ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ಮನವಿ

ಕೋಲಾರ, ಮೇ ೩: ಬಿಹಾರದ ಶಾಸಕ, ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಪಕ್ಷದ ಜಿಲ್ಲಾ ವೀಕ್ಷಕ ಡಾ.ಶಕೀಲ್ ಅಹಮ್ಮದ್ ಖಾನ್, ಅಖಿಲ ಭಾರತ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ರಾಷ್ಟ್ರೀಯ ಸಂಯೋಜಕ ಮಹಮ್ಮದ್ ಅಕ್ರಮ್ ಮಂಗಳವಾರ ಶ್ರೀ ದೇವರಾಜ ಅರಸು ಮಹಾ ವಿಶ್ವವಿದ್ಯಾಲಯದ ಅಧ್ಯಕ್ಷ ಜಿ.ಹೆಚ್.ನಾಗರಾಜ್‌ರನ್ನು ಜಾಲಪ್ಪ ಆಸ್ಪತ್ರೆಯ ಅತಿಥಿ ಗೃಹದಲ್ಲಿ ಭೇಟಿ ಮಾಡಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವಂತೆ ಕೋರಿದರು.
ಕಾಂಗ್ರೆಸ್ ಪಕ್ಷ ಈ ಬಾರಿ ಸರ್ಕಾರ ರಚನೆ ಮಾಡಲು ತಮ್ಮ ಮತ್ತು ತಮ್ಮ ಸಂಸ್ಥೆಯ ನೌಕರರು, ಅಧಿಕಾರಿಗಳು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಕೋರಿದರು.