ಕಾಂಗ್ರೆಸ್ ನಿಂದ ತುಕರಾಂ ನಾಮಪತ್ರ ಸಲ್ಲಿಕೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಎ,12- ಕಾಂಗ್ರೆಸ್ ಅಭ್ಯರ್ಥಿಯಾಗಿ ಈ.ತುಕರಾಂ ಅವರು ನಗರದ ಆರಾಧ್ಯ ದೇವತೆ ಕನಕ ದುರ್ಗಮ್ಮಗೆ ಪಕ್ಷದ ಮುಖಂಡರುಗಳ ಜೊತೆ ಪೂಜೆ ಸಲ್ಲಿಸಿ. ತೆರೆದ ವಾಹನದಲ್ಲಿ  ಸಾವಿರಾರು ಜನರೊಂದಿಗೆ  ಮೆರವಣಿಗೆಯಲ್ಲಿ ಆಗಮಿಸಿದರು..
ಎಂಟು ಜೆಸಿಬಿ ಮೂಲಕ ಕಾರ್ಯಕರ್ತರು ಹೂವಿನ ಮಳೆ ಸುರಿಸಿದರು. ಪಟಾಕಿ ಸಿಡಿಸಿ, ಪೇಪರ್ ಬ್ಲಾಸ್ಟ್ ಹಾರಿಸಿ ಅದ್ದೂರಿ ಮೆರವಣಿಗೆ ಮಾಡಲಾಯ್ತು. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಶಾಂತ್ ಕುಮಾರ್ ಮಿಶ್ರ ಅವರಿಗೆ  ಜ್ಯೋತಿಷಿಗಳು ಹೇಳಿದಂತೆ 1.15 ಕ್ಕೆ ಬಂದು ನಾಮಪತ್ರ ಸಲ್ಲಿಸಿದರು.
ನಂತರ ಮತ್ತೆ ತೆರಳಿ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಈ ವೇಳೆ ಸಚಿವರಾದ ಜಮೀರ್ ಅಹಮ್ಮದ್, ಎಂ.ಬಿ.ಪಾಟೀಲ್, ಬಿ.ನಾಗೇಂದ್ರ, ಶಾಸಕರಾದ ಭೀಮಾನಾಯ್ಕ, ಹೆಚ್.ಆರ್.ಗವಿಯಪ್ಪ, ಡಾ.ಎನ್.ಟಿ.ಶ್ರೀನಿವಾಸ್, ಜೆ‌.ಎನ್.ಗಣೇಶ್, ನಗರ ಶಾಸಕ ನಾರಾ ಭರತ್ ರೆಡ್ಡಿ,  ಕೆಪಿಸಿಸಿ ಮಾಜಿ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ,  ಮಾಜಿ ಶಾಸಕ ಪರಮೇಶ್ವರ ನಾಯ್ಕ, ಜಿಲ್ಲಾ ಅಧ್ಯಕ್ಷ ಅಲ್ಲಂ ಪ್ರಶಾಂತ್ , ಪಾಲಿಕೆ ಸದಸ್ಯರುಗಳು, ಮುಖಂಡರುಗಳು ಇದ್ದರು.
ನಾಮಪತ್ರ ಸಲ್ಲಿಕೆ ಕಾರ್ಯಕ್ಕೆ ಡಿ.ಸಿ.ಕಚೇರಿ ಆವರಣದಲ್ಲಿ  ಸೂಕ್ತ ಬಂದೋಬಸ್ತು ಇತ್ತು. ಅಲ್ಲದೆ ಕಚೇರಿ ಮುಂದೆ ಸಹ ವಾಹನಗಳ ಓಡಾಟಕ್ಕೆ ಹೆಚ್ಚಿನ ಅಡಚಣೆ ಇಲ್ಲದಂತೆ ಕ್ರಮವಹಿಸಿದ್ದು ಜನರ ಮೆಚ್ಚುಗೆಗೆ ಕಾರಣವಾಯ್ತು.