ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ

ದಾವಣಗೆರೆ.ಮಾ.೨೭; ಚನ್ನಗಿರಿ ತಾಲ್ಲೂಕಿನ ಸೋಮ್ಲಾಪುರ ತಾಂಡದ ಎಸ್.ಹೆಚ್. ರವಿಕುಮಾರ್, ಕಾರಿಗನೂರು ಗ್ರಾಮದ ಡಾ.ಡಿ. ತುಳಸಿನಾಯ್ಕ್ ಇವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಬಿ. ಮಂಜಪ್ಪ ಅವರ ಹೊನ್ನಾಳಿ ನಿವಾಸದಲ್ಲಿ  ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭದಲ್ಲಿ ಪಕ್ಷದ ರಾಜ್ಯ ಪರಿಶಿಷ್ಟ ಜಾತಿಗಳ ಉಪಾಧ್ಯಕ್ಷ ನಾಗರಾಜ ನಾಯ್ಕ್, ವಕೀಲ ಕಾಶೀನಾಯ್ಕ್, ನಂಜಾನಾಯ್ಕ್ ಕಬ್ಬಳ, ಕೃಷ್ಣನಾಯ್ಕ್ ಸೋಮ್ಲಾಪುರ ತಾಂಡ, ಜಿಲ್ಲಾ ಕಾಂಗ್ರೇಸ್ ಯುವ ಮುಖಂಡ ಮಂಜಾನಾಯ್ಕ್ ನಾಗರಕಟ್ಟೆ, ಪರಮೇಶ್ವರಪ್ಪ ಸೋಮ್ಲಾಪುರ ತಾಂಡ, ಶಿವನಾಯ್ಕ್ ಕಬ್ಬಳ, ಗೋವಿಂದಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು ಎಂದು ರಾಜ್ಯ ಪರಿಶಿಷ್ಟ ಜಾತಿಗಳ ಉಪಾಧ್ಯಕ್ಷ ನಾಗರಾಜ ನಾಯ್ಕ್ ತಿಳಿಸಿದ್ದಾರೆ.