ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆ 

ದಾವಣಗೆರೆ.ಏ.೨೩ : ಉತ್ತರ ವಿಧಾನಸಭಾ ಕ್ಷೇತ್ರದ ಇತರೆ ಪಕ್ಷದ ಯುವಕರು, ಮುಖಂಡರು, ಪ್ರಮುಖರು ತಮ್ಮ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡು ಕಮಲ ಅರಳಿಸಲು ಮತ್ತು ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ನಾಗರಾಜ್ ಲೋಕಿಕೆರೆ ಅವರ ಗೆಲುವಿಗೆ ಬೆಂಬಲವಾಗಿ ನಿಂತಿದ್ದಾರೆ.ಅಂತೆಯೇ ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಡಜ್ಜಿ ಗ್ರಾಮದ ಬೋವಿ ಕಟ್ಟೆಯಲ್ಲಿ ಕಾಡಜ್ಜಿ ಶಕ್ತಿ ಕೇಂದ್ರದ ಪ್ರಮುಖರಾದ ಬಿ.ವಿ. ಬಸವರಾಜ್ ಅವರ ಮುಖಂಡತ್ವದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಕೆ.ಸಿ. ನಾಗರಾಜ್, ಕಾಡಜ್ಜಿ ಗ್ರಾಮದ  ತಿಮೇಶ್, ಈಶ, ರಾಜಣ್ಣ, ವೀರೇಶ್, ಹನುಮಂತು, ಆಟೋರಾಜು, ಸಂತೋಷ್, ಮಂಜುನಾಥ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಯಾಗಿ ನಾಗರಾಜ್ ಲೋಕಿಕೆರೆ ಅವರನ್ನು ಬೆಂಬಲಿಸಿದ್ದಾರೆ.