ಕಾಂಗ್ರೆಸ್ ಪಕ್ಷಕ್ಕೆ ಯಾದವ ಸಮಾಜದ ತಿರುಗೇಟು; ಬಾಡದ ಆನಂದರಾಜ್


ದಾವಣಗೆರೆ ನ ೧೦:- ಮೂರು ದಶಕಗಳ ಕಾಲ ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿದ್ದ ಯಾದವ ಸಮಾಜ .ಈ ಸಮಾಜವನ್ನ ರಾಜಕೀಯವಾಗಿ. ಶೈಕ್ಷಣಿಕವಾಗಿ.ಸಾಮಾಜಿಕವಾಗಿ ಅಭಿವೃದ್ಧಿ ಹೊಂದದಂತೆ ನೋಡಿಕೊಂಡು ಬಂದಿರುವ ಕಾಂಗ್ರೆಸ್ ಪಕ್ಷಕ್ಕೆ ನಾಡಿನ ಯಾದವ ಸಮಾಜ ಬಾಂಧವರು ತಿರುಗೇಟು ನೀಡಿದ್ದಾರೆ ಎಂದು ದಾವಣಗೆರೆ ಯಾದವ ಮಹಾಸಭಾದ ಜಿಲ್ಲಾಧ್ಯಕ್ಷ ಬಾಡದ ಆನಂದರಾಜ್ ಪತ್ರಿಕಾ ಹೇಳಿಕೆ ನೀಡಿದ್ದಾರೆ. ರಾಜ್ಯದ ಎರಡು ಉಪ ಚುನಾವಣೆಗಳಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ಯಾದವ ಸಮಾಜದ ಮತಗಳು ಬಿಜೆಪಿ ಗೆ ಬೆಂಬಲಿಸಿದ್ದಾರೆ. ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ರವರು ಚುನಾವಣೆ ಸಂದರ್ಭದಲ್ಲಿ ಯಾದವ ಸಮಾಜವನ್ನು ಮೀಸಲಾತಿಗೆ ಒಳಪಡಿಸುತ್ತೇನೆ ರಾಜಕೀಯವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಸರ್ಕಾರ ಬದ್ದವಾಗಿದೆ ಎಂದು ಹೇಳಿದ್ದಕ್ಕೆ ನಾಡಿನ ಯಾದವ ಬಂಧುಗಳು ಬಿಜೆಪಿ ಬೆಂಬಲಿಸಿದ್ದಾರೆಂದು ಬಾಡದ ಆನಂದರಾಜ್ ಹೇಳಿದ್ದಾರೆ.
ಪೋಟೋ-೭೭