ಕಾಂಗ್ರೆಸ್ ನಿಂದ ಜನರಿಗೆ ಮೋಸ: ಬೊಮ್ಮನಳ್ಳಿ ಆರೋಪ

ಕಲಬುರಗಿ: ಜೂ.28:ಪದವಿ ಮುಗಿಸಿದವರೆಗೆಲ್ಲ ಭತ್ಯೆ ನೀಡುವುದಾಗಿ ಕಾಂಗ್ರೆಸ್ ಘೋಷಣೆ ಮಾಡಿತ್ತು. ಅವರೆಲ್ಲ ಮತವನ್ನು ಸಹ ನೀಡಿದ್ದಾರೆ.ಆದರೆ ಈಗ 2023ರಲ್ಲಿ ಉತ್ತೀರ್ಣರಾದವರಿಗೆ ನೀಡಲಾಗುವುದು ಅಧಿಕಾರಕ್ಕೇರಿದ ನಂತರ ಮಾತು ಬದಲಿಸಿದನ್ನು ನೋಡಿದರೆ ಜನರಿಗೆ ಎಷ್ಟು ಮೋಸ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡ ಗಿರೀಶ ಬೊಮ್ಮನಳ್ಳಿ ಅವರು ಆರೋಪಿಸಿದರು.

          ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಅಧಿಕಾರದ ಖುರ್ಚಿಗೇರಿದ ಬಳಿಕ ಎಲ್ಲಾ ಗ್ಯಾರಂಟಿಗಳಿಗೆ ಷರತ್ತು ಹಾಕಲಾಗುತ್ತಿದೆ.ಮತ ಪಡೆಯುವಾಗ ಒಂದು ಭರವಸೆ ಕೊಡುವುದು ಈಗ ಮತ್ತೊಂದು ಹೇಳುವುದನ್ನು ನೋಡಿದರೆ ಕಾಂಗ್ರೆಸ್ ಸರಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳುವುದನ್ನು ಮಾಡುತ್ತಿದೆ ಎಂದು ಆರೋಪಿಸಿದರು.ನನಗೂ ಫ್ರೀ ನಿಮಗೂ ಫ್ರೀ, ನಮ್ಮ ಮನೆಯವರೆಗೂ ಫ್ರೀ ಎಂದೆಲ್ಲ ಭಾಷಣ ಮಾಡಿದ್ದ ಸಿಎಂ ಸಿದ್ದರಾಮಯ್ಯನವರೇ ಗೃಹಲಕ್ಷ್ಮೀ, ಗೃಹಜ್ಯೋತಿ ಹೀಗೆ ಐದು ಗ್ಯಾರಂಟಿಗಳನ್ನು ಜನರಿಗೆ ನೀಡುವಲ್ಲಿ ಈಗ ಏಕೆ ಷರತ್ತು ವಿಧಿಸುತ್ತೀದ್ದೀರಿ.ಹೇಳೋದು ಒಂದು ಮಾಡುವುದು ಇನ್ನೊಂದು ಎಂಬ ಕಾಂಗ್ರೆಸ್ ನಡುವಳಿಕೆ ಜನರಿಗೆ ಗೊತ್ತಾಗುತ್ತಿದೆ ಎಂದರು. ಇಡೀ ವಿಶ್ವವೇ ಕೋವಿಡ್ ದಿಂದ ನಲುಗಿದಾಗ ದೇಶದ ಜನರ ಆರೋಗ್ಯ ದೃಷ್ಟಿಯಿಂದ 80 ಕೋಟಿ ಹೆಚ್ಚು ಜನರಿಗೆ ಉಚಿತ ವ್ಯಾಕ್ಸಿನ ಕೇಂದ್ರ ಸರ್ಕಾರ ನೀಡಿದೆ. ಯಾವತ್ತು ಜನರಿಗೆ ಆಮೀಷ ತೋರಿಸಲಿಲ್ಲ ಹೇಳಿದನ್ನು ಮಾಡಿ ತೋರಿಸಿರುವುದು ಬಿಜೆಪಿ ಸರ್ಕಾರ ಎಂದು ಅವರು ಹೇಳಿದರು.