ಕಾಂಗ್ರೆಸ್ ನಿಂದ ರಾಜ್ಯಕ್ಕೆ ಕತ್ತಲೆ ಭಾಗ್ಯ: ಶ್ರೀರಾಮುಲು ಟೀಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.06: ರಾಜ್ಯಕ್ಕೆ ನಿತ್ಯ  18 ಸಾವಿರ  ಮೆಗಾವ್ಯಾಟ್ ವಿದ್ಯುತ್ ಬೇಕು. ಆದರೆ ಉತ್ಪಾದನೆ ಕುಸಿದಿದೆ.
ಬಿಜಾಪುರ, ರಾಯಚೂರು ವಿದ್ಯುತ್ ಉತ್ಪಾದನಾ ಘಟಕಗಳು ಸ್ಥಗಿತಗೊಂಡಿವೆ. ನಗರ ಪ್ರದೇಶದಲ್ಲಿ ಲೋಡ್ ಶೆಡ್ಡಿಂಗ್, ಇನ್ನು ಹಳ್ಳಿ ಪ್ರದೇಶದಲ್ಲಿ ಉಚಿತ ಕರೆಂಟ್ ಭಾಗ್ಯದಿಂದ ಅನುಭವಿಸಲು ಕತ್ತಲು ಭಾಗ್ಯ ಕೊಟ್ಟಿದ್ದೀರಿ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ರಾಜ್ಯ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಅವರು ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು  ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಗ್ಯಾರೆಂಟಿ ಸ್ಕೀಂಗಳಿಂದ ಅಧಿಕಾರಕ್ಕೆ ಬಂದಿದ್ದು ಇದು ಒಂದು ರೀತಿ ಲಾಟರಿ ಸರ್ಕಾರ, ಲಾಟರಿ ಶಾಸಕರಾಗಿದ್ದಾರೆಂದ ಅವರು.  ಹೋರಾಟದಿಂದ ಸಚಿವರಾದವರಲ್ಲ. ಗ್ಯಾರೆಂಟಿ ಸ್ಕೀಂನಿಂದ ಅಧಿಕಾರಪಡೆದವರು. ಬರುವ ಲೋಕಸಭಾ ಚುನಾವಣೆಯಲ್ಲಿ ನಿಮ್ಮ ಸಾಧನೆ ಬಗ್ಗೆ ಜನ ಪಾಠಕಲಿಸುತ್ತಾರೆಂದರು.
ಸತ್ತಮೇಲೆ ಕೊಡ್ತಾರ:
ರಾಜ್ಯದಲ್ಲಿ ಬರಗಾಲ ಇದೆ. 
ಜನ‌ ಜಾನುವಾರುಗಳಿಗೆ ನೀರು ಇಲ್ಲ. ಬೆಳೆ ಒಣಗುತ್ತಿದೆ.
42 ಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಪಿಎಂಸಿ ಸಚಿವ ರೈತರು ಪರಿಹಾರಕ್ಕಾಗಿ ಆತ್ಮಹತ್ಯೆಮಾಡಿಕೊಂಡಿರಬೇಕು ಎಂದು ಹೇಳುತ್ತಿದ್ದಾರೆ. ಅವರಿಗೆ ಹುಚ್ಚು ಹಿಡಿದಿರಬೇಕು ಎಂದರು.
ಕೃಷಿ ಸಚಿವ ಚಲುವರಾಯಸ್ವಾಮಿ ರಾಜ್ಯದ  136 ತಾಲೂಕುಗಳು ಬರ ಪೀಡಿತ ತಾಲೂಕುಗಳೆಂದು ಹೇಳಿದ್ದರಿಂದ ರೈತರು ಸಚಿವರು ಹೇಳಿದನ್ನು ನಂಬಿ. ಬರ ಪೀಡಿತ ತಾಲೂಕುಗಳಲ್ಲಿನ ಪರಿಹಾರ ಕಾರ್ಯ, ಸಮೀಕ್ಷೆ ನಡೆಯುತ್ತೆಂದು ಭಾವಿಸಿತ್ತು.
ಆದರೆ ಕೇಂದ್ರ ಸರ್ಕಾರದ ನಿಯಮಗಳ ಕುಂಟು ನೆಪ ಹೇಳಿ ಬರಗಾಲ ಘೋಷಣೆ ಮುಂದಕ್ಕೆ ಹಾಕಿರುವುದು ಸರಿಯಲ್ಲ. ತಕ್ಷಣ ಬರಗಾಲ ಘೋಷಣೆ ಆಗಬೇಕು ಎಂದು ಆಗ್ರಹಿಸಿದರು.
ಇಲ್ಲದಿದ್ದರೆ ಜನ‌ ಜಾನುವಾರು
ಸತ್ತ ಮೇಲೆ ಬರ ಘೋಷಣೆ ಮಾಡ್ತೀರ ಎಂದು ಪ್ರಶ್ನಿಸಿದರು. ಹೋರಾಟ:
ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರ ನೀಡುತ್ತಿದ್ದ   ಹಣ ನಿಲ್ಲಿಸಿದೆ. ಇದಕ್ಕಾಗಿ ರೈತ ಸಂಘಗಳು ಹೋರಾಟ ಮಾಡಬೇಕು, ನಾನು ಈ ವಿಷಯದಲ್ಲಿ ಹೋರಾಟಕ್ಕೆ ಇಳಿಯುವೆ ಎಂದರು.
ನಾಡಿದ್ದು ರಾಜ್ಯಾದ್ಯಂತ ಯುವ ಮೋರ್ಚಾದಿಂದ ಸರ್ಕಾರದ ವಿರುದ್ದ ಹೋರಾಟ ಮಾಡಲಿದೆ.
ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ದಿಂದ ಪಡೆದಿರುವ  ಕಲ್ಲಿದ್ದಲಿನ ಬಾಕಿ ಕಟ್ಟದ ಕಾರಣ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ‌. ಹೀಗಾಗಿ ವಿದ್ಯುತ್ ಉತ್ಪಾದನೆಯಲ್ಲಿ ಸಮಸ್ಯೆ ಆಗಿರಬೇಕೆಂದರು
ಸುದ್ದಿಗೋಷ್ಟಿಯಲ್ಲಿ ವಿಧಾನ‌ಪರಿಷತ್ ಸದಸ್ಯ ವೈ.ಎಂ.ಸತೀಶ್, ನಗರದ ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ,
ಪಕ್ಷದ ಹಿರಿಯ ಮುಖಂಡ ಡಾ.ಎಸ್.ಜೆ.ವಿ.ಮಹಿಪಾಲ್, ರಾಜ್ಯ ರೈತ ಮೋರ್ಚಾ ಪ್ರಧಾನ‌ಕಾರ್ಯದರ್ಶಿ ಎಸ್.ಗುರುಲಿಂಗನಗೌಡ, ಜಿಲ್ಲಾ ಅಧ್ಯಕ್ಷ ಪ್ರಕಾಶ್ ಗೌಡ, ಜಿಲ್ಲಾ ಅಧ್ಯಕ್ಷ ಗೋನಾಳ್ ಮುರಹರಗೌಡ, ಮುಖಂಡರಾದ ಮದಿರೆ ಕುಮಾರಸ್ವಾಮಿ ಮೊದಲಾದವರು ಇದ್ದರು.

ಬಾಕ್ಸ್ ಕೆಡುವುದಿಲ್ಲ:
ಐದು ವರ್ಷ ಆಡಳಿತ ಮಾಡಲು ಜನ ಆದೇಶ ಕೊಟ್ಟಿದ್ದಾರೆ.  ಸರ್ಕಾರ ಮಾಡಿ, ಉತ್ತಮ ಆಡಳಿತ ನೀಡಿ, ಸರಕಾರವನ್ನು  ಕೆಡುವ ಪ್ರಯತ್ನ ಮಾಡಲ್ಲ.