ಕಾಂಗ್ರೆಸ್ ಟಿಕೆಟ್ ಕೊಡದಿದ್ದರೆ ನನ್ನ ದಾರಿ ಬೇರೆ – ಕರಿಯಪ್ಪ

ಚಿದಾನಂದ ದೊರೆ
ಸಿಂಧನೂರು,ನ.೨೫-೨೦೨೩ ರ ವಿಧಾನ ಸಭೆ ಚುನಾವಣೆಯ ಟಿಕೆಟಿಗಾಗಿ ತಾಲೂಕಿನ ಕಾಂಗ್ರೆಸ್ ಪಕ್ಷದಲ್ಲಿ ರಾಜಕೀಯ ಗುದ್ದಾಟ ಜೋರಾಗಿ ನಡೆದಿದ್ದು ಈ ಸಲ ಟಿಕೇಟ್ ನನಗಾ ಇಲ್ಲ ನಿನಗಾ ನೋಡೋಣ ಎನ್ನುವ ತಾಕತ್ತುನ್ನು ಮುಖಂಡರು ತೋರಿಸುವ ಹರಸಾಹಸ ಮಾಡುತ್ತಿದ್ದಾರೆ.
ಮುಂಬರುವ ವಿಧಾನ ಸಭೆಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ತಾಲೂಕಿನಲ್ಲಿ ಸ್ಪರ್ಧೆ ಮಾಡಲು ಭಯಸಿ ಟಿಕೆಟ್‌ಗಾಗಿ ಅರ್ಜಿಯನ್ನು ಹಾಕಿದ್ದು ಕಾಂಗ್ರೆಸ್ ಪಕ್ಷ ನನಗೆ ಟಿಕೇಟ್ ನೀಡುವ ಆಶಾಭಾವನೆಯನ್ನು ಹೊಂದಿರುವೆ ಎಂದು ಕೆಪಿಸಿಸಿ ಮಾಜಿ ಕಾರ್ಯ ದರ್ಶಿಯಾದ ಕೆ.ಕರಿಯಪ್ಪ ಹೇಳಿದರು.
ತಾಲೂಕಿನ ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್‌ಗಾಗಿ ಬಾರಿ ಸುದ್ದಿ ಯಾಗುತ್ತಿರುವ ಹಿನ್ನೆಲೆಯಲ್ಲಿ ಕೆ.ಕರಿಯಪ್ಪ ಅವರನ್ನು ಮಾತನಾಡಿಸಿದಾಗ ಅವರು ತಮ್ಮ ಮನದಾಳದ ಮಾತನ್ನು ಪತ್ರಿಕೆಯ ಜೊತೆ ಹಂಚಿ ಕೊಂಡು ಮಾತನಾಡಿದ ಅವರು ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ.
೨೦೨೩ ರ ವಿಧಾನ ಸಭೆಯ ಚುನಾವಣೆಯಲ್ಲಿ ಪಕ್ಷ ನನಗೆ ಟಿಕೇಟ್ ನೀಡುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ ಟಿಕೆಟ್ ಕೊಟ್ಟರೆ ಗೆಲ್ಲುವುದು ಗ್ಯಾರಂಟಿ ಎಂದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ೪೧ ವಿಧಾನ ಸಭಾ ಕ್ಷೇತ್ರಗಳಲ್ಲಿ ಪ.ಜಾತಿ ಪ.ಪಂಗಡ ಸೇರಿದಂತೆ ೧೪ ಕ್ಷೇತ್ರಗಳಲ್ಲಿ ಸಾಮಾನ್ಯ ವರ್ಗದವರಿಗೆ ಟಿಕೇಟ್ ನೀಡಿದ್ದು ಕುರಬ ಸಮಾಜದ ನನಗೆ ಸಿಂಧನೂರಿನಲ್ಲಿ ಈ ಸಲ ಪಕ್ಷ ಟಿಕೆಟ್ ನೀಡುವ ಮೂಲಕ ಸಾಮಾಜಿಕ ನ್ಯಾಯ ಒದಗಿಸಬೇಕು ಮಸ್ಕಿ ವಿಧಾನ ಸಭೆಯ ಉಪ ಚುನಾವಣೆಯಲ್ಲಿ ಸಮಾಜದ ಮತಗಳು ಬಿಜೆಪಿಗೆ ಹೋಗದಂತೆ ತಡೆದು ಪಕ್ಷದ ಅಭ್ಯರ್ಥಿ ಶಾಸಕ ಬಸನಗೌಡ ತುರ್ವಿಹಾಳ ಗೆಲುವಿಗೆ ಶ್ರಮಸಿದ್ದೇನೆ ಎಂದರು.
ನನ್ನ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಈ ಸಲ ಚುನಾವಣೆಯಲ್ಲಿ ನಿಲ್ಲಬೇಕು ಎಂದು ಬಾರಿ ಒತ್ತಡ ಹಾಕಿ ಚುನಾವಣೆಯನ್ನು ಎದುರಿಸಲು ಈಗಾಗಲೆ ಸಿದ್ಧತೆಯನ್ನು ಸಹ ಮಾಡಿಕೊಂಡಿದ್ದಾರೆ. ನನಗೆ ಪಕ್ಷ ಟಿಕೆಟ್ ನೀಡಿದರೆ ಸ್ವಾಗತ ಇಲ್ಲದಿದ್ದರೆ. ಅವರ ಜೊತೆ ಚರ್ಚಿಸುವ ಮೂಲಕ ಅವರ ತೀರ್ಮಾನಕ್ಕೆ ನಾನು ತಲೆ ಬಾಗಿ ನಾನು ಮುಂದಿನ ತೀರ್ಮಾನ ತೆಗೆದುಕೊಳ್ಳುವುದು ಬಿಟ್ಟರೆ ನನಗೆ ಬೇರೆ ದಾರಿ ಇಲ್ಲ ಎಂದರು.
ಹಿಂದೆ ಹಲವಾರು ಜನರನ್ನು ಗೆಲ್ಲಿಸಿ ಅವರ ಕೆಲಸ ಕಾರ್ಯಗಳನ್ನು ಜನ ನೊಡಿದ್ದು, ಈ ಸಲ ನನಗೊಂದು ಅವಕಾಶ ನೀಡಿ ನನಗೆ ಮತ ನೀಡಿ ನಿಮ್ಮ ಸೇವೆ ಮಾಡಲು ಅವಕಾಶ ಕೊಡುವಂತೆ ಕ್ಷೇತ್ರದ ಮತದಾರರಲ್ಲಿ ಕೈಮುಗಿದು ಬೇಡಿ ಕೊಳ್ಳುತ್ತೇನೆ. ಅಲ್ಲದೆ ನಾನು ಒಂದು ಜಾತಿಗೆ ಸೀಮಿತ ವಾಗದೆ. ದಲಿತ ಹಿಂದುಳಿದ ಅಲ್ಪಸಂಖ್ಯಾತರು ಸೇರಿದಂತೆ ಎಲ್ಲಾ ವರ್ಗಗಳ ಜನರ ಜೊತೆ ಉತ್ತಮ ಒಡ ನಾಟ ಇಟ್ಟುಕೊಂಡಿದ್ದೇನೆ. ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸುವ ಭರವಸೆಯನ್ನು ನೀಡಿದ್ದಾರೆ. ಪಕ್ಷದ ಅಧ್ಯಕ್ಷರಾದ ಡಿ.ಕೆ ಶಿವಕುಮಾರ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹಾಗೂ ಪಕ್ಷದ ಹಿರಿಯ ಮುಖಂಡರಿಗೆ ನನಗೆ ಟಿಕೆಟ್ ನೀಡುವಂತೆ ಮನವಿ ಮಾಡಿಕೊಂಡಿರುವೆ ಎಂದು ಅವರು ಪತ್ರಿಕೆಗೆ ತಿಳಿಸಿದರು.