ಕಾಂಗ್ರೆಸ್ ನಿಂದ ನಿರುದ್ಯೋಗ ದಿನಾಚರಣೆ

ಚಿತ್ರದುರ್ಗ,ಸೆ.17: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ದಿನವನ್ನು ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ  ರಾಷ್ಟ್ರೀಯ ನಿರುದ್ಯೋಗ ದಿನಾಚರಣೆಯನ್ನಾಗಿ ಆಚರಿಸಿ, ಯುವಕರಿಗೆ ಉದ್ಯೋಗ ಕಲ್ಪಿಸದ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.2014 ರ ಚುನಾವಣೆ ಭಾಷಣದಲ್ಲಿ ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಪ್ರತಿ ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಯುವಕರಿಗಾಗಿ ಸೃಷ್ಟಿಸಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವುದಾಗಿ ಭರವಸೆ ನೀಡಿದ್ದರು. ಇದರ ಪ್ರಕಾರ 7 ವರ್ಷಗಳಲ್ಲಿ ಸರಿ ಸುಮಾರು 14 ಕೋಟಿ ಉದ್ಯೋಗ ಸೃಷ್ಟಿಯಾಗಿ ಭಾಗಶಃ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕಿತ್ತು. ಆದರೇ, ಪ್ರಧಾನಿ ಮಂತ್ರಿಗಳು ಈ ಭರವಸೆಗಳನ್ನು ಈಡೇರಿಸಲು ವಿಫಲರಾಗಿದ್ದಾರೆ. ಇದರಿಂದ ನಿಮ್ಮ ಭರವಸೆಗಳನ್ನು ನಂಬಿ ಕಷ್ಟ ಪಟ್ಟು ಓದಿರುವ ಅನೇಕ ಯುವಕರು ಬೀದಿ ಪಾಲಾಗಿದ್ದಾರೆ. ಅಲ್ಲದೇ ಕೊರೊನಾ ಸಂಕಷ್ಟದಲ್ಲಿ ಅನೇಕರು ಉದ್ಯೋಗಗಳನ್ನು ಕಳೆದುಕೊಂಡು ಜೀವನ ನಿರ್ವಹಿಸುವುದು ತುಂಬಾ ಕಷ್ಟವಾಗಿದೆ. ಅನೇಕ ಪದವೀಧರ ನಿರುದ್ಯೋಗಿಗಳು ಕೂಲಿ ಮಾಡಿ ಜೀವನ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ, ಪ್ರಧಾನಮಂತ್ರಿಗಳು ತಮ್ಮ ಮುಂದಿರುವ ಅಧಿಕಾರದ ಅವಧಿಯಲ್ಲಾದರೂ ಕೊಟ್ಟ ಮಾತಿನಂತೆ ಆದಷ್ಟು ಮಟ್ಟಿಗೆ ನಿರುದ್ಯೋಗ ಸಮಸ್ಯೆ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ನಿರುದ್ಯೋಗಿಗಳಿಗೆ ಪರಿಹಾರ ಘೋಷಣೆ ಮಾಡಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿ ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದಂದು ರಾಷ್ಟ್ರೀಯ ನಿರುದ್ಯೋಗ ದಿನಾಚರಣೆಯಾಗಿ ಚಿತ್ರದುರ್ಗ ಜಿಲ್ಲಾದ್ಯಂತ ಸುಮಾರು 2000ಕ್ಕೂ ಹೆಚ್ಚು ಪತ್ರಗಳನ್ನು ಪ್ರದಾನಿಗಳಿಗೆ ಕಳುಹಿಸುವ ಮೂಲಕ ನಿರುದ್ಯೋಗ ದಿನಾಚರಣೆಯನ್ನು ಆಚರಿಸಿದರು.ಈ ವೇಳೆ ಕಾರೇ ಹಳ್ಳಿ ಉಲ್ಲಾಸ್, ಖುದ್ದೂಸ್, ಶ್ರೀಕಾಂತ್, ರಮೇಶ್, ಜಗದೀಶ್ ಸೇರಿದಂತೆ ಇತರತು ಭಾಗವಹಿಸಿದ್ದರು.

Attachments area