ಕಾಂಗ್ರೆಸ್ ಪಕ್ಷದಲ್ಲಿ ಭಿನ್ನ ಮತ ಸ್ಪೋಟ ಬ್ಯಾನರ್

ಪಾಲಿಟಿಕ್ಸ್ ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ,ನಾಯಕರಲ್ಲಿ ತಳಮಳ
ದುರುಗಪ್ಪ ಹೊಸಮನಿ
ಲಿಂಗಸುಗೂರು.ಜ.೧೬- ಲಿಂಗಸುಗೂರು ಕಾಂಗ್ರೆಸ್ ಪಕ್ಷದಲ್ಲಿ ಭಿನ್ನ ಮತ ಸ್ಪೋಟ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರಲ್ಲಿ ತಳಮಳಗಳು ಉಂಟಾಗಿದೆ ಇದರಿಂದ ಮೂಲ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಭಯ ಶುರುವಾಗಿದೆ ಹಾಗೂ ವಲಸೆ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿ ಆರ್ ರುದ್ರಯ್ಯ ಇವರ ಆಡಂಬರದ ರಾಜಕಾರಣಕ್ಕೆ ಮೂಲ ಕಾಂಗ್ರೆಸ್ ಪಕ್ಷಕ್ಕೆ ತಲ್ಲಣಗೊಳಿಸಿದೆ ಎಂದರೆ ತಪ್ಪಾಗಲಾರದು ಇಂತಹ ಸನ್ನಿವೇಶದಲ್ಲಿ ಲಿಂಗಸುಗೂರು ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ತಾಲ್ಲೂಕು ಅದ್ಯೆಕ್ಷ ಭೂಪನಗೌಡ ಪಾಟೀಲ್ ಕರಡಕಲ್ ಇವರ ಭಾವಚಿತ್ರವನ್ನು ಆರ್ ರುದ್ರಯ್ಯ ಇವರು ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಕೊರಲು ಪಟ್ಟಣದ ವಿವಿಧ ರಸ್ತೆಗಳ ಮೇಲೆ ಇರುವ ವಿದ್ಯುತ್ ಕಂಬಗಳಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಭಾವಚಿತ್ರವನ್ನು ಹಾಕುವ ಮುಖಾಂತರ ಕ್ಷೇತ್ರದಲ್ಲಿ ಸಂಚಲನೆ ಮೂಡಿಸಿದೆ .
ಏಕೆಂದರೆ ಇಲ್ಲಿರುವ ಮೂಲ ಕಾಂಗ್ರೆಸ್ ಪಕ್ಷಕ್ಕೆ ತುಂಬಾ ದಕ್ಕೆ ತರುವ ಮೂಲಕ ಆರ್ ರುದ್ರಯ್ಯ ಇವರು ಕೆಲಸ ಮಾಡುತ್ತಿದ್ದಾರೆ ಎಂಬುದು ಕ್ಷೇತ್ರದಲ್ಲಿ ಜನರು ಮಾತನಾಡುತ್ತಿದ್ದಾರೆ.ಒಂದು ಮೂಲದ ಪ್ರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತಾಲೂಕಿನ ಆಡಳಿತ ಪಕ್ಷದ ಅಧ್ಯಕ್ಷರ ತಿರ್ಮಾನ ಅಂತಿಮ ತೀರ್ಮಾನ ಎಂಬುದು ಈ ಮೊದಲಿಂದಲೂ ಕಾಂಗ್ರೆಸ್ ಪಕ್ಷದ ಸಿದ್ಧಾಂತವಾಗಿದೆ. ಆದರೆ ಆರ್. ರುದ್ರಯ್ಯ ಇವರು ಕಾಂಗ್ರೆಸ್ ಪಕ್ಷದ ವಲಸೆ ರಾಜಕಾರಣಿ ಎಂಬುದು ಕಾಂಗ್ರೆಸ್ ಪಕ್ಷದಿಂದಲೇ ಕೂತೂಹಲಕಾರಿ ವಿಚಾರಗಳು ಬೆಳಕಿಗೆ ಬರುತ್ತಿವೆ. ಆರ್. ರುದ್ರಯ್ಯ ಇವರಿಗೆ ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರವು ಕಬ್ಬಿಣದ ಕಡಲೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಾಣುತ್ತಿರುವ ಸತ್ಯವಾಗಿದೆ.
ಇದೆ ತಿಂಗಳಿನಲ್ಲಿ ನಡೆಯುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮುಖಂಡರ ಸೇರ್ಪಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಿಂದ ತಾಲುಕು ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ಭಾವಚಿತ್ರವನ್ನು ಹಾಕಲಾಗಿದೆ ಎಂದು ಆರ್. ರುದ್ರಯ್ಯ ಬಣದ ಪ್ರಮುಖ ಮುಖಂಡರ ಹೆಸರು ಹೇಳಲು ಇಚ್ಛಿಸದ ಮುಖಂಡರೊಬ್ಬರಿಂದ ಮಾಹಿತಿ ಸಂಜೆ ವಾಣಿ ಪತ್ರಿಕೆಗೆ ಮಾಹಿತಿ ಲಭಿಸಿದೆ.
ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೇಟ್ ಆಕಾಂಕ್ಷಿ ಆರ್ ರುದ್ರಯ್ಯ ಇವರ ನಡೆಗೆ ಮೂಲ ಕಾಂಗ್ರೆಸ್ ವಲಯದಲ್ಲಿ ಬಾರಿ ಆಕ್ರೋಶ ವ್ಯಕ್ತವಾಗಿದೆ. ಕಾಂಗ್ರೆಸ್ ಪಕ್ಷದ ಹಾಲಿ ಅಧ್ಯಕ್ಷರ ಗಮನಕ್ಕೆ ತರದೆ ತಮ್ಮ ಮನಸ್ಸಿಗೆ ಬಂದಂತೆ ಭಾವಚಿತ್ರ ಹಾಕಿ ಅಧ್ಯಕ್ಷ ರ ತೇಜೋವಜಗೆ ಕಾರಣವಾಗಿದೆ ಎಂಬುದು ಸ್ಪಷ್ಟವಾಗುತ್ತದೆ ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆ ಯಾಗುವದಂತು ಖಂಡಿತ ಎಂಬುದು ಸಾರ್ವಜನಿಕರು ಮಾತನಾಡುತ್ತಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಮೂಲ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ಕಾರ್ಯಕರ್ತರಿಗೆ ಇರುಸು ಮುರುಸು ಉಂಟಾಗುವ ಸಾಧ್ಯತೆ ಇದೆ.
ವಲಸೆ ರಾಜಕಾರಣಿಯಾದ ಆರ್ ರುದ್ರಯ್ಯ ಇವರು ಈಗಾಗಲೇ ಕಾಂಗ್ರೆಸ್ ಪಕ್ಷದ ಟಿಕೇಟ್ ನನಗೆ ಎಂದು ಕ್ಷೇತ್ರದಲ್ಲಿ ಸಂಚಾರ ಮಾಡುತ್ತಾ, ಮುಂದಿನ ಚುನಾವಣೆಯಲ್ಲಿ ನಾನೆ ಕಾಂಗ್ರೆಸ್ ಪಕ್ಷದ ಟಿಕೆಟ್ ಅಧಿಕೃತ ಅಭ್ಯರ್ಥಿ ಎಂದು ಹೇಳುವುದು ಕೆಲಸವಾಗಿದೆ. ಆದರೆ ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಡಿ ಎಸ್ ಹೂಲಗೇರಿ ಇವರಿಗೆ ಟಿಕೆಟ್ ಸಿಗುವುದು ಕಷ್ಟವಾಗುತ್ತದೆ ಎಂಬ ವಿಷಯ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ .
ಆರ್ ರುದ್ರಯ್ಯ ಬಣ ರಾಜಕೀಯಕ್ಕೆ ಮುನ್ನುಡಿ ಬರೆದಂತೆ ಕ್ಷೇತ್ರದಲ್ಲಿ ಕಾಣುತ್ತದೆ ಇತ್ತ ಕಡೆ ಡಿ ಎಸ್ ಹೂಲಗೇರಿ ಇವರ ಬಣದ ನಾಯಕರು ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಬಣ ರಾಜಕೀಯಕ್ಕೆ ಯಾವ ರೀತಿ ಒಗ್ಗಟ್ಟಿನಿಂದ ಹೊರಾಟ ಮಾಡಿ ಮೂಗು ದಾರ ಹಾಕಿ ಕೆಲಸ ಮಾಡುತ್ತಾರೆ ಎಂಬುದು ಕ್ಷೇತ್ರದ ಜನರು ಕಾದುನೋಡಬೇಕಿದೆ.
ಶಾಸಕ ಹೂಲಗೇರಿ ಇವರಿಗೆ ಬಿಸಿ ಮುಟ್ಟಿಸಲು ಆಧುನಿಕ ತಂತ್ರಜ್ಞಾನ ಬಳಸಿ ಆರ್ ರುದ್ರಯ್ಯ ಕೆಲಸ ಮಾಡುತ್ತಿದ್ದಾರೆ ಅಲ್ಲದೆ ಹಾಲಿ ಶಾಸಕರಿಗೆ ರುದ್ರಯ್ಯ ನಡೆಯಿಂದ ಬಿಸಿ ತುಪ್ಪವಾಗುವದೆ? ಎಂಬ ಪ್ರಶ್ನೆಗೆ ಉತ್ತರ ಹುಡುಕಬೇಕಿದೆ.
ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆರ್ ರುದ್ರಯ್ಯ ಇವರಿಗೆ ಯಾವ ರೀತಿ ಮೂಗು ದಾರ ಹಾಕಲಾಗುತ್ತಿದೆ ಎಂಬುದು ಕಾಂಗ್ರೆಸ್ ಪಕ್ಷದ ವಲಯದಲ್ಲಿ ಕೇಳಿ ಬರುತ್ತಿದೆ. ಬ್ಯಾನರ್ ಪಾಲಿಟಿಕ್ಸ್ ಮಾಡಿದ ಆರ್. ರುದ್ರಯ್ಯ ಇವರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಯಾವ ರೀತಿ ಕ್ರಮ ಕೈಗೊಳ್ಳಲು ಮುಂದಾಗುತ್ತಾರೆ ಎಂಬುದು ಕ್ಷೇತ್ರದ ಮತದಾರರು ಸಾರ್ವಜನಿಕರು ಕಾದುನೋಡಬೇಕಾಗಿದೆ.