ಕಾಂಗ್ರೆಸ್ ತೊರೆದವರನ್ನು ವಾಪಸ್ ತರ್ತೀವಿ: ಶ್ರೀಧರ್ ಬಾಬು

ಕಲಬುರಗಿ: ಆ.6:ಸಣ್ಣಪುಟ್ಟ ಭಿನ್ನಾಭಿಪ್ರಾಯದ ಕಾರಣಕ್ಕಾಗಿ ಪಕ್ಷ ತೊರೆದು ಹೋಗಿರುವ ಎಲ್ಲರನ್ನೂ ಪುನಃ ಕಾಂಗ್ರೆಸ್ ಪಕ್ಷಕ್ಕೆ ಆಮಂತ್ರಿಸಲಾಗುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ
ಕಲ್ಯಾಣ ಕರ್ನಾಟಕದ ಎಐಸಿಸಿ ಉಸ್ತುವಾರಿ ಶ್ರೀಧರ್ ಬಾಬು ಹೇಳಿದರು.
ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗದಲ್ಲಿ ಪಕ್ಷವನ್ನು ಸದೃಢವಾಗಿ ಬೆಳೆಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಹಿರಿಯ ನಾಯಕರು ಜೊತೆಯಾಗಿ ಮುಂದಿನ ಚುನಾವಣೆ ಎದುರಿಸುತ್ತೇವೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೂತ್ ಸಮಿತಿ, ಗ್ರಾಮ ಪಂಚಾಯತಿ ಸಮಿತಿ, ತಾಲೂಕು ಸಮಿತಿ ಹಂತದಲ್ಲಿ ಸದೃಢವಾಗಿ ಸಂಘಟಿಸುವಂತೆ ಜಿಲ್ಲೆಯ ಎಲ್ಲ ಕಾಂಗ್ರೆಸ್ ನಾಯಕರಿಗೆ ಈಗಾಗಲೇ ಕಿವಿಮಾತು ಹೇಳಲಾಗಿದೆ ಎಂದರು.

ಹಿರಿಯ ನಾಯಕರ ಸಹಕಾರದಿಂದ, ಪಕ್ಷದ ಕಾರ್ಯಕರ್ತರ ಬಲದಿಂದ ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಗೆಲ್ಲುವ ಭರವಸೆ ನಮಗಿದೆ ಎಂದ ಶ್ರೀಧರ್ ಬಾಬು, ಬೆಂಗಳೂರಿನಲ್ಲಿ ಆಗಸ್ಟ್ 15 ರಂದು ನಡೆಯುವ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪ್ರಿಯಾಂಕಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಭಾಗವಹಿಸಲಿದ್ದಾರೆ. 75ನೇ ವಾರ್ಷಿಕೋತ್ಸವವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ 50 ಸಾವಿರ ಜನರು ಅಂದು ನಡೆಯುವ ರ???ಲಿಯಲ್ಲಿ ಭಾಗವಹಿಸಲು ತಮ್ಮ ಹೆಸರು ನೊಂದಾಯಿಸಿದ್ದಾರೆ. ಕಾಂಗ್ರೆಸ್ ಪಕ್ಷ ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದೆ. ಯಾರಿಗೆ ಈ ದೇಶದ ಧ್ವಜದ ಮೇಲೆ ನಂಬಿಕೆ ಇರಲಿಲ್ಲವೋ ಅವರು ಈಗ ಹರ್ ಘರ್ ತಿರಂಗಾ ಹೆಸರಿನಲ್ಲಿ ಟೊಳ್ಳು ದೇಶಪ್ರೇಮ ಪ್ರದರ್ಶನ ಮಾಡುತ್ತಿದ್ದಾರೆ. ಇದೇ ಆರ್ ಎಸ್ ಎಸ್ 2003ರವರೆಗೆ ತನ್ನ ಕಚೇರಿಯ ಮೇಲೆ ರಾಷ್ಟ್ರ ಧ್ವಜ ಹಾರಿಸಿರಲಿಲ್ಲ. ಆರ್ ಎಸ್ ಎಸ್ ಚಿಂತನೆಯ ಮೇಲೆ ನಂಬಿಕೆ ಇರುವ ಬಿಜೆಪಿ ಸ್ವಾತಂತ್ರ್ಯ ಕ್ಕಾಗಿ ಏನು ಮಾಡಿದೆ ಎಂದು ಶ್ರೀಧರ್ ಬಾಬು ಪ್ರಶ್ನಿಸಿದರು.


ತನಿಖಾ ಸಂಸ್ಥೆಗಳ ದುರ್ಬಳಕೆ

ನರೇಂದ್ರ ಮೋದಿ ಸರ್ಕಾರ ತನಿಖಾ ಸಂಸ್ಥೆಗಳನ್ನು ಹಾಗೂ ಇತರ ಸಾಂವಿಧಾನಿಕ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧ ಪಕ್ಷದ ಶಕ್ತಿ ಕುಗ್ಗಿಸಲು ಪ್ರಯತ್ನಿಸುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಬೇಸರ ವ್ಯಕ್ತಪಡಿಸಿದರು.
ದಿನಬಳಕೆ ವಸ್ತುಗಳ ಮೇಲೆ ಜಿ.ಎಸ್.ಟಿ ಹೇರುವ ಮೂಲಕ ಕೇಂದ್ರ ಸರ್ಕಾರ ತಾನು ಜನಪರ ಅಲ್ಲ ಎಂಬುದನ್ನು ಸಾಬೀತುಪಡಿಸಿದೆ.
ಸಿಲಿಂಡರ್, ಪೆಟ್ರೋಲ್-ಡೀಸೆಲ್ ಹಾಗೂ ಡಿಎಪಿ ಬೆಲೆ ಗಗನಕ್ಕೇರಿವೆ. ಸಾಮಾನ್ಯ ಜನ ಬಳಕೆ ವಸ್ತುಗಳ ಮೇಲೆ ಶೇಕಡ 18ರಷ್ಟು ಜಿ.ಎಸ್.ಟಿ ವಿಧಿಸಿದ್ದು ಕಾಪೆರ್Çೀರೇಟ್ ವಲಯದ ಮೇಲೆ ವಿಧಿಸುತ್ತಿದ್ದ ತೆರಿಗೆಯನ್ನು ಶೇಕಡ 30ರಿಂದ ಶೇ.20ಕ್ಕೆ ಕಡಿತಗೊಳಿಸಲಾಗಿದೆ ಎಂದು ಶರಣಪ್ರಕಾಶ್ ಅಚ್ಚರಿ ವ್ಯಕ್ತಪಡಿಸಿದರು.

ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರನ್ನು ಬೆದರಿಸುವ ತಂತ್ರವಾಗಿ ಸೋನಿಯಾಗಾಂಧಿ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರನ್ನು ಇ.ಡಿ.ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ವಿರೋಧಿ ಧೋರಣೆ ಎಂದರು.

ದೇಶದ ಸ್ವಾತಂತ್ರ್ಯಕ್ಕೆ ನ್ಯಾಷನಲ್ ಹೆರಾಲ್ಡ್ ಕೊಡುಗೆ ಮಹತ್ವದ್ದಾಗಿದೆ. ಅದು ನಶಿಸುವ ಹಂತ ತಲುಪಿದಾಗ ಲಾಭರಹಿತ ಕಂಪನಿ ಕಾಯ್ದೆ ಅಡಿಯಲ್ಲಿ ಪತ್ರಿಕೆಯನ್ನು ನಡೆಸಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್ 90 ಕೋಟಿ ಸಾಲ ಕೊಟ್ಟಿದೆ. ಇದನ್ನು ಸಿಬ್ಬಂದಿಗಳ ವೇತನ, ಕರೆಂಟ್ ಬಿಲ್ ಹಾಗೂ ಇತರೆ ಖರ್ಚುಗಳಿಗೆ ಬಳಸಲಾಗಿದೆ. ಈ ಕುರಿತು ಬಿಜೆಪಿ ಸರ್ಕಾರ ಏಳು ವರ್ಷದಿಂದ ಯಾವುದೇ ಎಫ್ ಐ ಆರ್ ದಾಖಲಿಸದೆ ಈಗ ಪದೇಪದೆ ಕಾಂಗ್ರೆಸ್ ಪಕ್ಷದ ಸರ್ವೋಚ್ಚ ನಾಯಕರನ್ನು ವಿಚಾರಣೆಗೆ ಕರೆದು ಜನರ ದೃಷ್ಟಿಯಲ್ಲಿ ಕಾಂಗ್ರೆಸ್ ತಪ್ಪೆಸೆಗಿದೆ ಎನ್ನುವ ರೀತಿ ಬಿಂಬಿಸಲಾಗುತ್ತಿದೆ. ಇದಕ್ಕೆ ಕಾಂಗ್ರೆಸ್ ಹೆದರುವುದಿಲ್ಲ ಎಂದು ನುಡಿದರು.