ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಮುಖಂಡರು.

ಸಂಜೆವಾಣಿ ವಾರ್ತೆ

ದಾವಣಗೆರೆ.ಏ.೧೪; ಮಾಯಕೊಂಡ ಕ್ಷೇತ್ರದ ಗೊಲ್ಲರಹಳ್ಳಿ ಗ್ರಾಮದಲ್ಲಿ  ಕೆಲ ಕಾಂಗ್ರೆಸ್ ಮುಖಂಡರು ಬಿಜೆಪಿ ರಾಜ್ಯ ಯುವ  ಮೋರ್ಚಾ ಉಪಾಧ್ಯಕ್ಷ ಜಿ.ಎಸ್ ಶ್ಯಾಮ್  ನೇತೃತ್ವದಲ್ಲಿ  ಬಿಜೆಪಿಗೆ ಸೇರ್ಪಡೆಯಾದರು.ಈ ವೇಳೆ ಮಾತನಾಡಿದ ಹೇಮಣ್ಣ, ಬಹಳ ವರ್ಷ ಕಾಲ ಕಾಂಗ್ರೆಸ್ ನಲ್ಲಿ ನಿಷ್ಠೆಯಿಂದ ದುಡಿದವು, ಆದರೆ ಎಸ್ ಎಸ್ಟಿ ಸಮಾಜದವರಿಗೆ ಯಾವುದೇ ಅನುಕೂಲ ಮಾಡಿಕೊಡಲಿಲ್ಲ, ಕೇವಲ ಮತಕ್ಕೆ ಮಾತ್ರ ಸೀಮಿತ ಮಾಡಿದರು. ಇದರಿಂದ ಬೇಸತ್ತು ಬಿಜೆಪಿ ಸೇರ್ಪಡೆಗೊಂಡಿದ್ದೇವೆ ಎಂದರು.ಡಾ.ಬಿ.ಆರ್. ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಬಿಜೆಪಿ ಸೇರಿದರು.ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ,ಸಂಸದ ಜಿ.ಎಂ.ಸಿದ್ಧೇಶ್ವರ್, ಮಾಜಿ ಸಚಿವ ಎಸ್ ರಂದ್ರನಾಥ್, ಮಾಜಿ ಶಾಸಕ ಪೊ. ಲಿಂಗಣ್ಣ, ಬಸವರಾಜ್ ನಾಯಕ್, ಹನುಮಂತ ನಾಯಕ ಸೇರಿದಂತೆ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ಜಿ ಹೇಮಣ್ಣ, ರಾಜು, ಬಸವರಾಜು, ಚಂದ್ರಪ್ಪ, ರಮೇಶ್, ಗೋವಿಂದ್, ಶೇಖರಪ್ಪ, ತಿಮ್ಮಣ್ಣ, ನಾಗೇಂದ್ರಪ್ಪ, ಗಣೇಶ್, ದೊಡ್ಮನೆ ವೆಂಕಟೇಶ್, ದೊಡ್ಡಹಟ್ಟಿ ತಿಮ್ಮಣ್ಣ, ನಂಜುಂಡಿ, ಗಂಗಪ್ಪ, ಮೂರ್ತಿಪ್ಪ, ಶೇಖರಪ್ಪ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.