ಕಾಂಗ್ರೆಸ್ ಪಕ.್ಷ 2014 ರ ವಿಧಾನಸಭಾ ಚುನಾವಣೆಯಲ್ಲಿ ಬಾಗಲಕೋಟೆಯಿಂದ ಮಾದಿಗ ಸಮಾಜದ ನಾಯಕರದ ಆರ್.ಬಿ.ತಿಮ್ಮಾಪುರ್ ರವರು ಸೋತರು ಸಹ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಿ ಕರ್ನಾಟಕ ಸರ್ಕಾರದಲ್ಲಿ ಸಚಿವರನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ.್ಷ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಎಷ್ಟೋ ವರ್ಷಗಳಾದವು ಆದರೂ ಕಲಬುರಗಿ ಜಿಲ್ಲೆಯಲ್ಲಿ ಇಲ್ಲಿಯ ತನಕ ಬೇರೆ ಪಕ್ಷದವರು ವಿಧಾನಸಭಾ ಚುನಾವಣೆಗಳಲ್ಲಿ ಮಾದಿಗರಿಗೆ ಒಂದೇ ಒಂದು ಸ್ಥಾನ ಕೊಟ್ಟಿರುವ ಉದಾಹರಣೆ ಇಲ್ಲ ಹಾಗೂ ರಾಜ್ಯ ನಿಗಮ ಮಂಡಳಿಗಳಲಿ ಒಂದೇ ಒಂದು ಅಧ್ಯಕ್ಷ ಸ್ಥಾನ ಕೊಟ್ಟಿರುವ ಉದಾಹರಣೆಗಳಿಲ್ಲ. ಕಾಂಗ್ರೆಸ್ ಪಕ್ಷ ಇಷ್ಟೆಲ್ಲಾ ಅವಕಾಶಗಳು ಕೊಟ್ಟರೂ ಸಹ ಕಾಂಗ್ರೆಸ್ ಪಕ್ಷದಲ್ಲಿ ಮಾದಿಗರಿಗೆ ಕಡೆಗಣಿಸುತ್ತಿದ್ದಾರೆ ಎಂದು ಹೇಳಿಕೆ ನೀಡುತ್ತಿರುವುದ ವಿಪರ್ಯಾಸ ಎಂದು ಅವರು ತಿಳಿಸಿದ್ದಾರೆ.