
ಲಿಂಗಸುಗೂರ,ಏ.೦೩- ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಎಚ್.ಬಿ ಮುರಾರಿ ಇವರಿಗೆ ಕಾಂಗ್ರೆಸ್ ಪಕ್ಷದ ಟಿಕೆಟ್ ನೀಡಲು ಆಗ್ರಹಿಸಿ ದಲಿತ ಪ್ರಗತಿಪರ ಸಂಘಟನೆಗಳು ಬೃಹತ್ ಕಾಲ್ನಡಿಗೆ ಜಾಥಾ ಮೂಲಕ ಇಂದು ಪಟ್ಟಣದ ದೊಡ್ಡ ಹನುಮಂತ ದೇವರ ದೇವಸ್ಥಾನದಿಂದ ಪ್ರಾರಂಭಿಸಿ ನಗರದ ವಿವಿಧ ರಸ್ತೆಗಳ ಮೂಲಕ ಕಾಲ್ನಡಿಗೆ ಜಾಥಾ ಮುಖಾಂತರ ರಾಜ್ಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹಾಕಿ ಒತ್ತಾಯ ಮಾಡಿದರು.
ಸ್ಥಳೀಯ ಅಸ್ಪೃಶ್ಯರಿಗೆ ಎಡಗೈ ಸಮುದಾಯಕ್ಕೆ ಸೇರಿದ ಎಚ್.ಬಿ ಮುರಾರಿ ಇವರು ಕಾಂಗ್ರೆಸ್ ಪಕ್ಷಕ್ಕೆ ದುಡಿದು ಪಕ್ಷ ಸಂಘಟನೆಗೆ ಹೆಚ್ಚಿನ ಆದ್ಯತೆ ನೀಡುವ ಮುಖಾಂತರ ಬಲಿಷ್ಟವಾದ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಸಾಮಾಜಿಕ ಕೇಲಸ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಕ್ಷೇತ್ರದಲ್ಲಿ ಮಾದಿಗ ಸಮುದಾಯ ಜನಸಂಖ್ಯೆ ೪೫ ಸಾವಿರ ಜನಸಂಖ್ಯೆ ಹೊಂದಿರುವ ಸಮಾಜಕ್ಕೆ ಟಿಕೆಟ್ ನೀಡಿ ವಂಚಿತವಾಗಿರುವ ಸಮಾಜಕ್ಕೆ ರಾಜಕೀಯ ನ್ಯಾಯ ಕೊಡಲು ಹೈಕಮಾಂಡ್ ಮುಂದಾಗಬೇಕು ಎಂದು ದಲಿತ ಮುಖಂಡ ಮಾಹಾದೇವಪ್ಪ ಪರಾಂಪುರ ಇವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಟಿಕೆಟ್ ನೀಡಬೇಕಾದರೆ ಸ್ಥಳೀಯ ಅಸ್ಪುಶ್ಯರಿಗೆ ಎಡಗೈ ಸಮುದಾಯದ ನಾಯಕ ಎಚ್.ಬಿ. ಮುರಾರಿ ಇವರಿಗೆ ಟಿಕೆಟ್ ನೀಡಲು ಹೈಕಮಾಂಡ್ ಮುಂದಾಗಬೇಕು ಎಂಬುದು ಸಮುದಾಯದ ಮುಖಂಡರ ಆಗ್ರಹವಾಗಿದೆ.
ಎಚ್.ಬಿ. ಮುರಾರಿ ಸರಳ ಸಜ್ಜನಿಕೆಯ ಸಾಕಾರ ವ್ಯಕ್ತಿತ್ವ ಹೊಂದಿರುವ ವ್ಯಕ್ತಿ ಹಾಗೂ ಬಹುಜನರ ಹಿತ ಕಾಪಾಡಲು ದೂರ ದೃಷ್ಟಿ ಉಳ್ಳ ನಾಯಕ ಎಚ್.ಬಿ. ಮುರಾರಿ ಇವರಿಗೆ ಕಾಂಗ್ರೆಸ್ ಪಕ್ಷವು ಸಾಮಾಜಿಕ ನ್ಯಾಯದಡಿಯಲ್ಲಿ ಟಿಕೆಟ್ ನೀಡಬೇಕು ಎಂದು ಮುಸ್ಲಿಂ ಸಮುದಾಯದ ಮುಖಂಡರಾದ ಜೆ.ಬಾಬು ಹಟ್ಟಿ ಇವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರಿಗೆ ಆಗ್ರಹಿಸಿದ್ದಾರೆ.
ಲಿಂಗಸುಗೂರ ಮೀಸಲು ಕ್ಷೇತ್ರದಲ್ಲಿ ರಾಜಕೀಯವಾಗಿ ಹಿಂದುಳಿದ ಸಮಾಜವಾದ ಮಾದಿಗ ಸಮುದಾಯ ಎಂದರೆ ತಪ್ಪಾಗಲಾರದು ಅದಕ್ಕಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವಹಿಸಿರುವ ಸುರ್ಜೆವಾಲ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಡಾ.ಜಿ. ಪರಮೇಶ್ವರ್ ಸಮನ್ವಯ ಸಮಿತಿ ಅಧ್ಯಕ್ಷರು ಲಿಂಗಸುಗೂರು ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಪರಿಶಿಷ್ಟ ಜಾತಿ ಎಡಗೈ ಜನಾಂಗದ ನಾಯಕ ಎಚ್.ಬಿ. ಮುರಾರಿ ಇವರಿಗೆ ಟಿಕೆಟ್ ಕೊಡಬೇಕು ಎಂದು ಯಂಕಪ್ಪ ಚಿತ್ತಾಪುರ ನಾಗರಾಜ್ ತಿಪ್ಪಣ್ಣ ರಾಮನಗೌಡ ವ್ಯಾಕರನಾಳ ಮೋಕ್ಷಮ್ಮ ಯಲ್ಲಮ್ಮ ಹುಲಿಗೆಮ್ಮ ನಾಗಪ್ಪ ಈಚನಾಳ ನೂರ್ ಮುಹಮ್ಮದ್ ಮಸ್ಕಿ ಮುರಾರ್ಜಿ ಕಾಲೆಗಾರ ಕನಕಪ್ಪ ಕಾಚಾಪುರ ಇವರು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮೇಲೆ ಒತ್ತಡ ಹಾಕಿ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯಬೇಕು ಎಂದು ಈ ಕಾಲ್ನಡಿಗೆ ಜಾಥಾ ಮೂಲಕ ರಾಜ್ಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್‌ಗೆ ಆಗ್ರಹಿಸಿದ್ದಾರೆ.
ಹೋರಾಟಗಾರರ ಬೇಡಿಕೆ ಸ್ಥಳೀಯ ಮಾದಿಗ ಸಮುದಾಯಕ್ಕೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೀನಾ ಮೇಷ ಮಾಡದೆ ಎಚ್.ಬಿ. ಮುರಾರಿ ನಾಯಕರಿಗೆ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಹಂಚಿಕೆ ಮಾಡಬೇಕು ಎಂಬುದು ಮಾದಿಗರ ಜನಶಕ್ತಿ ಕೂಗು ಆಗಿದೆ.
ಲಿಂಗಸುಗೂರ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಚುನಾವಣೆಯಲ್ಲಿ ಸಂವಿಧಾನದ ಪ್ರಕಾರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಅಧಿಕಾರ ಹಿಡಿಯಲು ಮೂಲ ಅಸ್ಪುಶ್ಯರಿಗೆ ಸ್ಥಳೀಯ ಎಡಗೈ ಸಮುದಾಯಕ್ಕೆ ಟಿಕೆಟ್ ಪ್ರಾತಿನಿದ್ಯ ನೀಡಬೇಕು ಎಂಬುದು ಜನರ ಬಯಕೆಯಾಗಿದೆ.
ಇಂದು ನಡೆಯುತ್ತಿರುವ ಬೃಹತ್ ಕಾಲ್ನಡಿಗೆ ಜಾಥಾ ರಾಜ್ಯ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ನಾಯಕರಿಗೆ ಕಣ್ಣು ತೆರೆಸುವ ಬೃಹತ್ ಕಾಲ್ನಡಿಗೆ ಜಾಥಾ ವಾಗಿದೆ ನಿಮ್ಮ ಕಾಲ್ನಡಿಗೆ ಜಾಥಾಕ್ಕೆ ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷವು ಟಿಕೆಟ್ ಹಂಚಿಕೆ ಮಾಡಬೇಕು ಎಂಬುದು ಪ್ರಗತಿಪರ ಸಂಘಟನೆಗಳು ಆಗ್ರಹವಾಗಿದೆ.
ಒಂದು ವೇಳೆ ಕಾಂಗ್ರೆಸ್ ಪಕ್ಷವು ಟಿಕೆಟ್ ಹಂಚಿಕೆಯಲ್ಲಿ ತಾರತಮ್ಯ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಸಮುದಾಯದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಪ್ರಗತಿಪರ ಸಂಘಟನೆಗಳು ಸೇರಿಸಿ ಕಾಂಗ್ರೆಸ್ ಪಕ್ಷದ ವಿರುದ್ಧ ತೀರ್ಮಾನ ತೆಗೆದುಕೊಳ್ಳುವ ತಕ್ಕ ಪಾಠ ಕಲಿಸಲು ಮುಂದಾಗಬೇಕಾಗುತ್ತದೆ ಎಂದು ಶರಣಪ್ಪ ಕಟ್ಟಿಮನಿ ಮುದಗಲ್ ಬಸವರಾಜ ಬಂಕದಮನಿ ಹನುಮಂತ ಜಾಲಿಬೆಂಚಿ ಹನುಮಂತ ಶೀಲಹಳ್ಳಿ ಬಸವರಾಜ ಹೊಸಮನಿ ದೇವಪ್ಪ ಕರಡಕಲ್ ಮೋಹನ್ ಗೋಸಲೆ ಸಿದ್ದು ಮುರಾರಿ ಪ್ರದೀಪ್ ಮುತ್ತು ಅನಿಲ್ ಮುದ್ಬಾಳ ದುರ್ಗಾರಾಜ ವಟಗಲ್ ಸೇರಿದಂತೆ ನೂರಾರು ಕಾರ್ಯಕರ್ತರು ಮುಖಂಡರು ಅಭಿಮಾನಿಗಳು ಬೃಹತ್ ಕಾಲ್ನಡಿಗೆ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.