ಕಾಂಗ್ರೆಸ್ ಪಕ್ಷಕ್ಕೆ ಮರಳಿ ರಮೇಶ ಡಾಕುಳಗಿ

(ಸಂಜೆವಾಣಿ ವಾರ್ತೆ)
ಹುಮನಾಬಾದ್:ಅ.29: ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ ಡಾಕುಳಗಿ ಜೆಡಿಎಸ್ ತೊರೆದು ಶಾಸಕ ರಾಜಶೇಖರ ಪಾಟೀಲ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮರಳಿದರು . ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾಕುಳಗಿ ಅವರಿಗೆ ಪಕ್ಷದ ಧ್ವಜ ಮತ್ತು ಸದಸ್ಯತ್ವ ಪ್ರಮಾಣಪತ್ರ ನೀಡಿ ಬರಮಾಡಿಕೊಂಡ ಶಾಸಕ ಪಾಟೀಲ್ ಮಾತನಾಡಿ , ಕಾಂಗ್ರೆಸ್‍ನಿಂದ ತಾಪಂ ಸದಸ್ಯ , ಐದು ವರ್ಷ ಅಧ್ಯಕ್ಷರಾಗಿದ್ದ ಡಾಕುಳಗಿ ಕೆಲ ತಿಂಗಳ ಹಿಂದೆ ನಮ್ಮ ಪಕ್ಷ ತೊರೆದು ಜೆಡಿಎಸ್‍ಗೆ ಸೇರಿದ್ದರು . ಸಾಮಾಜಿಕ ನ್ಯಾಯ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ . ಹೀಗಾಗಿ ಈಗ ಸ್ವಇಚ್ಛೆಯಿಂದ ಮರಳಿ ಮನೆಗೆ ಬಂದಿದ್ದು , ಕಾಂಗ್ರೆಸ್‍ನಲ್ಲಿ ಮೊದಲಿನಂತೆಯೇ ಪ್ರೀತಿ , ಗೌರವ ದೊರೆಯಲಿದೆ ಎಂದರು . ರಮೇಶ ಡಾಕುಳಗಿ ಮಾತನಾಡಿ , ರಾಜಕೀಯವಾಗಿ ಬೆಳೆದು ತಾಪಂ ಅಧ್ಯಕ್ಷನಾಗಿ ಸೇವೆ ಸಲ್ಲಿಸಿರುವುದರಲ್ಲಿ ಶಾಸಕ ಪಾಟೀಲ್ ಮತ್ತು ಕಾಂಗ್ರೆಸ್ ನ ಪಕ್ಷದ ಪ್ರಮುಖರು , ಮತದಾರರ ಪಾತ್ರ ಎಂದಿಗೂ
ಮರೆಯುವುದಿಲ್ಲ . ಕಾರಣಾಂತರಗಳಿಂದ ಜೆಡಿಎಸ್ ಗೆ ಹೋಗಿದ್ದೆ . ಆದರೆ ಶಾಸಕ ರಾಜಶೇಖರ ಪಾಟೀಲರ ಕುಟುಂಬದ ಒಡನಾಟ ಮತ್ತು ಒಡನಾಟ ಮತ್ತು ಕಾಂಗ್ರೆಸ್‍ನಲ್ಲಿ ನಂಬಿಕೆಯಿಟ್ಟು ಮರಳಿ ಮನೆಗೆ ಬಂದ ಸಂತಸವಿದೆ ಎಂದು ಹೇಳಿದರು . ವಿಧಾನ ಪರಿಷತ್ ಸದಸ್ಯರಾದ ಡಾ.ಚಂದ್ರಶೇಖರ ಪಾಟೀಲ್ , ಭೀಮರಾವ ಪಾಟೀಲ್ , ಟಿಎಪಿಸಿಎಂಎಸ್ ಅಧ್ಯಕ್ಷ ಅಭಿಷೇಕ ಪಾಟೀಲ್ , ಪುರಸಭೆ ಅಧ್ಯಕ್ಷೆ ನೀತು ಶರ್ಮಾ , ಹಳ್ಳಿಖೇಡ ಪುರಸಭೆ ಮಾಜಿ ಅಧ್ಯಕ್ಷ ಮಹಾಂತಯ್ಯ ತೀರ್ಥ , ಬ್ಲಾಕ್ ಕಮಿಟಿ ಅಧ್ಯಕ್ಷ ಅಪ್ಪರ್
ಮಿಯಾ , ಮಹಿಳಾ ಘಟಕದ ಅಧ್ಯಕ್ಷೆ ಸುರೇಖಾ ರಡ್ಡಿ , ಪ್ರಮುಖರಾದ ಕಂಟೆಪ್ಪ ದಾನಾ , ಅಣ್ಣಾರಾವ ಪಾಟೀಲ್ , ಪ್ರಭು ತಾಳಮಡಗಿ , ಲಕ್ಷ್ಮೀಪುತ್ರ ಮಾಳಗೆ , ಸುರೇಶ ಘಾಂಗ್ರೆ , ಹುಲೆಪ್ಪ ಪವಿತ್ರ , ಪ್ರಭು ಚಿತ್ತಕೋಟಾ , ಕೃಷ್ಣಪ್ಪ ಹಾಲಗೋರ್ಟೆ , ಪರಮೇಶ್ವರ ಪಾಟೀಲ್ , ವಿಠಲರಾವ ಕಲ್ಯಾಣಿ ಇತರರಿದ್ದರು . ಪಕ್ಷ ಸೇರ್ಪಡೆ ಹಿನ್ನೆಲೆಯಲ್ಲಿ ಶಾಸಕ ಪಾಟೀಲ್ ಮನೆ ಹತ್ತಿರದಿಂದ ಅಂಬೇಡ್ಕರ್ ವೃತ್ತದ ಮೂಲಕ ನೌಕರರ ಭವನವರೆಗೆ ಮೆರವಣಿಗೆ ನಡೆಯಿತು