ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಲು ಸಿ-ಇಂದೂಧರ ಮನವಿ

ಕೋಲಾರ, ಮೇ ೨-ದಲ್ಲಾಳಿ ರಾಜಕಾರಣಿಗಳು, ಲೂಟಿಕೋರ ಉದ್ಯಮಿಗಳು ಹಾಗೂ ಪುರೋಹಿತಶಾಹಿ ವರ್ಗ ದೇಶ ಮತ್ತು ರಾಜ್ಯವನ್ನು ಆಳುತ್ತಿವೆ. ಈ ಮೂವರ ದುಷ್ಟ ಕೂಟವನ್ನು ಕೆಳಗಿಳಿಸಲು ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸಿ ರಾಜ್ಯದ ಅಸ್ಮಿತೆ ಉಳಿಸಬೇಕಾಗಿದೆ ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಸಂಯೋಜಕ ಇಂದೂಧರ ಹೊನ್ನಾಪುರ ಅಭಿಪ್ರಾಯ ಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ಇಂದಿರಾ ಗಾಂಧಿ ಅವರಿಗಿಂತ ತೀವ್ರವಾದ ಅಘೋಷಿತ ತುರ್ತು ಪರಿಸ್ಥಿತಿಯನ್ನು ಬಿಜೆಪಿ ದೇಶದ ಮೇಲೆ ಹೇರಿದೆ. ಪ್ರಭುತ್ವದ ವಿರುದ್ಧ ಮಾತನಾಡಿದವರ ವಿರುದ್ಧ ಪ್ರಕರಣ ದಾಖಲಿಸುತ್ತಿದೆ ಪತ್ರಕರ್ತರು ಹೋರಾಟಗಾರರ ಹಕ್ಕುಗಳನ್ನು ಹತ್ತಿಕ್ಕಲಾಗುತ್ತಿದೆ. ಕರಾಳ ಬಿಜೆಪಿ ಅಧ್ಯಯನ ಕೊನೆಗೊಳ್ಳಬೇಕು. ಹೀಗಾಗಿ ಬಿಜೆಪಿ ಸೋಲಿಸ ಬೇಕೆಂದು ಕರೆ ನೀಡಿದರು,
ಬಂಡವಾಳಶಾಹಿ ದಲ್ಲಾಳಿಗಳು ದೇಶವನ್ನು ಆಳುತ್ತಿದ್ದಾರೆ. ದ್ವೇಷ ಬಿತ್ತಿ ಮನಸ್ಸುಗಳನ್ನು ಒಡೆಯುತ್ತಿದ್ದಾರೆ. ಹಿಂದೆ ಮುತ್ಸದ್ಧಿ ರಾಜಕಾರಣಿಗಳು ಜನರ ಸಮಸ್ಯೆ ಅರಿತು ದೇಶ ಆಳುತ್ತಿದ್ದರು. ಈಗ ಆಂತರಿಕ ಸಂಘರ್ಷ ಹುಟ್ಟು ಹಾಕಿ ದೇಶ ಆಳುತ್ತಿದ್ದಾರ ಜೆಡಿಎಸ್ ಈಗ ಜಾತ್ಯತೀತ ಪಕ್ಷವಾಗಿ ಉಳಿದಿಲ್ಲ. ಹೀಗಾಗಿ, ಅವರಿಗೆ ನಮ್ಮ ಬೆಂಬಲ ಇಲ್ಲ. ಕಾಂಗ್ರೆಸ್ ನಮಗೆ ಪರ್ಯಾಯ ಹಾಗೂ ಅನಿವಾರ್ಯ ಅಲ್ಲ. ಆದರೆ, ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಲು ಅವರಿಗೆ ಬೆಂಬಲ ನೀಡುತ್ತಿದ್ದೇವೆ. ದಲಿತ ಚಳವಳಿಯು ರಾಜಕಾರಣದಲ್ಲಿ ತೊಡುಗುವುದಿಲ್ಲ ಎಂದು ಹೇಳಿದರು.
ಜೆಡಿಎಸ್‌ಗೆ ಸಂಖ್ಯೆಬಲ ಇಲ್ಲ. ವರುಣಾದಲ್ಲಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪಕ್ಷದಿಂದ ದಲಿತ ಅಭ್ಯರ್ಥಿ ನಿಲ್ಲಿಸಿ ಮತ ವಿಭಜನೆ ಮಾಡುವ ತಂತ್ರಗಾರಿಕೆಯನ್ನು ಮಾಡಲಾಗುತ್ತಿದೆ. ಯಾವೂದೇ ಕಾರಣಕ್ಕೂ ನಾವು ಕೋಮುವಾದಿ ಪಕ್ಷವನ್ನು ಬೆಂಬಲಿಸಲ್ಲ. ಕಾಂಗ್ರೆಸ್‌ಗೆ ಸಂವಿಧಾನದ ಮೇಲೆ ನಂಬಿಕೆ ಇರುವುದರಿಂದ ನಮ್ಮಗಳ ಬೆಂಬಲ ಕಾಂಗ್ರೇಸ್ ಪಕ್ಷಕ್ಕೆ ಷರತ್ತು ಬದ್ದವಾಗಿ ಘೋಷಿಸಿದ್ದೇವೆ ತಿಳಿಸಿದರು
ಈ ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ರಾಜ್ಯ ಸಂಯೋಜಕರಾದ ಎನ್.ವೆಂಕಟೇಶ್, ರಾಜ್ಯ ಸಂಯೋಜಕ ಗುರುಪ್ರಸಾದ್ ಕೆರಗೋಡು, ವಿ.ನಾಗರಾಜ್, ಮಾವಳ್ಳಿ ಶಂಕರ್, ಅಣ್ಣಯ್ಯ, ಜಿಗಣಿ ಶಂಕರ್, ಜಿಲ್ಲಾ ಸಾಂಸ್ಕೃತಿಕ ಸಂಚಾಲಕ ಹಾರೋಹಳ್ಳಿ ರವಿ ಇದ್ದರು.