ಕಾಂಗ್ರೆಸ್ ನ ಗ್ಯಾರೆಂಟಿ ಕಾರ್ಡ್ ಗೆ ಮತದಾರ ಮರುಳಾಗಲ್ಲ: ಶ್ರೀರಾಮುಲು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.23: ಕಾಂಗ್ರೆಸ್  ಗ್ಯಾರೆಂಟಿ    ಗಿಮಿಕ್ಸ್ ಗೆ ರಾಜ್ಯದ ಮತದಾರರು  ಮರಳಾಗೋದಿಲ್ಲ. ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ಈ ಬಾರಿಯ  ಚುನಾವಣೆಯಲ್ಲಿ ಅಧಿಕಾರವಿಲ್ಕದೆ ಮನೆಗೆ ಕಳುಹಿಸುತ್ತಾರೆ. ಬಿಜೆಪಿ ಮತ್ತೊಮ್ಮೆ ಅಭಿವೃದ್ದಿ ಕಾರ್ಯಗಳ ಮೂಲಕ ಅಧಿಕಾರಕ್ಕೆ ಬರೋದು ಖಚಿತ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ಅವರು ನಿನ್ನೆ ನಗರದ ಕನಕ ದುರ್ಗಮ್ಮ ರೈಲ್ವೇ ಅಂಡರ್ ಪಾಸ್ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಗಲೀಕರಣ ಮಾಡುವ 8.87 ಕೋಟಿ ರೂ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.
ಕಾಂಗ್ರೆಸ್ ನಾಯಕರು  ಇಷ್ಟು ವರ್ಷ ಆಡಳಿತ ನಡೆಸಿ ರಾಜ್ಯದ ಜನತೆಗೆ ಕಿವಿಯಲ್ಲಿ ಹೂವು ಇಡ್ತಿದ್ರು ಈಗ ಹೈಟೆಕ್ ಮಾದರಿಯಲ್ಲಿ ಗ್ಯಾರಂಟಿ ಕಾರ್ಡ್ ಇಡೋ ಕೆಲಸ ಮಾಡ್ತಿದ್ದಾರೆಂದು ಕುಟುಕಿದರು.
ಗ್ಯಾರಂಟಿ ಕಾರ್ಡ್, ವಾರಂಟಿ ಕಾರ್ಡ್ ನ್ನು ಜನ‌ ನಂಬಲ್ಲ. ಯಾಕಂದ್ರೇ ಅಧಿಕಾರಕ್ಕೆ ಬಾರದೇ ಇರೋರು ಏನು ಗ್ಯಾರಂಟಿ ಕೊಡ್ತಾರೆಂದರು.‌
ಚುನಾವಣೆ ಬಂದಾಗ ಸುಳ್ಳು ಹೇಳೋದು ಸಾಮಾನ್ಯ ಇದೀಗ ಗ್ಯಾರಂಟಿ ಕಾರ್ಡ್ ಹೆಸರಲ್ಲಿ ಸುಳ್ಳು ಹೇಳ್ತಿದ್ದಾರೆಂದರು.‌
ಕಳೆದ ಬಾರಿ ರಾಜ್ಯದ ಜನತೆ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡದ ಕಾರಣ ಕಾಂಗ್ರೆಸ್  ವಾಮ ಮಾರ್ಗದಲ್ಲಿ ಜೆಡಿಎಸ್ ಜೊತೆ ಸೇರಿ ಸರ್ಕಾರ ರಚನೆ ಮಾಡಿದ್ರು ಬಿದ್ದೋಯ್ತು. ನಾವು ಬಹುಮತದೊಂದಿಗೆ ಸರ್ಕಾರ ಮಾಡಿ ಮೂರುವರೆ ವರ್ಷ ಆಡಳಿತ ನಡೆಸಿ‌ರಾಜ್ಯದ ಅಭಿವೃದ್ಧಿ ಮಾಡಲಾಯ್ತು ಎಂದರು.
ಕಳೆದ ಚುನಾವಣೆಯಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ನಾಯಕರ ನಿರ್ಧಾರ ದಂತೆಸಿದ್ದರಾಮಯ್ಯ ಮತ್ತು  ನಾನು ಇಬ್ಬರು ಅನಿವಾರ್ಯ ಕಾರಣಕ್ಕಾಗಿ ಬಾದಾಮಿ  ಕ್ಷೇತ್ರದಲ್ಲಿ ಸ್ಪರ್ಧೆ ಮಾಡಬೇಕಾಯ್ತು.
ಸರ್ಕಾರ ರಚನೆಯಾಗಬೇಕಾದ್ರೇ ಪಾಪುಲರ್ ಕ್ಯಾಂಡಿಟ್ ಗಳು ಬೇರೆ ಬೇರೆ ಕಡೆ ನಿಲ್ಲಬೇಕಾಗ್ತದೆ.‌ ಇದು ಸಿದ್ದರಾಮಯ್ಯ ನನ್ನ ಸ್ವಾರ್ಥ ಅಲ್ಲ. ಸಿದ್ದರಾಮಯ್ಯ ವರುಣಾದಲ್ಲಿ ನಿಲ್ಲಬೇಕು. ಆದ್ರೇ ಮಗನ ರಾಜಕೀಯಕ್ಕಾಗಿ ವರುಣಾಕ್ಕೆ ಹೋಗ್ತಿಲ್ಲ. ಹೀಗಾಗಿ ಕ್ಷೇತ್ರ ಗೊಂದಲವಾಗ್ತಿದೆ. ಸಿದ್ದರಾಮಯ್ಯ ಎಲ್ಲಿಯೇ ಸ್ಪರ್ಧೆ ಮಾಡಲಿ. ಈ ಬಾರಿ ಅವರ ವಿರುದ್ದ ಸ್ಪರ್ಧೆ ಮಾಡಲ್ಲ.ಯಾವುದೇ ಕ್ಷೇತ್ರದಲ್ಲಿ ನಿಂತು ಗೆಲ್ಲುವವರೇ ಪಾಪುಲರ್ ಕ್ಯಾಂಡೆಟ್. ಕೆಲವೊಮ್ಮೆ ಸಾಹಸ ಮಾಡಬೇಕಾಗ್ತದೆಂದರು.
ಈ ಕಾಮಗಾರಿಗೆ ಬುಡಾದಿಂದ ಅನುದಾನ ನೀಡಿದೆ.
ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಬುಡಾ ಅಧ್ಯಕ್ಷ ಎಸ್.ಮಾರುತಿ ಪ್ರಸಾದ್, ಆಯುಕ್ತ ವಿ.ರಮೇಶ್, ಮಾಜಿ ಸಂಸದರಾದ ಸಣ್ಣ ಪಕ್ಕೀರಪ್ಪ, ಜೆ.ಶಾಂತಾ, ಪಾಲಿಕೆ ಸದಸ್ಯರಾದ ಕೆ.ಎಸ್.ಅಶೋಕ್ ಕುಮಾರ್, ಶ್ರೀನಿವಾಸ್ ಮೋತ್ಕರ್, ಸುರೇಖಾ ಮಲ್ಲನಗೌಡ, ಹನುಮಂತ ಕೆ, ಮುಖಂಡರಾದ ಕೆ.ಎಸ್.ದಿವಾಕರ್, ಡಾ.ಡಿ.ಎಲ್.ರಮೇಶ್ ಗೋಪಾಲ್ ಮೊದಲಾದವರು ಇದ್ದರು.