ಕಾಂಗ್ರೆಸ್ ನದ್ದು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ನಡೆ

ಸಂಜೆವಾಣಿ ನ್ಯೂಸ್
ಮೈಸೂರು: ಜು.22:- ವಿರೋಧ ಪಕ್ಷದ ಹತ್ತು ಶಾಸಕರನ್ನು ಅಮಾನತುಗೊಳಿಸಿರುವ ಕಾಂಗ್ರೆಸ್ ಸರ್ಕಾರದ ನಡೆ ಸಂವಿಧಾನ ಬಾಹಿರ ಮತ್ತು ಪ್ರಜಾಪ್ರಭುತ್ವ ವಿರೋಧಿಯಾದುದು ಎಂದು ಬಿಜೆಪಿ ನಗರ ಮಾಧ್ಯಮ ವಕ್ತಾರ ಎಂ.ಮೋಹನ್ ಕಿಡಿ ಕಾರಿದರು.
ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂತಹ ಕೃತ್ಯಗಳಿಗೆ ಪ್ರಸಿದ್ದಿಯಾಗಿರುವುದು ಕಾಂಗ್ರೆಸ್ ಬೆಂಗಳೂರಿನಲ್ಲಿ ರಾಷ್ಟ್ರದ ವಿವಿಧ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ನಾಟಕ ಮಾಡಿ ಇದಕ್ಕೆ ಹಿರಿಯ ಐಎಎಸ್ ಅಧಿಕಾರಿಗಳನ್ನು ಪೆÇ್ರೀಟೋಕಾಲ್ ಹೆಸರಿನಲ್ಲಿ ಸೆಕ್ಯೂರಿಟಿ ಗಾಡ್ರ್ಗಳಂತೆ ಬಳಸಿಕೊಂಡಿದೆ. ಇದನ್ನು ಪ್ರಸ್ನಿಸಿದಾಗ ಸರಿಯಾಗಿ ಉತ್ತರ ನೀಡಲು ಸಾಧ್ಯವಾಗದೆ ಬಿಜೆಪಿಯ 10 ಶಾಸಕರನ್ನು ಅಮಾನತು ಮಾಡುವ ಮೂಲಕ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ನೀತಿಗಳನ್ನು ಗಾಳಿಗೆ ತೂರಿ ದರ್ಪ ಮೆರೆದಿದೆ ಎಂದರು.
ಕಾಂಗ್ರೆಸ್ ವಕ್ತಾರ ಎಂ.ಲಕ್ಷಣ್ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಳ್ಳುತ್ತ ಶಾಶ್ವತವಾಗಿ ಅಮಾನತು ಗೊಳಿಸಬೇಕು ಎಂದು ಸಲಹೆ ನೀಡಿರುವುದನ್ನು ನೋಡಿದರೆ ಲಕ್ಷ್ಮಣ್ ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದಿರುವುದು ಸ್ಪಷ್ಟವಾಗುತ್ತದೆ. ವಿಧಾನಸಭೆ?ಯಲ್ಲಿ ಎಲ್ಲಾ ಶಾಸಕರು ಒಂದೇ. ಇಲ್ಲಿ ದಲಿತ, ಮುಸ್ಲಿಂ ಎಂಬ ಪದಗಳನ್ನು ಉಪಯೋಗಿಸಿ ತಮ್ಮ ಡೋಂಗಿ ಜಾತ್ಯತೀತ ನಿಲುವು ಪ್ರದರ್ಶಿಸುತ್ತಿದ್ದಾರೆ. ಇವರಿಗೆ ದಲಿತರ ಮೇಲೆ ಆಷ್ಟೊಂದು ಕಾಳಜಿ ಇದ್ದರೆ ದಲಿತ ಮುಖ್ಯಮಂತ್ರಿ ಮಾಡಿ ಇವರ ನಿಜವಾದ ಪ್ರೇಮ ಪ್ರದರ್ಶಿಸಬಹುದಿತ್ತು ಎಂದು ತಿರುಗೇಟು ನೀಡಿದರು.
ವಿಧಾನಸಭೆಯಲ್ಲಿ ಬಹಳಷ್ಟು ಮಂದಿ ರೌಡಿಗಳಿದ್ದಾರೆ ಎಂಬ ಲಕ್ಷ್ಮಣ್ ಹೇಳಿದ್ದಾರೆ. ಇದು ಜನಪ್ರತಿನಿಧಿಗಳಿಗೆ, ಮತದಾರರಿಗೆ ಮಾಡಿದ ಅವಮಾನ. ಆ ರೀತಿ ರೌಡಿಗಳಿದ್ದರೆ ಅವರ ಹೆಸರುಗಳನ್ನು ಬಹಿರಂಗ ಪಡಿಸಲಿ. ಇಲ್ಲವೇ ಕೂಡಲೇ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಬೆಂಗಳೂರಿನಲ್ಲಿ ಐವರು ಭಯೋತ್ಪಾದಕರನ್ನು ಬಂಧಿಸಿದ ಕೆಲವೆ ನಿಮಿಷಗಳಲ್ಲಿ ಗೃಹಸಚಿವ ಪರಮೇಶ್ವರ್ ಬಂಧಿತರಿಗೂ ಭಯೋತ್ಪಾದನೆಗೂ ಯಾವುದೇ ಸಂಬಂಧಂವಿಲ್ಲ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಭಯೋತ್ಪಾದಕರು ಎಂದು ಖಚಿತವಾಗುತ್ತಿದ್ದಂತೆ ಕ್ಷಮೆಯಾಚಿಸಿರುವುದು ಅವರ ಕಾರ್ಯಕ್ಷಮತೆ ತೋರಿಸುತ್ತದೆ. ಬಂಧಿತರೆಲ್ಲರೂ ಒಂದೇ ಕೋಮಿಗೆ ಸೇರಿದ ಜನರೆಂದು ಅವರನ್ನು ಓಲೈಸುವ ಭರದಲ್ಲಿ ಇಂತಹ ಬೇಜವಾಬ್ದಾರಿ ಹೇಳಿಕೆ ನೀಡುವುದು ಪೆÇಲೀಸರ ಆತ್ಮಸ್ಥೈರ್ಯ ಕುಗ್ಗಿಸುತ್ತದೆ ಎಂದು ಕಿಡಿ ಕಾರಿದರು.
ಗೋಷ್ಠಿಯಲ್ಲಿ ಮುಖಂಡರಾದ ಮಾದ್ಯಮ ವಕ್ತಾರರಾದ ಮಹೇಶ್ ರಾಜೇ ಅರಸ್, ಹಿಂದುಳಿದ ಮೋರ್ಚಾ ರಾಜ್ಯ ಉಪಾಧ್ಯಕ್ಷ ಜೋಗಿ ಮಂಜು, ಸೋಮಸುಂದರ್ ಇದ್ದರು.