ಕಾಂಗ್ರೆಸ್ ಡಿ.ಎಸ್ ಹೂಲಿಗೇರಿ ಗೆದ್ದರೆ ಬಂದರೆ ಮಾತ್ರ ಬಡವರ ಏಳಿಗೆ ಸಾಧ್ಯ- : ಸಂಗಮೇಶ ಸರಗಣಚಾರಿ

ಮುದಗಲ್,ಮೇ.೦೧-ದೇಶಕ್ಕೆ ಬಿಜೆಪಿ ಕೊಡುಗೆ ಶೂನ್ಯ. ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಾತ್ರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರೈತರ, ಮಹಿಳೆಯರ ರಕ್ಷಣೆ ಸೇರಿ ಸರ್ವ ಜನಾಂಗದ ಐಕ್ಯತೆ ಹಾಗೂ ಬಡವರ ಏಳಿಗೆ ಸಾಧ್ಯ ಎಂದು ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾದ ಸಂಗಮೇಶ ಸರಗಣಚಾರಿ ಪ್ರಚಾರ ದಲ್ಲಿ ಹೇಳಿದರು.
ಯುವ ಕಾಂಗ್ರೆಸ್ ಮುದಗಲ್ಲ ಘಟಕದ ವತಿಯಿಂದ ರಾಜು ಹುಲಗೇರಿ ಅವರ ನೇತೃತ್ವದಲ್ಲಿ ಮುದಗಲ್ಲ ವಾರ್ಡ್ ನಂಬರ್ ೬ ,೭,೮ ನೇ ವಾಡ೯ ನಲ್ಲಿ ಕಾಂಗ್ರೆಸ್ ಅಬ್ಬರದ ಪ್ರಚಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹುಸೇನ್ ಪಾಶ ಮುನ್ನ. ಕಾರ್ಯಾಧ್ಯಕ್ಷರಾದ ಸಂಗಮೇಶ ಸರಗಣಚಾರಿ , ಹುಸೇನ್ ಅಲಿ ಮಕಂದರ್, ದ್ಯಾಮಣ್ಣ, ಹನುಮಂತ ನಾಯಕ್ ಮಹಮದ್ ಕೋರಿ ಮೌನೇಶ್ ಚಲವಾದಿ ಹುಲಗಪ್ಪ ಚಲವಾದಿ ಮೌಲ ಜಂಗ್ಲಿ ಫರೀದ್ ಹಾಸನ್ ತಂಬಕ್ ರಫಿ ಉಸ್ತಾದ್ ಉಸ್ಮಾನ್ ಬಗ್ವನ್ ಇನ್ನಿತರರು ಇದ್ದರು.