
(ಸಂಜೆವಾಣಿ ವಾರ್ತೆ)
ಬಳ್ಳಾರಿ ಮೇ 05 : ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಲ್ಲಿ ನಗರದಲ್ಲಿ ಜೀನ್ಸ್ ಉದ್ಯಮದಿಂದ 50ಸಾವಿರಕ್ಕೂ ಹೆಚ್ಚು ಯುವ ಜನತೆಗೆ ಉದ್ಯೋಗ ಸೃಷ್ಟಿ ಮಾಡಲಾಗವುದೆಂದು ಬುಡಾ ಮಾಜಿ ಅಧ್ಯಕ್ಷ ನಾರಾ ಪ್ರತಾಪ್ ರೆಡ್ಡಿ ಹೇಳಿದ್ದಾರೆ.
ಅವರು ನಿನ್ನೆ ಸಂಜೆ ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ ಜೊತೆಗೆ. ನಗರದ ಜೀನ್ಸ್ ಮ್ಯಾನಿಫೆಕ್ಚರ್ಸ್ ಅಸೋಸಿಯೇಷನ್ ಜೊತೆ ಸಭೆ ನಡೆಸಿ.
ಈಗಾಗಲೇ ನಗರಕ್ಕೆ ಬಂದಿದ್ದ ರಾಹುಲ್ ಗಾಂಧಿ ಅವರು
ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದರೆ ಐದು ಸಾವಿರ ಕೋಟಿ ರೂ ಗಳಿಂದ ಜೀನ್ಸ್‌ಪಾರ್ಕ್ ನಿರ್ಮಾಣ ಮಾಡಲಿದೆಂದು ಘೋಷಿಸಿರುವ ಹಿನ್ನೆಲೆಯಲ್ಲಿ
ನಮ್ಮಸಹೋದರನ ಪುತ್ರ ನಾರಾ ಪ್ರತಾಪ್ ರೆಡ್ಡಿ ಅವರನ್ನು ಅಯ್ಕೆ ಮಾಡಿ ಕಾಂಗ್ರೆಸ್ ನ್ನು
ಅಧಿಕಾರಕ್ಕೆ ತನ್ನಿ ಎಂದರು.
ಭರತ್ ರೆಡ್ಡಿ ಮಾತನಾಡಿ ಕೆಲಸ ಮಾಡಬೆಕೆಂಬ ಉತ್ಸಹ ನನ್ನಲ್ಲಿದೆ. ಅದಕ್ಕೆ ನೀವು ಮತನೀಡಿ ಸಹಕರಿಸಬೇಕು. ಆಯ್ಕೆ ಮಾಡಿದರೆ ನಿಮ್ಮಉದ್ಯಮದ ಸಮಸ್ಯೆಗಳಿಗೆ ಸದಾ ಸ್ಪಂದಿಸುವೆ ಎಂಬ ಭರವಶೆ ನೀಡಿದರು.
ಈ ವೇಳೆ ಅಸೋಸಿಯೇಷನ್ ನ ಮುಖಂಡರುಗಳಾದ ವೇಣುಗೋಪಾಲ್, ಅಶೋಕ್ ಸಿಂಗ್, ಭೀಮರಾಮ್, ಶ್ರೀಕಾಂತ್ ರೆಡ್ಡಿ ಮೊದಲಾದವರು ಇದ್ದರು.