ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಅಧಿಕಾರಕ್ಕೆ ತನ್ನಿ ಬಾದರ್ಲಿ

ಸಿಂಧನೂರು.ಮಾ.೨೭ ಬಡವರು ದೀನ ದಲಿತರು ಸೇರಿದಂತೆ ಎಲ್ಲಾ ವರ್ಗಗಳ ಜನರ ಪಕ್ಷ ವೆಂದರೆ ಅದು ಕಾಂಗ್ರೆಸ ಪಕ್ಷ ವಾಗಿದೆ ಜನಪರ ಯೋಜನೆಗಳನ್ನು ಜಾರಿ ತಂದು ಅಬಿವೃದ್ಧಿ ಮಾಡುವ ಕಾಂಗ್ರೆಸ ಪಕ್ಷಕ್ಕೆ ಮತ ನೀಡಿ ಗೆಲ್ಲಿಸಿ ಅಧಿಕಾರಕ್ಕೆ ತರಬೇಕು ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಜನರಲ್ಲಿ ಮನವಿ ಮಾಡಿಕೊಂಡರು.
ನಗರದ ೧೯ ಮತ್ತು ೨೦ ವಾರ್ಡಗಳಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿ.ನಗರಸಭೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಪಾಟೀಲ. ಉಪಾಧ್ಯಕ್ಷರಾದ ಮುರ್ತುಜಾ. ನಗರ ಸಭೆಯ ಸದಸ್ಯರು ಹಾಗೂ ಪಕ್ಷದ ಮುಖಂಡರ ಜೊತೆ ಗೂಡಿ ವಾರ್ಡಗಳಲ್ಲಿ ಸಂಚಾರ ಮಾಡಿ ಜನರ ಸಮಸ್ಯೆಗಳನ್ನು ಆಲಿಸಿದ ನಂತರ.ಸಂಜೆ ವಾರ್ಡ್ ೨೩ ರಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಾರ್ವಜನಿಕರ ಸಭೆಯನ್ನು ಉದ್ದೇಶಿಸಿ ಭಾಷಣ ಮಾಡಿದ ಅವರು ಕಾಂಗ್ರೆಸ ಪಕ್ಷ ತತ್ವ ಸಿದ್ಧಾಂತ.ಜನಪರ ಯೋಜನೆ ಗಳನ್ನು ಜಾರಿಗೆ ತಂದು ಅಭಿವೃದ್ಧಿ ಮಾಡುವ ಮೂಲಕ ಎಲ್ಲಾ ಸಮುದಾಯಗಳ.ಅಭಿವೃದ್ಧಿಯ ಬಯಸುವ ಪಕ್ಷ ಕಾಂಗ್ರೆಸ ಎಂದರು.
ಸಿದ್ಧರಾಮಯ್ಯ ಮುಖ್ಯ ಮಂತ್ರಿಯಾಗಿದ್ದಾಗ ಅನೇಕ ಜನಪರ ಬಾಗ್ಯಗಳನ್ನು ಜಾರಿಗೆ ತಂದಿದ್ದಾರೆ ಅಲ್ಲದೆ ಬಡವರ ಹಾಗೂ ವಿದ್ಯಾರ್ಥಿಗಳ ಹಸಿದು ಹೊಟ್ಟೆ ತುಂಬಿಸಲು ಇಂದಿರಾ ಕ್ಯಾಟೀನ್ ಆರಂಭಿಸಿದರು ಮಹಿಳೆಯರ ಹಾಗೂ ನಿರುದ್ಯೋಗ ಯುವಕರಿಗಾಗಿ ಅನೇಕ ಹೊಸ ಯೋಜನೆಗಳನ್ನು ಜಾರಿಗೆ ತಂದರು ಎಂದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಯವರು ಯುಪಿಎ ಸರ್ಕಾರದ ಅವಧಿಯಲ್ಲಿ ಪಕ್ಷದ ಮುಖಂಡರಾದ ಸೋನಿಯಾ ಗಾಂಧಿ .ರಾಹುಲ್ ಗಾಂಧಿಯವರ ಮೇಲೆ ಒತ್ತಡ ಹಾಕಿ ೩೭೧ ಕಲಂ ಜಾರಿಗೆ ಮನವಿ ಮಾಡಿಕೊಂಡ ಮೇಲೆ ೩೭೧ ಜಾರಿಗೆ ಬಂದ ಮೇಲೆ ಹೈದರಾಬಾದ ಕರ್ನಾಟಕ ಭಾಗದ ನಿರುದ್ಯೋಗ ಯುವಕರ ಮನೆ ಭಾಗಿಲಿಗೆ ಉದ್ಯೋಗಗಳು ಬಂದವು ಎಂದರು.
೨೩ ವಾರ್ಡಿನಲ್ಲಿ ವಾಸ ಮಾಡುತ್ತಿರುವರೆಲ್ಲರು ಬಡ ಕೂಲಿ ಕಾರ್ಮಿಕರಿದ್ದು ಅವರಿಗೆ ಮನೆಗಳಿಲ್ಲ ಈ ವಾರ್ಡ್ ನ್ನು ಕೊಳಚೆ ಪ್ರದೇಶ ವೆಂದು ಘೋಷಣೆ ಮಾಡುವಂತೆ ಈಗಾಗಲೆ ನಗರ ಸಭೆಯಿಂದ ಪ್ರಸ್ತಾವನೆಯನ್ನು ಕಳಿಸಲಾಗಿದೆ ಇದಕ್ಕೆ ಶಾಸಕ ವೆಂಟರಾವ ನಾಡಗೌಡ ಅಡ್ಡಿ ಹಾಲು ಹಾಕಿ ಮನೆಗಳನ್ನು ಸಿಗದಂತೆ ಮಾಡಿದ್ದಾರೆ ನೀವು ಈ ಜನರಿಗೆ ಮನೆಗಳನ್ನು ಮಂಜೂರು ಮಾಡಿಸಿ ಕಟ್ಟಿಸಿ ಕೊಡುವಂತೆ ಹಂಪನಗೌಡ ರಲ್ಲಿ ನಗರ ಸಭೆಯ ಸದಸ್ಯರಾದ ಶೇಖರ ಪ್ಪ ಗಿಣೀವಾರ ಮನವಿ ಮಾಡಿಕೊಂಡರು.
ಶೌಚಾಲಯ ಇಲ್ಲದಿರುವುದರಿಂದ ವಾರ್ಡಿ ನ ಮಹಿಳೆಯರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು ಅವರ ಇವರ ಕಾಲು ಇಡಿದು ಬೇಡಿಕೊಂಡು ಶೌಚಾಲಯ ನಿರ್ಮಾಣ ಮಾಡುತ್ತಿರುವೆ ಹಂಪನಗೌಡರು. ಮಲ್ಲಿಕಾರ್ಜುನ ಪಾಟೀಲ ನಿಮ್ಮ ಆಶೀರ್ವಾದ ದಿಂದ ನಾನು ಸದಸ್ಯ ನಾಗಿದ್ದೇನೆ ನನ್ನ ಅಧಿಕಾರದ ಅವಧಿಯಲ್ಲಿ ವಾರ್ಡ್ ನ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತೇನೆ ನಿಮ್ಮ ಆಶೀರ್ವಾದ ನನ್ನ ಹಾಗೂ ಪಕ್ಷದ ಮೇಲೆ ಇರಲಿ. ಎಂದು ಸದಸ್ಯರಾದ ಶೇಖರಪ್ಪ ಗಿಣೀವಾರ ವಾರ್ಡ್ ನ ಜಪರಲ್ಲಿ ಮನವಿ ಮಾಡಿಕೊಂಡರು.
ವಕೀಲರಾದ ಹೆಚ್. ರಾಮನಗೌಡ .ನಿರುಪಾದಪ್ಪ ಗುಡಿಹಾಳ. ಖಾಜಿಮಲ್ಲಿಕ್ ಸತ್ಯನಗೌಡ ವಳಬಳ್ಳಾರಿ. ನಗರಸಭೆಯ ಉಪಾಧ್ಯಕ್ಷರಾದ ಮುರ್ತುಜಾ ಹುಸೇನ್ ಸದಸ್ಯರಾದ ಹೆಚ್. ಬಾಷಾ. ಶರಣಪ್ಪ ಉಪ್ಪಲ ದೊಡ್ಡಿ. ಮಾಜಿ ಸದಸ್ಯರಾದ ವೆಂಕಟೇಶ್ ದತ್ತು ರಾವ್. ವಾರ್ಡ್ ನ ಮುಖಂಡರಾದ ರಮೇಶ ಗೆಜ್ಜಲಗೆಟ್ಟಿ.ಸತ್ಯಪ್ಪ.ಚಂದ್ರಪ್ಪ ನಾಯಕ.ಕರವೇ ಅಧ್ಯಕ್ಷ ರಾದ ದಾವಲಸಾಬ ದೊಡ್ಡ ಮನಿ. ವಿರೇಶ ಅಂಗಡಿ ಪರಶುರಾಮ. ಶರಣಪ್ಪ ಗಿಣೀವಾರ. ಸೇರಿದಂತೆ ಇತರರು ಇದ್ದರು ಕಾರ್ಯಕ್ರಮಕ್ಕೂ ಮುಂಚೆ ಮಾಜಿ ಶಾಸಕ ಹಂಪನಗೌಡ ಬಾದರ್ಲಿಯವರನ್ನು ಬಾಜಾ ಬಜಂತ್ರಿಗಳಿಂದ ಪಟಾಕಿ ಸಿಡಿಸುವ ಮೂಲಕ ಅದ್ದೂರಿಯಾಗಿ ವಾರ್ಡ್ ಗೆ ಜನ ಹಾಗೂ ಸದಸ್ಯರಾದ ಶೇಖರಪ್ಪ ಗಿಣೀವಾರ ಬರಮಾಡಿ ಕೊಂಡರು ಇದೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಯುವಕರನ್ನ ಕಾಂಗ್ರೆಸ ಪಕ್ಷ ಕ್ಕೆ ಶಾಲು ಹಾಕಿ ಹಂಪನಗೌಡರು ಬರಮಾಡಿಕೊಂಡರು.