
ರಾಯಚೂರು, ಏ.೧೪- ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷ ಕಡೆಗಣಿಸುತ್ತಲೇ ಬಂದಿದೆ.ಮತ್ತು ಅವರಿಗೆ ಅವಮಾನ ಮಾಡುತ್ತಲೇ ಬಂದು ಕೊನೆಗೆ ಅವರನ್ನು ಲೋಕಸಭಾ ಚುನಾವಣೆಯಲ್ಲೂ ಸೋಲಿಸುವ ಮೂಲಕ ತನ್ನ ಚಾಳಿಯನ್ನು ಮುಂದುವರೆಸಿ ಅವರು ಕೊನೆಯುಸಿರೆಳೆದಾಗ ಅವರನ್ನು ರಾಜಘಾಟ್ ದಲ್ಲಿ ಅಂತ್ಯಕ್ರಿಯೆ ನಡೆಸಲು ಅನುವು ಮಾಡಿಕೊಡಲಿಲ್ಲ ಎಂದು ಬಿಜೆಪಿ ಮುಖಂಡ ತ್ರಿವಿಕ್ರಮ ಜೋಷಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.
ಅವರಿಂದು ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕಾನೂನುಮಂತ್ರಿಯಾಗಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಕಾಂಗ್ರೆಸ್ ನ ನೀತಿಯನ್ನು ಖಂಡಿಸಿದ್ದರಿಂದ ಅವರು ರಾಜೀನಾಮೆ ಕೊಟ್ಟು ಹೊರನಡೆಯುವಂತಹ ಸ್ಥಿತಿ ನಿರ್ಮಾಣ ಮಾಡಿದರು ಎಂದು ಹೇಳಿದ ಅವರು, ಡಾ. ಅಂಬೇಡ್ಕರ್ ಅವರಿಗಾಗಿ ಪಂಚತೀರ್ಥಗಳನ್ನು ನರೇಂದ್ರ ಮೋದಿ ಅವರು ಮಾಡುವ ಮೂಲಕ ಅವರಿಗೆ ಗೌರವ ಸಲ್ಲಿಸಿದೆ ಎಂದ ಅವರು,ದಲಿತರೊಂದಿಗೆ ಬಿಜೆಪಿ ಇದೆ ಎನ್ನುವುದನ್ನು ನಾವು ಹಲವು ಸಂದರ್ಭಗಳಲ್ಲಿ ಈಗಾಗಲೇ ರುಜುವಾತಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ರವೀಂದ್ರ ಜಲ್ದಾರ್,ಕೊಟ್ರೇಶಪ್ಪ ಕೋರಿ, ಕೊಟ್ರೇಶಪ್ಪ ಕೋರಿ, ಎ.ಚಂದ್ರಶೇಖರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.