ಕಾಂಗ್ರೆಸ್ ದಶಕಗಳಿಂದ ಭರವಸೆಗಳು ಈಡೇರಿಸುವಲ್ಲಿ ವಿಫಲ

ಕೋಲಾರ,ಮೇ,೪- ಕಾಂಗ್ರೇಸ್ ಗ್ಯಾರೆಂಟಿ ಕಾರ್ಡ್ ಮತ್ತು ಜೆ.ಡಿ.ಎಸ್ ಪಂಚ ರತ್ನದ ಯೋಜನೆ ಭರವಸೆ ನೀಡಿದೆ. ಈ ಹಿಂದೆಯು ಪದೇ ಪದೇ ಚುನಾವಣಾ ಸಂದರ್ಭದಲ್ಲಿ ಅನೇಕ ಭರವಸೆಗಳನ್ನು ನೀಡಿ, ಅಧಿಕಾರಕ್ಕೆ ಬಂದ ಮೇಲೆ ಈಡೇರಿಸುವಲ್ಲಿ ವಿಫಲವಾಗಿದೆ ಸಾರ್ವಜನಿಕರಿಗೆ ವಂಚಿಸುತ್ತಾ ಬರುತ್ತಿದೆ. ಅದೇ ರೀತಿ ಈ ಭಾರಿಯು ಹಲವಾರು ಹುಸಿ ಭರವಸೆಗಳ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಕಾಂಗ್ರೇಸ್ ಪಕ್ಷಕ್ಕೆ ಕಳೆದ ೬೦ ವರ್ಷಗಳಿಂದ ಅಧಿಕಾರ ಅನುಭವಿಸಿ ಭರವಸೆಗಳನ್ನು ಈಢೇರಿಸದೆ ಮತದಾರರ ವಿಶ್ವಾಸಕ್ಕೆ ಅನಾರ್ಹವಾಗಿದೆ ಎಂದು ಲೋಕಸಭಾ ಸದಸ್ಯ ಎಸ್.ಮುನಿಸ್ವಾಮಿ ಅರೋಪಿಸಿದರು,
ನಗರ ಬಿಜೆಪಿ ಕಾರ್ಯಲಯದಲ್ಲಿ ಅಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿ ಅವರು ಮಾತನಾಡಿ ಬಿಜೆಪಿ ಪಕ್ಷವು ನುಡಿದಂತೆ ನಡೆಯುವ ಪಕ್ಷವಾಗಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರದಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳನ್ನು ಮಾಡಿದೆ.
ಇಂದು ಸಹ ಬಿಜೆಪಿ ಪಕ್ಷವು ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ಪಕ್ಷದ ಅಭಿವೃದ್ದಿ ಕಾರ್ಯಗಳು ನೇರವಾಗಿ ಫಲಾನುಭವಿಗಳಿಗೆ ತಲುಪುವ ವ್ಯವಸ್ಥೆ ಮಾಡಿದೆ ಎಂದ ಅವರು ಲಸಿಕೆ, ರೈತ ಸಮ್ಮಾನ್, ವಸತಿ, ಶೌಚಾಲಯ, ನೀರು, ಎಸ್.ಸಿ.ಎಸ್.ಟಿ. ಮೀಸಲಾತಿ, ಕೆಂಪೇಗೌಡ ವಿಮಾನನಿಲ್ದಾಣ, ವಿವಿಧ ಸಮುದಾಯಗಳ ಅಭಿವೃದ್ದಿ ನಿಗಮಗಳ ರಚನೆ ಕೋಟ್ಯಾಂತರ ಅನುದಾನ ಬಿಡುಗಡೆ ಮಾಡಿದೆ ಎಲ್ಲಾ ಸಮುದಾಯಗಳಿಗೂ ಜಾತ್ಯಾತೀತವಾಗಿ ಸಾಮಾಜಿಕ ನ್ಯಾಯ ನೀಡಿದೆ ಎಂದು ವಿವರಿಸಿದರು.
ಪ್ರಶ್ನೆಯೊಂದಕ್ಕೆ ಕಾಂಗ್ರೇಸ್ ಸರ್ಕಾರ ಮಾಡಿದ್ದ ತೈಲೋತ್ಸನ್ನದ ಮೇಲಿನ ೨ ಸಾವಿರ ಕೋಟಿ ಸಾಲವನ್ನು ತೀರಿಸಿದೆ, ಹಲವು ವರ್ಷಗಳ ವಿವಾದದ ರಾಮ ಮಂದಿರ ನಿರ್ಮಾಣ, ೩೭೦ ರದ್ದು, ಮೀಸಲಾತಿ ಹೆಚ್ಚಳಮಾಡಿದೆ ಅವರು ಅವರಿಗೆ ತಾಕತ್ತು ಇದ್ದರೆ ಆರ್.ಎಸ್.ಎಸ್. ಭಜರಂಗದಳ ರದ್ದುಗೊಳಿಸಲಿ ಎಂದು ಸವಾಲ್ ಹಾಕಿದ ಅವರು ನಾವು ಪಿ.ಎಫ್.ಊ ರದ್ದು ಗೊಳಿಸಿದ್ದೇವೆ ಎಂದು ಪ್ರತಿ ಪಾದಿಸಿದರು,
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ. ವೇಣುಗೋಪಾಲ್ ರೆಡ್ಡಿ, ಜಿಲ್ಲಾ ವಕ್ತಾರ ಎಸ್.ಬಿ.ಮುನಿವೆಂಕಟಪ್ಪ, ಜಿಲ್ಲಾ ಚುನಾವಣಾ ಪ್ರಣಾಳಿಕೆ ಉಸ್ತುವಾರಿ ಸಾಯಿ ಲೋಕೇಶ್, ಜಿಲ್ಲಾ ಕೋಆರ್ಡಿನೇಟರ್ ಚಂದ್ರಪ್ಪ, ಜಿಲ್ಲಾ ವಿಸ್ತಾರ ನಿರ್ಮಾಲಮ್ಮ,ಜಿಲ್ಲಾ ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ, ಜಿಲ್ಲಾ ಮಾಧ್ಯಮ್ ಪ್ರಮುಖ್ ಕೆಂಬೋಡಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು,