ಕಾಂಗ್ರೆಸ್ ನಿಂದ ಮಾತ್ರ ಸಮಾನತೆ ಸಾಧ್ಯತುಕರಾಂಗೆ ಮತ ನೀಡಿ ಕೈ ಬಲಪಡಿಸಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.04: ನಗರದ 8 ವಾರ್ಡಿನ ಅಂದ್ರಾಳು ಮತ್ತಿತರೇ ಪ್ರದೇಶದಲ್ಲಿ ಇಂದು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಮನೆ ಮನೆಗೆ ತೆರಳಿ ಕರ ಪತ್ರ ಹಂಚಿ. ಕಾಂಗ್ರೆಸ್ ಅಭ್ಯರ್ಥಿ ತುಕರಾಂ ಅವರಿಗೆ ಮತ ನೀಡುವಂತೆ ಮನವಿ ಮಾಡಿ ಬಿರುಸಿನ ಪ್ರಚಾರ ನಡೆಸಿದರು.
ಪಕ್ಷದ ಹಿರಿಯ ಮುಖಂಡ ಬಿ.ರಾಂಪ್ರಸಾದ್, ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ, ನಾಗರಾಜ್, ಎಪಿಎಂಸಿ ಅಧ್ಯಕ್ಷ ಕಟ್ಟೆಮನೆ ನಾಗೇಂದ್ರ, ಸ್ಥಳೀಯ ಕಾರ್ಪೊರೇಟರ್ ಎಂ.ರಾಮಾಂಜಿನೇಯಲು, ಪಾಲಿಕೆ ಸದಸ್ಯ ಮುಲ್ಲಂಗಿ‌ ನಂದೀಶ್ ಮೊದಲಾದವರು ಮನೆಗಳಿಗೆ ತೆರಳಿ. ರಾಜ್ಯದಲ್ಲಿನ ಕಾಂಗ್ರೆಸ್ ಆಡಳಿತದ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬಡವರ ಪರವಾದ ಗ್ಯಾರೆಂಟಿ ಯೋಜನೆ ಜಾರಿಗೆ ತಂದು ಜನ ಸಾಮಾನ್ಯರಿಗೆ ಆಗುತ್ತಿರುವ ಆರ್ಥಿನ ನೆರವಿನ ಬಗ್ಗೆ ವಿವರಿಸಿ ಕಾಂಗ್ರೆಸ್ ಗೆ ಮತ್ತ ನೀಡಿ ಎಂದು ವಿವರಿಸಿದರು.
ಈ ದೇಶದಲ್ಲಿ ಕಾಂಗ್ರೆಸ್ ಮಾತ್ರ ಸರ್ವ ಜನ‌ ಸಮುದಾಯದ  ಅಭಿವೃದ್ಧಿಯ ಆಶಯ ಹೊಂದಿದೆ. ಹಾಗಾಗಿ ಈ ಬಾರಿ ಬಿಜೆಪಿಯನ್ನು ಕಳೆದ ಪಾಲಿಕೆ, ವಧಾನಸಭಾ ಚುನಾವಣೆಯಂತೆ ತಿರಸ್ಕರಿಸು ಕಾಂಗ್ರೆಸ್ ನ್ನು ಗೆಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.
ಈ ವೇಳೆ ಪ್ರಚಾರದಲ್ಲಿ ಕೆಪಿಸಿಸಿ ವಕ್ತಾರ ವೆಂಕಟೇಶ್ ಹೆಗಡೆ, ಟಿ.ಸುರೇಶ್, ಅಬ್ದುಲ್ ಬಾರಿ ಸಾಬ್, ವೈ.ಶ್ರೀನಿವಾಸುಲು, ನಾಯ್ಡು, ಬಿ.ಎಂ.ಪಾಟೀಲ್, ವಿ.ರಾಜಶೇಖರ, ಬಾಲು, ಅಂದ್ರಾಳ್ ಪರಮೇಶ್, ಪಕ್ಕೀರಪ್ಒ, ನಾಗಪ್ಪ, ಕರಿಲಿಂಗ ಮೊದಲಾದವರು ಇದ್ದರು.