ಕಾಂಗ್ರೆಸ್ ನವರಿಗೆ ರಚನಾತ್ಮಕ ರಾಜಕೀಯ ಶಕ್ತಿ ಇಲ್ಲ

ದಾವಣಗೆರೆ.ನ.೧೮; ಕಾಂಗ್ರೆಸ್ ಪಕ್ಷದವರಿಗೆ ರಚನಾತ್ಮಕ ರಾಜಕೀಯ ಶಕ್ತಿ ಇಲ್ಲ ಎಂದು ಆರೋಗ್ಯ ಸಚಿವ ಕೆ.ಸುಧಾಕರ್ ಹೇಳಿದ್ದಾರೆ.
ನಗರದಲ್ಲಿಂದು ನಡೆದ ಜನಸ್ವರಾಜ್ ಸಮಾವೇಶ ದಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
ಕಾಂಗ್ರೆಸ್ ಗೆ ಯಾವುದೇ ವಿಷಯ ಸಿಗುತ್ತಿಲ್ಲ.ಯಾವುದೇ ವಿಷಯ ಇಲ್ಲದೆ ಬಯಲಿಗೆ ಬಂದಿದ್ದಾರೆ ಎಂದು ಬಿಟ್ ಕಾಯಿನ್ ವಿಚಾರದ ಕುರಿತು ಮಾತನಾಡಿದರು.ಕಾಂಗ್ರೆಸ್ ನವರು ಹೇಳುವ ಮಾತಿನಲ್ಲಿ ಸತ್ಯ ಇಲ್ಲ.ಅವರ ಆರೋಪದ ಬಗ್ಗೆ ಯಾವುದೇ ದಾಖಲೆ ಕೊಡ್ತಾ ಇಲ್ಲ. ಅವರಿಗೆ ಯಾರ ಜೊತೆ ಸ್ನೇಹ ಇತ್ತು ಅನ್ನೋದು ಜನರಿಗೆ ಗೊತ್ತಾಗುತ್ತಿದೆ.16 ರಿಂದ ಅವರು ಯಾರ ಜೊತೆ ಹೋಟೆಲ್ ನಲ್ಲಿ ಯಾರ ಜೊತೆ ಸ್ನೇಹ ಬೆಳೆಸಿದ್ದರು.ಯಾರು ಅವರ ಬಿಲ್ ಕೊಡ್ತಾ ಇದ್ದರು ಅನ್ನೋದು ಹೊರೆಗೆ ಬರುತ್ತದೆ.ನಾನು ಯಾರ ವೈಯಕ್ತಿಕ ಹೆಸರು ಹೇಳಲ್ಲ.ತನಿಖಾ ವರದಿಯಲ್ಲಿ ಕಾಂಗ್ರೆಸ್ ಯಾವ ಯಾವ ನಾಯಕರಿದ್ದಾರೆಯಾವೆಲ್ಲ ಕಾಂಗ್ರೆಸ್ ಲೀಡರ್ ಮಕ್ಕಳಿದ್ದಾರೆ ರಾಜ್ಯದ ಜನರಿಗೆ ಗೊತ್ತಾಗುತ್ತದೆ ಎಂದು ದಾವಣಗೆರೆಯಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ.