ಕಾಂಗ್ರೆಸ್ ನತ್ತ ಮುಖ‌ಮಾಡಿದ ಎನ್.ವೈ ಗೋಪಾಲಕೃಷ್ಣ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.28: ಬಿಜೆಪಿ ಶಾಸಕರ ಮತ್ತೊಂದು ವಿಕೆಟ್ ಪತನವಾಗತೊಡಗಿದೆ. ಹಾಲಿ ಕೂಡ್ಲಿಗಿ  ಕ್ಷೇತ್ರದ ಬಿಜೆಪಿ ಶಾಸಕ. ಎನ್.ವೈ. ಗೋಪಾಲ ಕೃಷ್ಣ ಕಾಂಗ್ರೆಸ್ ನತ್ತ ಮುಖ‌ ಮಾಡಿದ್ದಾಗಿ ತಿಳಿದುಬಂದಿದೆ.
ಮೊಳಕಾಲ್ಮೂರಿನಿಂದ ನಾಲ್ಕು ಬಾರಿ ಶಾಸಕರಾಗಿ ಮತ್ತು ಬಳ್ಳಾರಿ ಗ್ರಾಮಾಂತರ ಕ್ಷೇತ್ರದ 2014ರ ಉಪ ಚುನಾವಣೆ ಯಲ್ಲಿ ಕಾಂಗ್ರೆಸ್ ನಿಂದ ಗೆದ್ದಿದ್ದ ಗೋಪಾಲ ಕೃಷ್ಣ ಅವರಿಗೆ 2018ರಲ್ಲಿ  ಬಳ್ಳಾರಿ ಗ್ರಾಮಿಣ ಇಲ್ಲಾ ಮತ್ತೊಮ್ಮೆ  ಮೊಳಕಾಲ್ಮೂರಿನಿಂದ ಸ್ಪರ್ಧೆ ಮಾಡಲು ಕಾಂಗ್ರೆಸ್ ಟಿಕೆಟ್ ನೀಡದ ಕಾರಣ ಅವರು ಕಾಂಗ್ರೆಸ್ ತೊರೆದು. ಶ್ರೀರಾಮುಲು ಮತ್ತು ಜನಾರ್ದನ ರೆಡ್ಡಿ ಪ್ರಭಾವದಿಂದಾಗಿ ಕೂಡ್ಲಿಗಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ರು. ಜೊತೆಗೆ ಭರ್ಜರಿ ಗೆಲುವು ಸಹ ಸಾಧಿಸಿದ್ದರು.
ಇದೀಗ ವಯಸ್ಸಿನ ಕಾರಣದಿಂದ ಬಿಜೆಪಿಯಲ್ಲಿ  ಮತ್ತೆ ಟಿಕೆಟ್ ಸಿಗೋದು ಕಷ್ಟ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಬಾಗಿಲು ತಟ್ಟುತ್ತಿದ್ದು, ಮೊಳಕಾಲ್ಮೂರಿನಿಂದ ಟಿಕೆಟ್ ಕೇಳ್ತಿದ್ದಾರೆಂದು. ಸದ್ಯ ಕೆಪಿಸಿಸಿ ಸುತ್ತಲೂ ಸುತ್ತುತ್ತಿರೋ ಗೋಪಾಲ ಕೃಷ್ಣ ಬಹುತೇಕ ಕಾಂಗ್ರೆಸ್ ಸೇರ್ಪಡೆ ಪಕ್ಕಾ ಎನ್ನಲಾಗ್ತಿದೆ.