ಕಾಂಗ್ರೆಸ್ ನನಗೆ ಎಲ್ಲಾ ಸ್ಥಾನಮಾನ ಕೊಟ್ಟಿದೆ:ಎಚ್‌ಎಂಆರ್

ಮಾಗಡಿ,ಏ.೧೧- ಕಾಂಗ್ರೆಸ್ ಪಕ್ಷದಲ್ಲಿ ನನಗೆ ಎಲ್ಲಾ ಸ್ಥಾನ ಮಾನವೂ ಸಿಕ್ಕಿದೆ ಆದರೆ ಇಂದಿನ ನಾಯಕರ ನಡೆಯಿಂದ ಸತತ ಮೂರು ಚುನಾವಣೆಯಲ್ಲಿ ಸೋತು ನನಗೆ ಘಾಸಿಯಾಗಿದೆ ಎಂದು ತಮ್ಮ ಮನದ ಮಾತನ್ನು ತಿಳಿಸಿದರು.
ಮಾಗಡಿ ಪಟ್ಟಣದ ತಿರುಮಲೆ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಕುಟುಂಬ ಪರಿವಾರದೊಂದಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಬ್ಬಾಳ ಕ್ಷೇತ್ರದಲ್ಲಿ ಕೇವಲ ೪೦೦೦ ಸಾವಿರ ಮತಗಳ ಅಂತರದಿಂದ ಸೋತಿದ್ದೆ ಇನ್ನೊಂದು ಬಾರಿ ನನಗೆ ಅವಕಾಶ ಮಾಡಿಕೊಟ್ಟಿದ್ದರೆ ನಾನು ಶಾಶ್ವತವಾಗಿ ಹೆಬ್ಬಾಳದಲ್ಲಿ ನೆಲೆಯೂರುತ್ತಿದ್ದೆ, ಆದರೆ ನನಗೆ ಹೆಬ್ಬಾಳದಲ್ಲಿ ಅವಕಾಶ ತಪ್ಪಿಸಿ ಕಳೆದ ಚುನಾವಣೆಯಲ್ಲಿ ಚನ್ನಪಟ್ಟಣ ಅಭ್ಯರ್ಥಿಯನ್ನಾಗಿ ಪಕ್ಷ ಘೋಷಿಸಿತ್ತು ಆದರೆ ಯಾವ ಕಾರಣಕ್ಕೆ ಘೋಷಣೆ ಮಾಡಿತ್ತು ನಾನು ಅರಿಯೇ ಆದರೆ ಪಕ್ಷ ನಿಷ್ಠೆಯಿಂದ ಅಂದು ಚುನಾವಣೆ ಎದುರಿಸಿದ್ದೆ, ಆದರೆ ಈ ಬಾರಿ ನಾನು ಅದಕ್ಕೆ ಅವಕಾಶ ಮಾಡಿಕೊಟ್ಟಿಲ್ಲ.
ಸವದತ್ತಿ, ಯಾದಗಿರಿ ಮತ್ತು ಹರಿಹರ ಕ್ಷೇತ್ರಗಳಲ್ಲಿ ಅವಕಾಶವನ್ನು ಮಾಡಿಕೊಡಿ ಎಂದು ನಾಯಕರ ಮುಂದೆ ನನ್ನ ಅಹವಾಲು ಇಟ್ಟಿದ್ದು, ಸವದತ್ತಿ ಮತ್ತು ಯಾದಗಿರಿ ಕ್ಷೇತ್ರಗಳಲ್ಲಿ ಅವಕಾಶ ಮಾಡಿಕೊಟ್ಟಿಲ್ಲ, ಹರಿಹರದಲ್ಲಿ ಪ್ರಸ್ತುಥ ಶಾಸಕರಿಗೆ ಅವಕಾಶವಿಲ್ಲದಿದ್ದರೆ ನನಗೆ ಅವಕಾಶ ಮಾಡಿಕೊಡಿ ಎಂದು ಕೇಳಿದ್ದೇನೆ, ನಾಯಕರ ತೀರ್ಮಾನಕ್ಕೆ ತಲೆಬಾಗುತ್ತೇನೆ, ಆದರೆ ಸಮಾಧಿಯ ಮೇಲೆ ಸೌಧ ಕಟ್ಟುವ ಜಾಯಮಾನ ನನ್ನದಲ್ಲ ಎಂದು ಎಚ್‌ಎಂ.ಆರ್ ಹೇಳಿದರು.
ಕಾಂಗ್ರೇಸ್ ಪಕ್ಷ ಬಿಟ್ಟು ಯಾವ ಪಕ್ಷಕ್ಕು ನಾನು ಹೆಜ್ಜೆ ಇಡುವುದಿಲ್ಲ: ಕೆಲ ಮಾದ್ಯಮಗಳಲ್ಲಿ ರೇವಣ್ಣ ಬಿಜೆಪಿಗೆ ಸೇರುತ್ತಾರೆ ಎಂದು ಹೇಳಿದ್ದನ್ನು ನಾನು ಕೇಳಿದ್ದೇನೆ, ಆದರೆ ನಾನು ಯಾವುದೇ ಮಾದ್ಯಮಗಳ ಮುಂದೆ ಬಿಜೆಪಿ ಪಕ್ಷ ಸೇರುತ್ತೇನೆ ಎಂದು ನನ್ನ ಹೇಳಿಕೆಗಳನ್ನು ನೀಡಿಲ್ಲ, ನಾನು ಕಾಂಗ್ರೇಸ್ ಪಕ್ಷದಲ್ಲಿ ಎಲ್ಲವನ್ನು ಪಡೆದು ಇಂದು ನಾನು ಅನ್ಯ ಪಕ್ಷಗಳಿಗೆ ಪಕ್ಷಾಂತರಿಯಾಗಲಾರೆ ಇಂದಿಗೂ ಎಂದಿಗೂ ಕಾಂಗ್ರೇಸ್ ಪಕ್ಷದಲ್ಲಿ ನಾನೊಬ್ಬ ನಿಷ್ಠಾವಂತ ಕಾರ್ಯಕರ್ತ ಎಂದು ಸ್ಪಷ್ಟನೆ ನೀಡಿದರು,