ಕಾಂಗ್ರೆಸ್ ನಾಯಕರು- ಕಾರ್ಯಕರ್ತರಿಂದ ಬೃಹತ್ ಬೈಕ್ ರ್ಯಾಲಿ

 ದಾವಣಗೆರೆ. ಆ.೨; ಸಿದ್ದರಾಮಯ್ಯಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ  ನಗರದಲ್ಲಿ ಬೃಹತ್ ಬೈಕ್‌ ರ್ಯಾಲಿ ನಡೆಯಿತು.ಮಾಜಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಅನಕೊಂಡದ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಬೈಕ್ ರ್ಯಾಲಿ ಚಾಲನೆ ನೀಡಿದರು. ಸಾವಿರಾರು ಕಾರ್ಯಕರ್ತರು ರ್ಯಾಲಿಯಲ್ಲಿ ಪ್ರದರ್ಶಿಸಿದರು. ಆನೆಕೊಂಡದ ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಬೈಕ್‌ ರಾಲಿ, ಕೊರಚರಹಟ್ಟಿ, ಅರಳೀಮರದ ಸರ್ಕಲ್, ಹಳೆ ಬೇತೂರು ರಸ್ತೆ, ಭಾಷಾನಗರ ಮುಖ್ಯ ರಸ್ತೆ ಮೂಲಕ ರಜಾ ಸರ್ಕಲ್. ಎಸ್‌. ಪಿ.ಎಸ್. ನಗರ, ಹೊಂಡದ ಸರ್ಕಲ್ ಮಾರ್ಗವಾಗಿ ಹೊರಟು ಚೌಕಿಪೇಟೆ ತಲುಪಿತು. ಆರಂಭದಿಂದ ಕೊನೆಯವರೆಗೂ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡು ಕಾರ್ಯಕರ್ತರಿಗೆ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ ಹುರಿದುಂಬಿಸಿದರು.ಬೈಕ್ ರ್‍ಯಾಲಿ ಸಾಗುತ್ತಾ ಹೋದಂತೆ ಪ್ರತಿ 100 ಮೀಟರ್ ಅಂತರದಲ್ಲಿ ಸ್ಥಳೀಯ ಕಾರ್ಯಕರ್ತರು ಶಾಲು, ಹಾರ, ಪೇಟ ತೊಡಿಸಿ, ಪಟಾಕಿ ಹಚ್ಚುವ ಮೂಲಕ ಮಲ್ಲಿಕಾರ್ಜುನ್ ರವರನ್ನು ಸ್ವಾಗತಿಸಿದ್ದು ಅವಿಸ್ಮರಣೀಯ.ಯುವಕರು ಮಹಿಳೆಯರು ವಯಸ್ಕರು ಈ ಬೈಕ್ ರ್‍ಯಾಲಿಯಲ್ಲಿ ಪಾಲ್ಗೊಂಡು ತಮ್ಮ ನಾಯಕನಿಗೆ ಮುಂದಿನ ಚುನಾವಣೆಯಲ್ಲಿ ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಸ್ಪಷ್ಟ ಸಂದೇಶ ರವಾನಿಸಿದರೂ ಎಂದರೆ ತಪ್ಪಾಗಲಾರದು, ಈ ಬೈಕ್ ರ್‍ಯಾಲಿಯಲ್ಲಿ ಅಂಗವಿಕಲ ಮಹಿಳೆ ಭಾಗವಹಿಸಿದ್ದು ವಿಶೇಷವಾದರೆ, ಸುಮಾರು 60 ವರ್ಷದ ಬೆಳವನೂರು ಗ್ರಾಮದ ಸಿದ್ದಪ್ಪ ಎನ್ನುವ ವ್ಯಕ್ತಿಯ ಹುಮ್ಮಸ್ಸು ಯುವಕರನ್ನು ನಾಚಿಸುವಂತಿತ್ತು.ಅಂತಿಮವಾಗಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಜಿಲ್ಲೆಯಿಂದ ಅತಿ ಹೆಚ್ಚಿನ ಜನರು ಸಿದ್ದರಾಮಯ್ಯನವರ ಅಮೃತ ಮಹೋತ್ಸವಕ್ಕೆ ಭಾಗಿಯಾಗಲು ಕರೆ ನೀಡುವ ಮೂಲಕ ಕಾರ್ಯಕರ್ತರೊಂದಿಗೆ ನಾನಿದ್ದೇನೆ ಎನ್ನುವ ಸ್ಪಷ್ಟ ಸಂದೇಶ ಸಾರಿದರು.