ಕಾಂಗ್ರೆಸ್ ನಾಯಕರಿಗೆ ಸ್ಮೃತಿ ನೋಟೀಸ್

ನವದೆಹಲಿ, ಜು.೨೫- ಪುತ್ರಿಯ ಬಗ್ಗೆ ಅಕ್ರಮ ಬಾರ್ ಆರೋಪದ ಹಿನ್ನೆಲೆಯಲ್ಲಿ ಸ್ಮೃತಿ ಇರಾನಿ, ಮೂರು ಮಂದಿ ಹಿರಿಯ ಕಾಂಗ್ರೆಸ್ ನಾಯಕರಿಗೆ ಲೀಗಲ್ ನೋಟೀಸ್ ಕಳುಹಿಸಿದ್ದಾರೆ.

೧೮ ವರ್ಷದ ತಮ್ಮ ಪುತ್ರಿಯ ಮೇಲೆ ಮಾಡಿರುವ ಆರೋಪವನ್ನು ಕೂಡಲೇ ಹಿಂತೆಗೆದಕೊಂಡು ಬೇಷರತ್ ಕ್ಷಮೆಯಾಚಿಸುವಂತೆ ಅವರು ಒತ್ತಾಯಿಸಿದ್ದಾರೆ.

ಗೋವಾದಲ್ಲಿ ಅಕ್ರಮ ಬಾರ್ ನಡೆಸುತ್ತಿದ್ದಾರೆ ಎಂದು ಆರೋಪ ಮಾಡಿರುವ ಕಾಂಗ್ರೆಸ್ ಹಿರಿಯ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್, ನೆಟ್ಟಾ ಡಿ ಸೋಜಾ ಅವರಿಗೆ ವಕೀಲರ ಮೂಲಕ ನೋಟೀಸ್ ಕಳುಹಿಸಿದ್ದಾರೆ.

ಕಾಂಗ್ರೆಸ್ ನಾಯಕರಾದ ಪವನ್ ಖೇರಾ, ಜೈರಾಮ್ ರಮೇಶ್, ನೆಟ್ಟಾ ಡಿ’ಸೋಜಾ ಅವರು ತಮ್ಮ ಹೇಳಿಕೆಗೆ ಲಿಖಿತ ಬೇಷರತ್ ಕ್ಷಮೆಯಾಚಿಸಬೇಕು ಮತ್ತು ತಕ್ಷಣವೇ ಜಾರಿಗೆ ಬರುವಂತೆ ಮಾಡಿರುವ ಎಲ್ಲಾ ಆರೋಪಗಳನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಆರೋಪ ಸಾಬೀತು ಮಾಡಿ, ಇಲ್ಲವೇ ಕ್ಷಮೆಯಾಚಿಸಿ, ಇವರೆಡೂ ಮಾಡದಿದ್ದರೆ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಲೀಗಲ್ ನೋಟೀಸ್‌ನಲ್ಲಿ ಅವರು ತಿಳಿಸಿದ್ದಾರೆ.